ರಜನೀಕಾಂತ್ ಅಳಿಯ ಧನುಷ್ ಜನ್ಮರಹಸ್ಯ ಇಂದು ಬಯಲು?!

Chennai, ಗುರುವಾರ, 2 ಮಾರ್ಚ್ 2017 (10:09 IST)

ಚೆನ್ನೈ: ರಜನೀಕಾಂತ್ ಅಳಿಯ, ಐಶ್ವರ್ಯಾ ರಜನೀಕಾಂತ್ ಪತಿ, ತಮಿಳು ನಟ ಧನುಷ್ ಹೆತ್ತವರು ಯಾರು? ಈ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆಯಿದೆ. ಮದರಾಸ್ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆ ಇಂದು ಕ್ಲೈಮ್ಯಾಕ್ಸ್ ಕಾಣುವ ನಿರೀಕ್ಷೆಯಿದೆ.


 
ಇದುವರೆಗೆ ಧನುಷ್ ನಿರ್ದೇಶಕ ಕಸ್ತೂರಿ ರಾಜನ್ ಮತ್ತು ವಿಜಯಲಕ್ಷ್ಮಿ ಪುತ್ರ ಎಂದೇ ನಂಬಲಾಗಿತ್ತು. ಆದರೆ ಕದಿರೇಸನ್ ಮತ್ತು ಮೀನಾಕ್ಷಿ ಧನುಷ್ ನಮ್ಮ ಮಗ ಎಂದು ನ್ಯಾಯಾಲಯದಲ್ಲಿ ದೂರಿತ್ತಿದ್ದರು. ಅದರಂತೆ ಧನುಷ್ ಈಗಾಗಲೇ ವಿಚಾರಣೆಗೂ ಹಾಜರಾಗಿದ್ದರು.
 
ಇಂದು ವೈದ್ಯಕೀಯ ಪರೀಕ್ಷೆಗೊಳಪಡಲಿದ್ದಾರೆ ನಟ ಧನುಷ್. ಆ ಮೂಲಕ ಧನುಷ್ ಯಾರ ಮಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಬಹುದೆಂಬ ನಿರೀಕ್ಷೆ ಎಲ್ಲರೂ. ಆದರೆ ಧನುಷ್ ಮಾತ್ರ ಈಗಲೂ ತಾನು ಕಸ್ತೂರಿರಾಜನ್ ಮಗ ಎಂದೇ ಹೇಳುತ್ತಿದ್ದಾರೆ. ಸದ್ಯಕ್ಕೆ ಧನುಷ್ ಹುಟ್ಟು ಮಚ್ಚೆಗಳ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಕದಿರೇಷನ್ ವಾದಕ್ಕೆ ಪುಷ್ಠಿ ಸಿಕ್ಕರೆ, ಧನುಷ್ ಮುಂದೆ ಡಿಎನ್ ಎ ಪರೀಕ್ಷೆಯನ್ನೂ ಎದುರಿಸಬೇಕಾದೀತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಆ ನಟಿಗೆ ಅವಕಾಶಕ್ಕಾಗಿ ಹಾಸಿಗೆಗೆ ಆಹ್ವಾನಿಸಿದ್ದರಂತೆ!

ಎಲ್ಲಾ ಚಿತ್ರೋದ್ಯಮಗಳಲ್ಲೂ ಇದೇ ಪರಿಸ್ಥಿತಿನಾ? ಮೊನ್ನೆ ಮಲಯಾಳಂನಲ್ಲಿ ನಟಿಯೊಬ್ಬರ ಮೇಲೆ ಲೈಂಗಿಕ ...

news

ಶ್ರೀದೇವಿ ಪುತ್ರಿಯ ಸ್ಟನ್ನಿಂಗ್ ಲುಕ್ ನೋಡಿ

ಸದ್ಯಕ್ಕೆ ಕಪೂರ್ ಖಾಂದಾನ್ ಅಬು ದಬಿಯಲ್ಲಿ ಬೀಡುಬಿಟ್ಟಿದೆ. ಅಕ್ಷಯ್ ಮಾರ್ವಾ ಅವರ ಮದುವೆ ಕಾರ್ಯಕ್ರಮದಲ್ಲಿ ...

news

ದಿಶಾ ಪಟಾನಿ ದೇಸಿ ಲುಕ್‌ಗೆ ಕ್ಲೀನ್ ಬೌಲ್ಡ್ ಆದ ರಸಿಕರು

’ಕುಂಗ್ ಫು ಯೋಗಾ’ ಚಿತ್ರದ ಬೆಡಗಿ ದಿಶಾ ಪಟಾನಿ ಇತ್ತೀಚೆಗೆ ಥಳುಕು ಬಳುಕಿನ ಬಟ್ಟೆಯಲ್ಲಿ ಎಲ್ಲರ ...

news

ರಾಣಿ ಎಲಿಜಬೆತ್‌ರನ್ನು ಭೇಟಿ ಮಾಡಿದ ಕಮಲ್ ಹಾಸನ್

ಯುಕೆ-ಭಾರತ ಸಾಂಸ್ಕೃತಿಕ ವರ್ಷ 2017 ಬಂಕಿಂಗ್‍ಹ್ಯಾಮ್ ಪ್ಯಾಲೇಸ್‌ನಲ್ಲಿ ನಡೆಯುತಿದೆ. ಈ ಐತಿಹಾಸಿಕ ...

Widgets Magazine
Widgets Magazine