ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನವರಸನಾಯಕ ಜಗ್ಗೇಶ್ ಜೊತೆಗೆ ಹಿಂದೆ ಪ್ರಸಾರವಾಗಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಈ ವಾರ ಮರುಪ್ರಸಾರವಾಗಲಿದೆ.ಹೇಗಿದ್ದರೂ ಹೊಸ ಕಾರ್ಯಕ್ರಮಗಳ ಚಿತ್ರೀಕರಣ ನಡೆದಿಲ್ಲ. ಹೀಗಾಗಿ ಹಳೆಯ ಕಾರ್ಯಕ್ರಮಗಳನ್ನೇ ಎಲ್ಲಾ ವಾಹಿನಿಗಳೂ ಪ್ರಸಾರ ಮಾಡುತ್ತಿವೆ. ಅದೇ ರೀತಿ ಜೀ ಕನ್ನಡ ಕೂಡಾ ತನ್ನ ಜನಪ್ರಿಯ ಕಾರ್ಯಕ್ರಮಗಳನ್ನು ಮರಳಿ ಪ್ರಸಾರ ಮಾಡುತ್ತಿದೆ.ಹಿಂದೆ ದರ್ಶನ್ ಭಾಗವಹಿಸಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಾಖಲೆಯ ಟಿಆರ್ ಪಿ ಪಡೆದಿತ್ತು.