ಇಂದು ಗೋಲ್ಡನ್ ಸ್ಟಾರ್ ಗಣೇಶ್ ಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು, ಸೋಮವಾರ, 2 ಜುಲೈ 2018 (15:11 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸೋಮವಾರ (ಇಂದು) ತಮ್ಮ 38ನೇ ವರ್ಷದ ಹುಟ್ಟಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.


ತಮ್ಮ ನೆಚ್ಚಿನ ನಟನಿಗೆ ಶುಭಕೋರಲು ರಾತ್ರಿಯಿಂದಲೇ ಅಭಿಮಾನಿಗಳು ದಂಡು ರಾಜರಾಜೇಶ್ವರಿ ನಗರದಲ್ಲಿರುವ ಗಣೇಶ್ ಅವರ ಮನೆಯ ಮುಂದೆ ನೆರೆದಿದ್ದು, ಇಂದು ಎಲ್ಲಾ ಅಭಿಮಾನಿಗಳು ಹಾಗೂ ಕುಟುಂಬಸ್ಥರೊಂದಿಗೆ ಕೇಕ್ ಕತ್ತರಿಸುವ ಮೂಲಕ ಗಣೇಶ್ ಅವರು ತಮ್ಮ ಹುಟ್ಟಹಬ್ಬವನ್ನು ಆಚರಿಸಿಕೊಂಡಿದ್ದಾರೆ.


ಈ ವೇಳೆ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಅವರು, ‘ನನ್ನ ಹುಟ್ಟುಹಬ್ಬವನ್ನು ತಮ್ಮ ಹುಟ್ಟುಹಬ್ಬ ಎಂದುಕೊಂಡು ರಾತ್ರಿಯಿಂದಲೇ ಮನೆ ಮುಂದೆ ಜಮಾಯಿಸಿ, ಬ್ಯಾನರ್, ಕಟೌಟ್ ಹಾಕಿ ಸಂಭ್ರಮಿಸುತ್ತಿರುವ ನನ್ನ ಅಭಿಮಾನಿಗಳಿಗೆ ನಾನು ಚಿರ ಋಣಿ. ಅಭಿಮಾನಿಗಳು ಸಂತೋಷಪಡುವಂತಹ ಚಿತ್ರಗಳನ್ನೇ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಇದೇ ರೀತಿ ನನ್ನನ್ನು ಪ್ರೋತ್ಸಾಹಿಸಿ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬೇಸರಗೊಂಡ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸುದೀಪ್ ನೀಡಿದ ಸಲಹೆಯೇನು ಗೊತ್ತಾ?

ಬೆಂಗಳೂರು : ನಟ ಕಿಚ್ಚ ಸುದೀಪ್ ಹಾಗೂ ನಟ ಶಿವರಾಜ್ ಕುಮಾರ್ ಅವರ ‘ದಿ ವಿಲನ್’ ಚಿತ್ರದ ಎರಡು ಟೀಸರ್ ...

news

ನಟಿ ಕಾಜಲ್ ಅಗರ್​​ವಾಲ್ ಹೊಲದ ಮಧ್ಯದಲ್ಲಿ ನಿಂತಿದ್ದು ಯಾಕೆ ಗೊತ್ತಾ?

ಹೈದರಾಬಾದ್ : ಈ ಹಿಂದೆ ಬಾಲಿವುಡ್ ನಟಿ ಸನ್ನಿ ಲಿಯೋನಾ ಅವರ ಫೋಟೋ ಹಾಕಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ...

news

ವ್ಯಾಘ್ರ ಗುಣವಿದ್ದ ನಟ ಜಗ್ಗೇಶ್ ಅನ್ನು ಬದಲಾಯಿಸಿದ್ದು ಈ ಪುಸ್ತಕವಂತೆ. ಯಾವುದು ಗೊತ್ತಾ ಅದು…?

ಬೆಂಗಳೂರು : ನಟ ಜಗ್ಗೇಶ್ ಅವರು ಪುಸ್ತಕವೊಂದರ ಕುರಿತು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡುತ್ತಾ ಆ ಪುಸ್ತಕ ...

news

ಕಾಲಿವುಡ್ ಸ್ಟಾರ್ ನಟ ಆರ್ಯಾ ಮೇಲೆ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿ

ಚೆನ್ನೈ : ಕಾಲಿವುಡ್ ಸ್ಟಾರ್ ನಟ ಆರ್ಯಾ ಅವರ ಮೇಲೆ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಲಾಗಿದೆ ...

Widgets Magazine
Widgets Magazine