ತುಳು ಹಾಗೂ ಕನ್ನಡ ಚಿತ್ರನಟ ಸದಾಶಿವ ಸಾಲ್ಯಾನ್ ಇನ್ನಿಲ್ಲ

ಬೆಂಗಳೂರು, ಮಂಗಳವಾರ, 10 ಜುಲೈ 2018 (07:56 IST)

ಮುಂಬೈ : ಹಿರಿಯ ತುಳು ಹಾಗೂ ಕನ್ನಡ ಚಿತ್ರನಟ ಉಡುಪಿ ಮೂಲದ ಸದಾಶಿವ ಸಾಲ್ಯಾನ್(68) ಮುಂಬೈ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.


ಮೂಲತಃ ಉಡುಪಿಯ ತೆಂಕ ಎರ್ಮಾಳ್‌ ನವರಾಗಿದ್ದ ಸದಾಶಿವ ಸಾಲ್ಯಾನ್ ಚಿಕ್ಕ ವಯಸ್ಸಿನಲ್ಲೇ ಮುಂಬೈಗೆ ತೆರಳಿ ಅಲ್ಲೇ ನೆಲೆಸಿದ್ದರು. ಅಲ್ಲಿ ಪದವಿ ಮುಗಿಸಿದ್ದ ಅವರು ಮುಂಬೈ ಸೆಂಟ್ರಲ್ ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


ಮುಂಬೈಯ ನಾಟಕ ರಂಗದಲ್ಲಿ ಬೆಳೆದು ನಂತರ ಸಾಲ್ಯಾನ್ ಅವರು ಭಾಗ್ಯವಂತೆದಿ, ಬದ್ಕೆರೆಬುಡ್ಲೆ, ಪೆಟ್ಟಾಯಿ ಪಿಲಿ, ಸತ್ಯ ಓಲುಂಡು, ದಾರೆದ ಸೀರೆ, ಸಮರ ಸಿಂಹ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೆೇಜು ರಂಗ, ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೂ ಮೊದಲಾದ 50 ತುಳು ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಆ ಮೂಲಕ ಸುಮಾರು 50 ಚಿತ್ರಗಳಲ್ಲಿ ನಟಿಸಿದ ಏಕೈಕ ಮುಂಬೈ ರಂಗ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪೂನಂ ಪಾಂಡೆ ಪ್ರಕಾರ ಆಕೆ ನಂತರ ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುವ ಹುಡುಗಿ ಯಾರಂತೆ ಗೊತ್ತಾ?

ಮುಂಬೈ : ಇತ್ತೀಚೆಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಸುಹಾನ್ ಖಾನ್ ತಮ್ಮ ಬಿಕಿನಿ ಫೋಟೋವನ್ನು ...

news

ಕಾಜೋಲ್ ತಮ್ಮ ಬಯೋಪಿಕ್ ಚಿತ್ರ ಮಾಡುವುದು ಬೇಡ ಎಂದಿದ್ದು ಯಾಕೆ ?

ಮುಂಬೈ : ಇತ್ತೀಚೆಗೆ ಬಯೋಪಿಕ್ ಸಿನಿಮಾಗಳನ್ನು ಮಾಡುವುದರಲ್ಲಿ ಸಿನಿಮಾ ರಂಗಗಳು ಹೆಚ್ಚು ಗಮನ ಹರಿಸುತ್ತಿದೆ. ...

news

ಕತ್ರೀನಾ ಜೊತೆ ವ್ಯಾಯಾಮ ಮಾಡುವುದು 'ಆರೋಗ್ಯಕ್ಕೆ ಹಾನಿಕಾರಕ' ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ಯಾಕೆ?

ಮುಂಬೈ : ಕಠಿಣ ವರ್ಕೌಟ್ ಮೂಲಕ ​ಫಿಟ್​ನೆಸ್​ ಕಾಪಾಡಿಕೊಳ್ಳುವ ಬಾಲಿವುಡ್ ನಟಿ ಕತ್ರೀನಾ ಕೈಫ್ ವರ್ಕೌಟ್ ...

news

ಜಾಹ್ನವಿ ಕಪೂರ್ ಸಿಮಾರಂಗಕ್ಕೆ ಬರುವುದು ಇವರಿಗೆ ಇಷ್ಟವಿರಲಿಲ್ಲವಂತೆ

ಮುಂಬೈ : ದಿ. ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಧಡಕ್ ಚಿತ್ರದ ಮೂಲಕ ಬಾಲಿವುಡ್ ಪದಾರ್ಪಣೆ ...

Widgets Magazine