ಸುದೀಪ್ ಕಾರಣದಿಂದ ತಮ್ಮ ಹೆಸರನ್ನು ಬದಲಾಯಿಸಿಕೊಂಡರಂತೆ ಈ ನಟಿ!

ಬೆಂಗಳೂರು, ಸೋಮವಾರ, 1 ಜನವರಿ 2018 (12:17 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಎಂದರೆ ಎಲ್ಲರೂ ಇಷ್ಟಪಡುವ ಒಬ್ಬ ಖ್ಯಾತ ನಟ. ಇವರ ಅಭಿಮಾನಿಗಳು ಇವರ  ಹೆಸರನ್ನು ತಮ್ಮ ಹೆಸರಿನ ಜೊತೆ ಸೇರಿಸಿ ಬದಲಾಯಿಸಿಕೊಂಡಿರುವ ಬಗ್ಗೆ ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ನಟಿ ಸುದೀಪ್ ಅವರಿಂದ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕಾಯಿತು ಎಂದು ಹೇಳುತ್ತಿದ್ದಾರೆ.


 
ಹೌದು. ಧೈರ್ಯಮ್ ಚಿತ್ರ ಹಾಗು ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಅದಿತಿ ಪ್ರಭು ಅವರು ಕಿಚ್ಚ ಸುದೀಪ್ ಅವರಿಂದಾಗಿ ತಾನು ತಮ್ಮ ಹೆಸರನ್ನು ಬದಲಾಯಿಸಿಕೊಂಡೆ ಎಂದು ಬಿಗ್ ಬಾಸ್ ನಲ್ಲಿ ನಿನ್ನೆ ಹೇಳಿದ್ದಾರೆ. ಬಿಗ್ ಬಾಸ್ ನ ಕಿಚ್ಚನ್ ಟೈಮ್ ಎಪಿಸೋಡ್ ನಲ್ಲಿ ವಿಶೇಷ ಅತಿಥಿಯಾಗಿ ರಂಜನಿ ರಾಘವನ್ ಅವರ ಜೊತೆಗೆ ಬಂದ ಅದಿತಿ ಈ ವಿಷಯವನ್ನು ಹೇಳಿದ್ದಾರೆ.


 
ಇವರ ಹೆಸರು ಮೊದಲು ಸುದೀಪನಾ ಎಂದಿದ್ದು, ಕಾಲೇಜಿನಲ್ಲಿ ಅವರನ್ನು ಕಿಚ್ಚ ಎಂದು ರೇಗಿಸುತ್ತಿದ್ದರಂತೆ. ನಂತರ ಬಣ್ಣದ ಲೋಕಕ್ಕೆ ಬಂದ ಮೇಲೆ  ಅವರನ್ನು ಲೇಡಿ ಕಿಚ್ಚ, ಕಿಚ್ಚಿ, ಸುದೀಪಣ್ಣ ಎಂದು ತಮಾಷೆ ಮಾಡುತ್ತಿದ್ದರಂತೆ. ಹಾಗಾಗಿ ನಿರ್ದೇಶಕರು ಅವರ ಹೆಸರನ್ನು ಅದಿತಿ ಎಂದು ಬದಲಾಯಿಸಿದರಂತೆ. ಆದರೆ ಅವರಿಗೆ ಮಾತ್ರ ಸುದೀಪನಾ ಎಂಬ ಹೆಸರೆ ಇಷ್ಟವೆಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೊಂದು ಸಿಹಿಸುದ್ದಿ

ಮುಂಬೈ: ಇತ್ತೀಚೆಗೆ ವಿರಾಟ್‌ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನುಷ್ಕಾಗೆ ಈಗ ಮತ್ತೊಂದು ...

news

ರಜನೀಕಾಂತ್ ರಾಜಕೀಯಕ್ಕೆ ಬಂದಿದ್ದು ನೋಡಿ ರಾಹುಲ್ ಗಾಂಧಿ ರಜೆ ಮೇಲೆ ಮಾಯವಾದ್ರಂತೆ!

ಚೆನ್ನೈ: ರಜನೀಕಾಂತ್ ಜೋಕ್ ಗಳು ನಮ್ಮಲ್ಲಿ ಎಷ್ಟು ಜನಪ್ರಿಯ ಎಂಬುದು ಎಲ್ಲರಿಗೂ ಗೊತ್ತೇ ಇದೆ. ರಜನೀಕಾಂತ್ ...

news

ಎಲ್ಲರೂ ಪಾರ್ಟಿ ಮಾಡಿದ್ರೆ ಜಗ್ಗೇಶ್ ಹೊಸ ವರ್ಷದಂದು ಏನು ಮಾಡಿದ್ರು ಗೊತ್ತಾ?

ಬೆಂಗಳೂರು: ಇಂದು ವರ್ಷದ ಆರಂಭದ ದಿನ. ನಿನ್ನೆ ತಡರಾತ್ರಿಯಿಂದಲೇ ಪಾರ್ಟಿ ಜೋರಾಗಿ ನಡೆಯುತ್ತಿದೆ. ...

news

ಕುರುಕ್ಷೇತ್ರ ಚಿತ್ರಕ್ಕಾಗಿ ರವಿಚಂದ್ರನ್ ಅವರು ಏನು ಮಾಡಿದ್ದಾರೆ ಗೊತ್ತಾ...?

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕುರುಕ್ಷೇತ್ರ ಚಿತ್ರದಲ್ಲಿ ...

Widgets Magazine