"ಝೀರೋ" ಚಿತ್ರದ ಟೈಟಲ್ ಟೀಸರ್ ಬಿಡುಗಡೆ: ಕುಬ್ಜನಾದ ಕಿಂಗ್ ಖಾನ್

ramkrishna puranik 

ಮುಂಬೈ, ಗುರುವಾರ, 4 ಜನವರಿ 2018 (15:30 IST)

ಕಿಂಗ್ ಖಾನ್ ತಮ್ಮ "ಝೀರೋ" ಚಿತ್ರದ ಟೈಟಲ್ ಟೀಸರ್ ಬಿಡುಗಡೆಗೊಳಿಸಿದ್ದಾರೆ. "ಜಬ್ ತಕ್ ಹೈ ಜಾನ್" ಚಿತ್ರದ 5 ವರ್ಷಗಳ ನಂತರ ಇನ್ನೊಮ್ಮೆ ಬೆಳ್ಳಿತೆರೆಯನ್ನು ಹಂಚಿಕೊಳ್ಳಲಿದ್ದಾರೆ ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್, ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್. ಈ ಮೂವರು ಆನಂದ್ ಎಲ್ ರಾಯ್ ಅವರ "ಝೀರೋ" ಚಿತ್ರದಲ್ಲಿ ಒಂದಾಗಲಿದ್ದಾರೆ.
ಹೊಸ ವರ್ಷದಂದು ಶಾರುಖ್ ಖಾನ್ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸುವ ಮೂಲಕ ಬಹುಕಾಲದಿಂದ ಗೌಪ್ಯವಾಗಿದ್ದ ಚಿತ್ರದ ಹೆಸರನ್ನು ಕೂಡಾ ಬಹಿರಂಗಪಡಿಸಿದ್ದಾರೆ. ಈ ಚಿತ್ರವು ಶಾರುಖ್ ಖಾನ್ ಅವರ ರೆಡ್ ಚಿಲ್ಲಿಸ್ ಎಂಟರ್‌ಟೇನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಹೊಸ ವರ್ಷದ ಮೊದಲ ದಿನದಂದು "ಝೀರೋ" ಟೈಟಲ್ ಟೀಸರ್ ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ ಬಾಲಿವುಡ್ ಬಾದ್‌ಷಾ ಶಾರುಖ್.
 
ಆನಂದ್ ಎಲ್ ರಾಯ್ ಮತ್ತು ಶಾರುಖ್ ಖಾನ್ ಈ ಇಬ್ಬರ ಜೋಡಿಯ ಮೊದಲ ಚಿತ್ರ ಇದಾಗಿದ್ದು, ಹಿಮಾನ್ಶು ಶರ್ಮಾ ಚಿತ್ರಕಥೆ ಹೆಣೆದಿದ್ದಾರೆ. ಆನಂದ್ ಎಲ್ ರಾಯ್ ಮೊದಲ ಬಾರಿಗೆ ಕಿಂಗ್ ಖಾನ್‌ಗೆ ಆ್ಯಕ್ಶನ್ ಕಟ್ ಹೇಳಲಿದ್ದಾರೆ. "ಜಬ್ ತಕ್ ಹೈ ಜಾನ್" ಚಿತ್ರದಲ್ಲಿ ಶಾರುಖ್ ಜೊತೆಗೆ ನಟಿಸಿದ್ದ ಅನುಷ್ಕಾ ಮತ್ತು ಕತ್ರಿನಾ ಅವರೂ ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 
ಈ ಚಿತ್ರಕ್ಕೆ "ಝೀರೋ" ಎಂದು ಹೆಸರಿಡಲಾಗಿದ್ದು, ಈ ಚಿತ್ರ ಸಂಪೂರ್ಣ ಹಾಸ್ಯಮಯವಾಗಿರಲಿದೆ. ಶಾರುಖ್ ಖಾನ್ ಕುಳ್ಳನ ಪಾತ್ರದಲ್ಲಿ ನಟಿಸುತ್ತಿದ್ದರೆ, ಅನುಷ್ಕಾ ಬುದ್ಧಿಮಾಂದ್ಯರ ಪಾತ್ರದಲ್ಲಿ ಮತ್ತು ಕತ್ರಿನಾ ನಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಖ್ಯಾತನಾಮರಾದ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಕಾಜೋಲ್, ಆಲಿಯಾ ಭಟ್, ಶ್ರೀದೇವಿ, ಕರೀಷ್ಮಾ ಕಪೂರ್ ಮತ್ತು ಜೂಹಿ ಚಾವ್ಲಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಇದೇ ವರ್ಷ ಡಿಸೆಂಬರ್ 21 ರಂದು ಅಭಿಮಾನಿಗಳಿಗೆ ಪರದೆ ಮೇಲೆ ಕಾಣಿಸಲಿದೆ.
 
ಭಾರತೀಯ ಸಿನೆಮಾ ಇತಿಹಾಸದಲ್ಲಿ ಚಿತ್ರವೊಂದರಲ್ಲಿ ಸಂಪೂರ್ಣವಾಗಿ ಕುಬ್ಜನ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿರುವ ಎರಡನೇ ನಟ ಶಾರುಖ್ ಎಂಬ ಖ್ಯಾತಿಯನ್ನು ಹೊಂದಲಿದ್ದಾರೆ. ಈ ಮೊದಲು ಕಮಲ್ ಹಾಸನ್ ಅವರು 1989 ರಲ್ಲಿ "ಅಪೂರ್ವ ಸಗೋದರರ್ಗಳ್" ಚಿತ್ರದಲ್ಲಿ ಕುಬ್ಜನ ಪಾತ್ರದಲ್ಲಿ ನಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ಚಂದನ್ ಗೆ ಹುಡುಗಿ ಹುಡುಕಿಯೇ ಬಿಟ್ಟ ರಿಯಾಜ್! ಯಾರಾಕೆ ಗೊತ್ತಾ?!

ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರ ಹೋದ ತಕ್ಷಣ ಚಂದನ್ ಶೆಟ್ಟಿ ಮದುವೆಯಾಗುವುದು ಖಂಡಿತಾ ...

news

ಬಿಗ್ ಬಾಸ್ ಕನ್ನಡ: ಸಮೀರ್ ಆಚಾರ್ಯ ಮುಚ್ಚಿಟ್ಟಿದ್ದ ಸತ್ಯ ಬಹಿರಂಗಪಡಿಸಿದ ಚಂದನ್ ಶೆಟ್ಟಿ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸೀಕ್ರೆಟ್ ರೂಂನೊಳಗಿದ್ದ ಸಮೀರ್ ಆಚಾರ್ಯ ಮತ್ತೆ ಮನೆಯೊಳಗೆ ಬರುವಾಗ ತಾವು ...

news

ಕಿಚ್ಚ ಸುದೀಪ್ ಗೆ ಸದ್ಯದಲ್ಲೇ ಗಂಡು ಮಗುವಾಗುತ್ತಂತೆ?!!

ಬೆಂಗಳೂರು: ವಿಚ್ಛೇದನ ನಿರ್ಧಾರ ಕೈ ಬಿಟ್ಟು ಪತ್ನಿ ಪ್ರಿಯಾ ಜತೆ ಸೇರಿಕೊಂಡ ಕಿಚ್ಚ ಸುದೀಪ್ ಕಡೆಯಿಂದ ...

news

ಟ್ವೀಟರ್ ನಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಪಡೆದ ಭಾರತದ ಮೂರು ಗಣ್ಯ ವ್ಯಕ್ತಿಗಳು ಯಾರು ಗೊತ್ತಾ…?

ಮುಂಬೈ : ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವೀಟರ್ ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರು ...

Widgets Magazine
Widgets Magazine