Widgets Magazine

ಎಲ್ಲಿ ನೋಡಿದ್ರೂ ಈಗ ಉಪೇಂದ್ರ ಪುತ್ರಿ ಐಶ್ವರ್ಯಾಳದ್ದೇ ಸುದ್ದಿ!

ಬೆಂಗಳೂರು| Krishnaveni K| Last Modified ಶುಕ್ರವಾರ, 15 ಮಾರ್ಚ್ 2019 (10:05 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಐಶ್ವರ್ಯಾ ಉಪೇಂದ್ರ ಈಗ ಗಾಂಧಿನಗರದಲ್ಲಿ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.

 
ಅದಕ್ಕೆ ಕಾರಣ ‘ದೇವಕಿ’ ಸಿನಿಮಾ ಟ್ರೈಲರ್. ಅಮ್ಮ ಪ್ರಿಯಾಂಕಾ ಉಪೇಂದ್ರ ಜತೆ ಐಶ್ವರ್ಯಾ ಈ ಸಿನಿಮಾದಲ್ಲಿ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಈ ಟ್ರೈಲರ್ ನೋಡಿದ ವೀಕ್ಷಕರು, ಚಿತ್ರರಂಗದ ಮಂದಿ ಐಶ್ವರ್ಯಾ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.
 
ಮಕ್ಕಳ ಕಳ್ಳ ಸಾಗಣೆ ಬಗ್ಗೆ ಇರುವ ‘ದೇವಕಿ’ ಸಿನಿಮಾದ ಟ್ರೈಲರ್ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಿಯಾಂಕಾ ಉಪೇಂದ್ರ ಅಮ್ಮನಾಗಿ ಅಭಿನಯಿಸಿದ್ದರೆ, ಐಶ್ವರ್ಯಾಗೆ ಸಿನಿಮಾದಲ್ಲಿಯೂ ಮಗಳ ಪಾತ್ರವೇ ಲಭಿಸಿದೆ.
 
‘ಮಮ್ಮಿ’ ಸಿನಿಮಾ ಮಾಡಿದ್ದ ನಿರ್ದೇಶಕ ಲೋಹಿತ್ ಈ ಸಿನಿಮಾವನ್ನೂ ಮಾಡಿದ್ದಾರೆ. ಚಿತ್ರದಲ್ಲಿ ನಟಿಸುವಾಗ ಐಶ್ವರ್ಯಾ ತೋರಿದ ಶ್ರದ್ಧೆ, ಆಸಕ್ತಿ ಬಗ್ಗೆ ನಿರ್ದೇಶಕ ಲೋಹಿತ್ ಮೆಚ್ಚುಗೆ ಸೂಚಿಸಿದ್ದಾರೆ. ಅಂತೂ ಚೊಚ್ಚಲ ಸಿನಿಮಾ ಮೂಲಕವೇ ಐಶ್ವರ್ಯಾ ಸದ್ದು ಮಾಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     
ಇದರಲ್ಲಿ ಇನ್ನಷ್ಟು ಓದಿ :