ಹಿಮಾಲಯದಲ್ಲಿ ಧ್ಯಾನ ಕೇಂದ್ರ ಸ್ಥಾಪಿಸಿದ ಸೂಪರ್ ಸ್ಟಾರ್ ಅಂಡ್ ಫ್ರೆಂಡ್ಸ್

ನವದೆಹಲಿ, ಗುರುವಾರ, 26 ಅಕ್ಟೋಬರ್ 2017 (15:03 IST)

ನವದೆಹಲಿ: ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಹಾಗೂ ಅವರ ಸ್ನೇಹಿತರು ಹಿಮಾಲಯದಲ್ಲಿ ಸ್ಥಾಪಿಸಿದ್ದಾರೆ ಎಂದು ತಿಳಿದು ಬಂದಿದೆ.


ಭಾರತೀಯ ಯೋಗದ ಸತ್ಸಂಗ ಸೊಸೈಟಿಯ ಶತಮಾನೋತ್ಸವ ಅಂಗವಾಗಿ ರಜನಿ ಹಾಗೂ ಅವರ ಗೆಳೆಯರು ಹಿಮಾಲಯದಲ್ಲಿ ಧ್ಯಾನ ಕೇಂದ್ರ ನಿರ್ಮಿಸಿದ್ದಾರೆ. ಉತ್ತರಾಖಂಡ್‌ನ ದ್ರೋಣಗಿರಿ ಪರ್ವತದಲ್ಲಿ ಧ್ಯಾನ ಕೇಂದ್ರ ಸ್ಥಾಪಿಸಲಾಗಿದೆ. ನವೆಂಬರ್‌ 10ರಂದು ಧ್ಯಾನ ಕೇಂದ್ರ ಲೋಕಾರ್ಪಣೆಯಾಗಲಿದೆ.

ಆಧ್ಯಾತ್ಮದಲ್ಲಿ ನಂಬಿಕೆ ಹೊಂದಿರುವ ಸೂಪರ್‌ ಸ್ಟಾರ್‌ ರಜನಿ ಹಾಗೂ ಅವರ ಸ್ನೇಹಿತರ ಬಳಗ, ಹಿಮಾಲಯದಲ್ಲಿ ಶ್ರೀಗುರು ಮಹಾವತಾರ ಬಾಬಾ ನೆಲೆಸಿದ್ದಾರೆ ಎಂದು ಹಿಮಾಲಯದ ಗುಹೆಗೆ ದಶಕದಿಂದಲೂ ಭೇಟಿ ನೀಡುತ್ತಿದ್ದಾರೆ. ರಜನಿಕಾಂತ್‌ ಹಾಗೂ ಗೆಳೆಯರಾದ ಬೆಂಗಳೂರಿನ ಉದ್ಯಮಿ ಹರಿ, ದೆಹಲಿಯ ವಿ.ಡಿ.ಮೂರ್ತಿ, ಶ್ರೀಧರ್‌ ಹಾಗೂ ಚೆನ್ನೈನ ವಿಶ್ವನಾಥನ್‌ ಸೇರಿಕೊಂಡು ಈ ಧ್ಯಾನ ಕೇಂದ್ರ ಸ್ಥಾಪಿಸಿದ್ದಾರೆ.

ಭಾರತೀಯ ಯೋಗದ ಸತ್ಸಂಗ ಸೊಸೈಟಿಯ ಶತಮಾನೋತ್ಸವ ಹಿನ್ನೆಲೆಯಲ್ಲಿ ಧ್ಯಾನ ಕೇಂದ್ರ ನಿರ್ಮಿಸಿದ್ದೇವೆ. ಹಿಮಾಲಯಕ್ಕೆ ಭೇಟಿ ಕೊಡುವ ಬಾಬಾಜಿ ಅವರ ಭಕ್ತರಿಗೆ ಎಲ್ಲಾ ರೀತಿಯ ಸೌಕರ್ಯ ಒದಗಿಸೋದು ಧ್ಯಾನ ಕೇಂದ್ರದ ಪ್ರಮುಖ ಉದ್ದೇಶ ಎಂದು ವಿಶ್ವನಾಥನ್‌ ತಿಳಿಸಿದ್ದಾರೆ. 

ಸದ್ಯ '2.O' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಜನಿಕಾಂತ್‌, ನ. 10ರಂದು ನಡೆಯುವ ಧ್ಯಾನ ಕೇಂದ್ರದ ಗೃಹಪ್ರವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜೊತೆಗೆ 2018ರ ಮಾರ್ಚ್‌ನಲ್ಲೂ ಸಹ ರಜನಿ ಹಿಮಾಲಯಕ್ಕೆ ಭೇಟಿ ನೀಡುವ ಸಾಧ್ಯತೆ ಎಂದು ವಿ. ವಿಶ್ವನಾಥನ್‌ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆಗೆ ಪತಿ ಜತೆ ಬಂದ ನಟಿ ಅಮೂಲ್ಯ

ಕಲ್ಲಡ್ಕ: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮದುವೆ ಬಳಿಕ ಬಣ್ಣದ ಬದುಕು ಮರೆತು ತಮ್ಮ ಪತಿ ಜಗದೀಶ್ ಜತೆ ...

news

ರಶ್ಮಿಕಾ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿದ ಪತ್ರಿಕೆ ವಿರುದ್ಧ ರಕ್ಷಿತ್ ಶೆಟ್ಟಿ ಗರಂ

ಬೆಂಗಳೂರು: ಭಾವೀ ಪತ್ನಿ ರಶ್ಮಿಕಾ ಮಂದಣ್ಣ ಬಗ್ಗೆ ತಪ್ಪು ಮಾಹಿತಿ ನೀಡಿದ ಪತ್ರಿಕೆಯೊಂದರ ಬಗ್ಗೆ ನಟ, ...

news

‘ಗಜನಿ’ ಹೀರೋಯಿನ್ ಆಸಿನ್ ಬಾಳಲ್ಲಿ ಹೊಸ ಸುದ್ದಿ

ಮುಂಬೈ: ಗಜನಿ ಚಿತ್ರದ ಮೂಲಕ ಟಾಲಿವುಡ್, ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದ ನಾಯಕಿ ನಟಿ ಆಸಿನ್ ...

news

ತೆಲುಗಿನಲ್ಲಿ ಕನ್ನಡ ಬೆಡಗಿ `ಪಟಾಕಾ’ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್

ಹೈದರಾಬಾದ್: ಚಂದನವನದ ಬೆಡಗಿ ನಭಾ ನಟೇಶ್ ಗೆ ತೆಲುಗು ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

Widgets Magazine
Widgets Magazine