ಬಾಹುಬಲಿ ನಿರ್ದೇಶಕರ ಮೇಲೆ ತಮನ್ನಾ ಮುನಿಸು!

Hyderabad, ಸೋಮವಾರ, 8 ಮೇ 2017 (11:06 IST)

Widgets Magazine

ಹೈದರಾಬಾದ್: ಬಾಹುಬಲಿ 2 ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಿರುವಾಗಲೇ ಅದರ ತೆರೆಯ ಹಿಂದಿನ ಒಂದೊಂದೇ ಕುತೂಹಲಕಾರಿ ವಿಷಯಗಳು ಹೊರಬೀಳುತ್ತಿವೆ.


 
ಮೊದಲ ಭಾಗದಲ್ಲಿ ಮಹೇಂದ್ರ ಬಾಹುಬಲಿಯ ಪ್ರೇಮಿಯಾಗಿ, ದಂಗೆಕೋರರ ಗುಂಪಿನ ನಾಯಕಿಯಾಗಿ ಪ್ರಮುಖ ಪಾತ್ರ ವಹಿಸಿದ್ದ ತಮನ್ನಾ ಎರಡನೇ ಭಾಗದಲ್ಲಿ 3-4 ದೃಶ್ಯಗಳಲ್ಲಷ್ಟೇ ಬಂದು ಹೋಗುತ್ತಾರೆ. ಅದೂ ಹೆಚ್ಚಿ ಸಂಭಾಷಣೆಯೂ ಇಲ್ಲದ ಪಾತ್ರ.
 
ಇದರಿಂದ ನಿರ್ದೇಶಕ ರಾಜಮೌಳಿ ಮೇಲೆ ತಮನ್ನಾ ಮುನಿಸಿಕೊಂಡಿದ್ದಾರೆಂದು ವರದಿಯಾಗಿದೆ. ಅಂದ ಹಾಗೆ ಬಾಹುಬಲಿ 2 ಚಿತ್ರಕ್ಕಾಗಿ ತಮನ್ನಾ ಕುದುರೆ ಸವಾರಿ, ಮಾರ್ಷಿಯಲ್ ಆರ್ಟ್ಸ್ ಕಲೆ ಕಲಿತುಕೊಂಡಿದ್ದರಂತೆ. ಅದನ್ನು ಸಿನಿಮಾ ಬಿಡುಗಡೆಗೂ ಮೊದಲೇ ತನಗೆ ಈ ಭಾಗದಲ್ಲಿ ಪ್ರಮುಖ ಪಾತ್ರವಿದೆ ಎಂದು ಹೇಳಿಕೊಂಡಿದ್ದರು. ಅದರಂತೆ ಚಿತ್ರೀಕರಣ ಕೂಡಾ ನಡೆದಿತ್ತಂತೆ.
 
ಆದರೆ ಸಿನಿಮಾ ಬಿಡುಗಡೆಯಾಗುವಾಗ ತಮನ್ನಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರು. ಅದಕ್ಕೆ ಕಾರಣ ರಾಜಮೌಳಿ ಎಡಿಟಿಂಗ್ ಮಾಡುವಾಗ ಅಷ್ಟೊಂದು ಉತ್ತಮವಾಗಿ ಬಾರದ ದೃಶ್ಯಗಳನ್ನು ಕಟ್ ಮಾಡಿದ್ದರು. ದುರದೃಷ್ಟವಶಾತ್ ಹೆಚ್ಚಿನ ದೃಶ್ಯಗಳು ತಮನ್ನಾರದ್ದಾಗಿತ್ತು. ಆದರೆ ಚಿತ್ರ ನೋಡಿದ ತಮನ್ನಾಗೆ ಭಾರೀ ಬೇಸರವಾಗಿದೆಯಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಲಕ್ಷ್ಮೀ ಬಾರಮ್ಮ ಧಾರವಾಹಿಯಿಂದ ಹೀರೋ ಬದಲಾಗಿದ್ದು ಯಾಕೆ ಗೊತ್ತಾ?

ಬೆಂಗಳೂರು: ಧಾರವಾಹಿಗಳಲ್ಲಿ ಪಾತ್ರಧಾರಿಗಳು ಬದಲಾಗುವುದು ವಿಶೇಷವೇನಲ್ಲ. ಅದೇ ರೀತಿ ಕಲರ್ಸ್ ಕನ್ನಡ ...

news

ಬಾಹುಬಲಿ 3 ಮಾಡ್ತಾರಾ ರಾಜಮೌಳಿ?

ಹೈದರಾಬಾದ್: ಬಾಹುಬಲಿ 2 ಚಿತ್ರ 1000 ಕೋಟಿ ರೂ. ಬಾಚಿಕೊಂಡು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತೀ ಹೆಚ್ಚು ...

news

ರಕ್ಷಿತ್ ಶೆಟ್ಟಿ ಮದುವೆ ಫಿಕ್ಸ್? ಹುಡುಗಿ ಯಾರು ಗೊತ್ತಾ?

ಬೆಂಗಳೂರು: ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಜೀವದಲ್ಲಿ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ...

news

ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ ಕಿರಿಕ್ ಗಳ ಬಗ್ಗೆ ತಿಳಿದುಕೊಳ್ಳಬೇಕೇ?

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಂದು ...

Widgets Magazine