ಕನ್ನಡದಲ್ಲಿ ಅಮೀರ್ ಪಾತ್ರ ಪೋಷಿಸಲಿರುವ ಉಪೇಂದ್ರ

Bangalore, ಸೋಮವಾರ, 27 ಫೆಬ್ರವರಿ 2017 (12:36 IST)

Widgets Magazine

ಬಾಲಿವುಡ್‌ನ ಬ್ಲಾಕ್ ಬಸ್ಟರ್ ಸಿನಿಮಾ ತ್ರಿ ಈಡಿಯಟ್ಸ್. ಇದೀಗ ಈ ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಕೆ. ಮಾದೇಶ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಮೂಲ ಚಿತ್ರದಲ್ಲಿ ಅಮೀರ್ ಖಾನ್ ಪೋಷಿಸಿದ್ದ ರಾಂಚೋ ಪಾತ್ರವನ್ನು ಕನ್ನಡಲ್ಲಿ ರಿಯಲ್ ಸ್ಟಾರ್ ಪೋಷಿಸಲಿದ್ದಾರೆ ಎನ್ನಲಾಗಿದೆ. 
 
ಹಿಂದಿಯ ಓ ಮೈ ಗಾಡ್ ಚಿತ್ರ ಕನ್ನಡಕ್ಕೆ ಮುಕುಂದ ಮುರಾರಿ ಹೆಸರಿನಲ್ಲಿ ರೀಮೇಕ್ ಆಗಿದ್ದು ಗೊತ್ತೇ ಇದೆ. ಅದಾದ ಬಳಿಕ ಉಪೇಂದ್ರ ಕೈಗೆತ್ತಿಕೊಂಡಿರುವ ಇನ್ನೊಂದು  ರೀಮೇಕ್ ಚಿತ್ರ ಇದು. ಮೂಲಗಳ ಪ್ರಕಾರ ಕರೀನಾ ಕಪೂರ್ ಪಾತ್ರವನ್ನು ರಚಿತಾ ರಾಮ್ ಪೋಷಿಸಲಿದ್ದಾರಂತೆ. 
 
ಉಳಿದ ಪಾತ್ರವರ್ಗ, ತಾಂತ್ರಿಕ ಬಳಗ ಇನ್ನಷ್ಟೇ ಅಂತಿಮವಾಗಬೇಕಿದೆ. ರಾಜೇಶ್ ಕಟ್ಟಾ ಛಾಯಾಗ್ರಹಣ, ಸಾಧು ಕೋಕಿಲಾ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕನ್ನಡದ ಶೀರ್ಷಿಕೆ ಇನ್ನೂ ಪಕ್ಕಾ ಆಗಿಲ್ಲ. ಉಪೇಂದ್ರ ರೀಮೇಕ್ ಚಿತ್ರಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿರುವುದು ಅವರ ಅಭಿಮಾನಿಗಳಿಗೆ ಕೊಂಚ ಅಸಮಾಧಾನಕ್ಕೂ ಕಾರಣವಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರೋಡೀಸ್ ಆಡಿಶನ್ನಿನಲ್ಲಿ ಮಿಂಚು ಹರಿಸಿದ ಕನ್ನಡತಿ ಸಂಯುಕ್ತಾ ಹೆಗ್ಡೆ

ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಕನ್ನಡತಿ ಸಂಯುಕ್ತಾ ಹೆಗ್ಡೆ ಇತ್ತೀಚೆಗೆ ಪುನೆಯಲ್ಲಿ ಖಾಸಗಿ ಚಾನಲ್`ನ ...

news

ಮಾರ್ಚ್ ಮಧ್ಯಂತರದಲ್ಲಿ ಬಾಹುಬಲಿ 2 ಟ್ರೇಲರ್

ಈಗಾಗಲೆ ಬಾಹುಬಲಿ 2 ಚಿತ್ರದ ಸ್ಟಿಲ್ಸ್ ಬಿಡುಗಡೆಯಾಗಿವೆ. ಮಹಾಶಿವರಾತ್ರಿ ದಿನ ಮೋಷನ್ ಪೋಸ್ಟರನ್ನೂ ಬಿಡುಗಡೆ ...

news

ಸೇಡು-ಪ್ರತೀಕಾರದ ಸುತ್ತ ಸಾಗುವ ’ಎಳೆನೀರು’

ಸಮಾಜದಲ್ಲಿ ಗಂಡು ಮಾತ್ರ ಕೆಟ್ಟವನಲ್ಲ, ಹೆಂಗಸರಲ್ಲೂ ಅಸಹಾಯಕರಿದ್ದಂತೇ ಕೆಟ್ಟವರೂ ಇರುತ್ತಾರೆ. ಸಮಯ ...

news

ಹೆಬ್ಬುಲಿ ಚಿತ್ರತಂಡಕ್ಕಾಗಿ ಅಡುಗೆ ಭಟ್ಟನಾದ ಕಿಚ್ಚ ಸುದೀಪ್

ಬೆಂಗಳೂರು: ಹೆಬ್ಬುಲಿ ಚಿತ್ರ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಕೋಟಿ ಬಾಚಿಕೊಂಡ ಕೋಟಿ ಬಜೆಟ್ ...

Widgets Magazine Widgets Magazine