Widgets Magazine

ಈ ದಿನದಂದು ಬಿಡುಗಡೆಯಾಗಲಿದೆಯಂತೆ ‘ರಾಧೆಶ್ಯಾಮ್’ ಚಿತ್ರದ ಟೀಸರ್

ಹೈದರಾಬಾದ್| pavithra| Last Modified ಮಂಗಳವಾರ, 12 ಜನವರಿ 2021 (13:42 IST)
ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರ  ಇತ್ತೀಚಿನ ಚಿತ್ರ ‘ರಾಧೆಶ್ಯಾಮ್’ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಚಿತ್ರದ ಫಸ್ಟ್ ಲುಕ್ ಮಾತ್ರ ಬಿಡುಗಡೆಯಾಗಿದ್ದು, ಟೀಸರ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಎದುರು ನೋಡುತ್ತಿದ್ದಾರೆ.

‘ರಾಧೆಶ್ಯಾಮ್’ ಚಿತ್ರದ ಟೀಸರ್ ಶೀಘ್ರದಲ್ಲಿಯೇ ಬರಲಿದೆ ಎಂದು ನಿರ್ದೇಶಕ ರಾಧಾಕೃಷ್ಣ ಹೇಳಿದ ಕಾರಣ ಹೊಸ ವರ್ಷದಂದು ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಆದರೆ ಅವರ ಭರವಸೆ ಈಡೇರಲಿಲ್ಲ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಈ ಟೀಸರ್ ನ್ನು ಇದೇ ತಿಂಗಳ 14ರಂದು ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ನೀಡಲಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :