ತಾಜ್‌ಮಹಲ್ ಯಾವಾಗ ಕೆಡುವುತ್ತೀರಾ ಹೇಳಿ? : ಪ್ರಕಾಶ್ ರೈ ಪ್ರಶ್ನೆ

ಬೆಂಗಳೂರು, ಮಂಗಳವಾರ, 24 ಅಕ್ಟೋಬರ್ 2017 (16:22 IST)

ತಾಜ್‌ಮಹಲ್ ಕೆಡುವವ ಬಗ್ಗೆ ದಿನಕ್ಕೊಂದು ಹೇಳಿಕೆ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿದ ಹಿರಿಯ ನಟ ಪ್ರಕಾಶ್ ರೈ, ತಾಜ್‌ಮಹಲ್ ಯಾವಾಗ ಕೆಡುವುತ್ತೀರಾ ಹೇಳಿ?  ಕೊನೆಯದಾಗಿ ನಮ್ಮ ಮಕ್ಕಳಿಗೆ ತಾಜ್‌ಮಹಲ್ ತೋರಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್‌ಮಹಲ್‌ನ್ನು ದೇಶದ್ರೋಹಿಗಳು ನಿರ್ಮಿಸಿದ್ದರಿಂದ ದೇಶದ ಇತಿಹಾಸದಲ್ಲಿ ಅದೊಂದು ಕಪ್ಪು ಚುಕ್ಕೆ. ಅದನ್ನು ಕೆಡುವುದೇ ಸೂಕ್ತ ಎಂದು ಬಿಜೆಪಿ ಮುಖಂಡ ಸಂಗೀತ್ ಸೋಮ್ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. 
  
ಉತ್ತರಪ್ರದೇಶದ ಪ್ರವಾಸೋದ್ಯಮ ತಾಣದ ಪಟ್ಟಿಯಿಂದ ತಾಜ್‌ಮಹಲ್‌ನ್ನು ಹೊರಗಿಟ್ಟ ಮುಖ್ಯಮಂತ್ರಿ ಯೋಗಿ ಸರಕಾರದ ವಿರುದ್ಧ ದೇಶಾದ್ಯಂತ ಭಾರಿ ಆಕ್ರೋಶ ಮೂಡಿಸಿತ್ತು. ನಂತರ ಡ್ಯಾಮೇಜ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ತಾವೇ ತಾಜ್‌ಮಹಲ್‌ಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದರು.
 
ನಟ ಪ್ರಕಾಶ್ ರೈ ಹೇಳಿಕೆಗೆ ತಿರುಗೇಟು ನೀಡಿರುವ ಚಿತ್ರನಿರ್ದೇಶಕ ಎಂ.ಎಸ್.ರಮೇಶ್, ಯಾವ ಹೆಂಡತಿ ಮತ್ತು ಮಕ್ಕಳೊಂದಿಗೆ ತೆರಳುತ್ತೀರಾ ಎನ್ನುವುದನ್ನು ಬಹಿರಂಗಪಡಿಸಿ ಎಂದು ವ್ಯಯಕ್ತಿಕ ನಿಂದನೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಶ್ಲೀಲ ಕಾಂಡೋಮ್ ಜಾಹೀರಾತು ಸಮರ್ಥಿಸಿಕೊಂಡ ಹಾಟ್ ಬಿಪಾಶಾ

ನವದೆಹಲಿ: ಬಾಲಿವುಡ್ ಸ್ಟಾರ್ ಬಿಪಾಶಾ ಬಸು ಆನ್‌ಲೈನ್ ಟ್ರಾಲ್‌ಗಳ ಟೀಕೆಗಳ ಸುರಿಮಳೆಗೆ ಕಾರಣವಾಗಿದ್ದಾರೆ. ...

news

ಹಿರಿಯ ಪೋಷಕ ನಟ ವೇಣುಗೋಪಾಲ್ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಲವು ಚಿತ್ರಗಳಲ್ಲಿ ಪೋಷಕ ನಟ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ...

news

ಮೊದಲ ಬಾರಿಗೆ ಬಣ್ಣ ಹಚ್ಚಿದ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ ಮೊದಲ ಬಾರಿಗೆ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವ ...

news

ಪ್ರಭಾಸ್-ಅನುಷ್ಕಾ ನಡುವೆ ಏನೋ ಇದೆ ಎಂದು ಪ್ರೂವ್ ಮಾಡಿತು ಈ ಉಡುಗೊರೆ

ಹೈದರಾಬಾದ್: ಬಾಹುಬಲಿ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಸಮ್ ಥಿಂಗ್ ಇದೆ, ಅವರಿಬ್ಬರೂ ...

Widgets Magazine
Widgets Magazine