ಪೊಲೀಸರೇ ವಿರುದ್ಧವೇ ಸಮರ ಸಾರಿದ ‘ಅಂತ್ಯ’ ಚಿತ್ರತಂಡ

ಬೆಂಗಳೂರು, ಗುರುವಾರ, 30 ಆಗಸ್ಟ್ 2018 (08:33 IST)

ಬೆಂಗಳೂರು : ಸಿಂಗರ್ ಚಂದನ್ ಶೆಟ್ಟಿ ಹಾಡಿದ ‘ಅಂತ್ಯ’ ಸಿನಿಮಾದ ಗಾಂಜಾ ಕುರಿತಾದ ಹಾಡು ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡುತ್ತದೆ ಎಂದು ಸಿಸಿಬಿ ಪೊಲೀಸರು ಆರೋಪ ಮಾಡಿರುವ ಹಿನ್ನಲೆಯಲ್ಲಿ ಇದೀಗ ಈ ಹಾಡಿನ ರಚನೆಕಾರ ಹಾಗು ಚಿತ್ರದ ಪೊಲೀಸರೇ ವಿರುದ್ಧವೇ ದೂರು ನೀಡಲು ಮುಂದಾಗಿದ್ದಾರೆ.


‘ಅಂತ್ಯ’ ಸಿನಿಮಾದ ಗಾಂಜಾ ಕುರಿತಾದ ಹಾಡನ್ನು ಸಿಂಗರ್ ಚಂದನ್ ಶೆಟ್ಟಿ ಹಾಡಿದ ಕಾರಣ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು. ನಂತರ ಚಂದನ್ ಪೊಲೀಸರ ಮುಂದೆ ಹಾಜರಾಗಿ ತಾವು ಹಾಡು ಹಾಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಹಾಡಿನ ಸಾಹಿತ್ಯ ರಚನಕಾರರಾದ ಮುತ್ತು ಮತ್ತು ನಿರ್ಮಾಪಕ ಅವಿನಾಶ್ ಸಿಸಿಬಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.


“ನಮ್ಮ ಫಿಲ್ಮ್ ಸೆನ್ಸಾರ್ ಬೋರ್ಡ್ ಅಂತಿಮ, ಯೂಟ್ಯೂಬ್‍ನಲ್ಲಿ ಈ ಸಾಂಗ್ಸ್ ತೆಗಿಯಿರಿ ಅಂತಾ ಹೇಳೋದು ಪೊಲೀಸರ ಕೆಲಸವಲ್ಲ. ಹಾಗಿದ್ರೇ ಎಲ್ಲಾ ಭಾಷೆಯ ನಶೆಯ ಹಾಡುಗಳನ್ನು ತೆಗೆಸಲಿ” ಎಂದು ‘ಅಂತ್ಯ’ ಚಿತ್ರತಂಡ  ಪೊಲೀಸರ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಲು ನಿರ್ಧರಿಸಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೊಡಗು ನಿರಾಶ್ರಿತರ ನೆರವಿಗೆ ನಿಂತ ನಟಿ ರಶ್ಮಿಕಾ ಮಂದಣ್ಣ

ಬೆಂಗಳೂರು : ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಹಲವು ನಟ ನಟಿಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದು, ಇದೀಗ ...

news

100 ಕೋಟಿ ಕ್ಲಬ್‌ಗೆ ಸೇರಿದ ಗೋಲ್ಡ್ ಸಿನಿಮಾ..!!

ರೀಮಾ ಕಗ್ಟಿ ಅವರ ನಿರ್ದೇಶನದ, ಅಕ್ಷಯ್ ಕುಮಾರ್ ಅವರ ಮುಖ್ಯ ಭೂಮಿಕೆಯ ಗೋಲ್ಡ್ ಸಿನಿಮಾ ...

news

ಕುತೂಹಲ ಮೂಡಿಸಿದೆ 'ಉದ್ಘರ್ಷ' ಫಸ್ಟ್ ಲುಕ್

ಎರಡು ವರ್ಷಗಳ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ನಿರ್ದೇಶಕ ಸುನೀಲ್ ಕುಮಾರ್ ...

news

ಮತ್ತೆ ಹೆಣ್ಣಿನ ವೇಷ ಧರಿಸಿದ ರವಿಶಂಕರ್ ಮತ್ತು ಶರಣ್…!

`ವಿಕ್ಟರಿ 2′ ಸಿನಿಮಾದಲ್ಲಿ ಶರಣ್ ಹಾಗೂ ರವಿಶಂಕರ್ ಸೀರೆಯನ್ನುಟ್ಟ ಹೆಣ್ಣಿನ ಪಾತ್ರದ ಫೋಟೋಗಳು ...

Widgets Magazine