Widgets Magazine

ವೀಕೆಂಡ್ ವಿತ್ ರಮೇಶ್ ನಲ್ಲಿ ಈ ವಾರದ ಸಾಧಕನ ನೋಡಿ ಕೆಂಡಾಮಂಡಲರಾದ ವೀಕ್ಷಕರು

ಬೆಂಗಳೂರು| Krishnaveni K| Last Modified ಬುಧವಾರ, 12 ಜೂನ್ 2019 (09:05 IST)
ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್‍ ರಮೇಶ್ ಕಾರ್ಯಕ್ರಮ ಸ್ಯಾಂಡಲ್ ವುಡ್ ಸ್ಟಾರ್ ಗಳದ್ದೇ ಕಾರ್ಯಕ್ರಮವಾಗುತ್ತಿದೆ ಎಂದು ವೀಕ್ಷಕರು ಎಷ್ಟೇ ಅಪಸ್ವರವೆತ್ತಿದರೂ ವಾಹಿನಿ ಮತ್ತೆ ಮತ್ತೆ ಸಿನಿಮಾ ನಟರನ್ನೇ ಕರೆಸಿಕೊಳ್ಳುತ್ತಿದೆ.
 

ಈ ವಾರದ ಸಾಧಕನಾಗಿ ಹಾಸ್ಯ ನಟನಾಗಿ ಚಿತ್ರರಂಗಕ್ಕೆ ಬಂದು ನಂತರ ನಾಯಕನ ಪಟ್ಟಕ್ಕೇರಿದ ಶರಣ್ ಅವರನ್ನು ಸಾಧಕರ ಸೀಟ್ ಗೆ ಕರೆಸಿರುವುದು ವೀಕ್ಷಕರು ಕೆಂಡಾಮಂಡಲರಾಗುವಂತೆ ಮಾಡಿದೆ.
 
ನಿಮಗೆ ಸಿನಿಮಾದವರು ಬಿಟ್ರೆ ಬೇರೆ ಯಾರೂ ಸಿಗಲ್ವಾ ಎಂದು ಇಷ್ಟು ದಿನ ತರಾಟೆಗೆ ತೆಗೆದುಕೊಳ್ಳುತ್ತಿದ್ದ ವೀಕ್ಷಕರು ಈಗ ಬೇರೆ ಸಾಧಕರನ್ನು ಕರೆತರುವ ತನಕ ಕಾರ್ಯಕ್ರಮವೇ ನೋಡಲ್ಲ ಎಂದು ಧಮ್ಕಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ಹಲವು ಸಾಹಿತಿಗಳು, ಕ್ರೀಡಾ ಸಾಧಕರು ಮತ್ತು ಸೈನಿಕರ ಹೆಸರನ್ನು ಪಟ್ಟಿ ಮಾಡಿ ಇವರನ್ನೆಲ್ಲಾ ಕರೆಸಿ ಎಂದು ತಾಕೀತು ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :