Widgets Magazine

ಕ್ರಿಶ್ ನಿರ್ದೇಶನದಲ್ಲಿ ಪವನ್ ಕಲ್ಯಾಣ್ 27ನೇ ಚಿತ್ರದ ಶೂಟಿಂಗ್ ಶುರು

ಹೈದರಾಬಾದ್| pavithra| Last Modified ಬುಧವಾರ, 13 ಜನವರಿ 2021 (12:56 IST)
ಹೈದರಾಬಾದ್ :  ಪವರ್ ಸ್ಟಾರ್ ಪವನ್ ಕಲ್ಯಾಣ್ ಚಿತ್ರದ ಬಗ್ಗೆ ಕಳೆದ ಕೆಲವು ದಿನಗಳಿಂದ ಚರ್ಚಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಪವನ್ ಅವರ  27ನೇ ಚಿತ್ರವನ್ನು ಕ್ರಿಶ್ ನಿರ್ದೇಶಿಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯಿತು.

ಈ ಮಧ್ಯೆ ಮಲಯಾಳಂ ಚಿತ್ರ ಅಯ್ಯಪ್ಪನ್ ಮತ್ತು ಕೊಶ್ಯಮ್ ಚಿತ್ರದ ರಿಮೇಕ್ ಆಗುವ ಸಾಧ್ಯತೆ ಇದೆ ಎಂಬ ಸುದ್ದಿ ಹೊರಬಿದ್ದಿದ್ದು, ಬಳಿಕ ಇತ್ತೀಚೆಗೆ ರಾಣಾ ಅವರೊಂದಿಗೆ  ಪವನ್ ರಿಮೇಕ್ ಚಿತ್ರದಲ್ಲಿ ನಟಿಸುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಆದರೆ ಕ್ರಿಶ್ ಚಿತ್ರದ ಪರಿಸ್ಥಿತಿ ಏನು ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ಆದರೆ ಇದೀಗ ಕ್ರಿಶ್ ಅವರ ಚಿತ್ರದಲ್ಲಿ ಪವನ್ ಕೂಡ ಸೇರಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ಚಿತ್ರದ ಶೂಟಿಂಗ್ ಗಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚಿತ್ರದ ಶೂಟಿಂಗ ಆರಂಭವಾದ ತಕ್ಷಣ ಚಿತ್ರದ ಶೀರ್ಷಿಕೆ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :