ರಾಜಕೀಯಕ್ಕೆ ಬರುವುದರ ಬಗ್ಗೆ ನಟ ಯಶ್ ಹೇಳಿದ್ದೇನು ಗೊತ್ತಾ…?

ಬೆಂಗಳೂರು, ಶನಿವಾರ, 3 ಫೆಬ್ರವರಿ 2018 (06:26 IST)

ಬೆಂಗಳೂರು : ಸ್ಯಾಂಡಲ್‍ವುಡ್ ನಟರಾದ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಉಪೇಂದ್ರ ಸೇರಿದಂತೆ ಅನೇಕ ನಟರು ರಾಜಕೀಯಕ್ಕೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು, ಇದೀಗ ಸ್ಯಾಂಡಲ್‍ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರು ರಾಜಕೀಯಕ್ಕೆ ಬರುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

 
ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷದವರು ಸಿನಿಮಾ ನಟ-ನಟಿಯರನ್ನ ಮುಂದಿಟ್ಟುಕೊಂಡು ಪ್ರಚಾರ ನಡಿಸಲು ಮುಂದಾಗಿದ್ದು, ಈ ಬಗ್ಗೆ ಯಶ್ ಅವರನ್ನು ಕೇಳಿದಾಗ ಅವರು,’ ವಿಧಾನಸಭೆಗೆ ಅತ್ಯುತ್ತಮ ಜನಪ್ರತಿನಿಧಿಗಳು ಆಯ್ಕೆಯಾಗಬೇಕೆಂಬ ಆಸೆ ನನಗಿದೆ. ಆದರೆ ನಾನೇ ಈ ಬಾರಿ ಚುನಾವಣಾ ಕಣಕ್ಕೆ ಇಳಿಯಲಾರೆ. ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಲಾರೆ. ರಾಜಕೀಯಕ್ಕೆ ಬರುವಂತೆ ಅನೇಕರು ನನ್ನನ್ನು ಒತ್ತಾಯ ಮಾಡುತ್ತಿರುವುದು ನಿಜ. ಆದರೆ ಸದ್ಯಕ್ಕೆ ನಾನು ಅಂಥ ಯಾವುದೇ ಯೋಚನೆ ಹೊಂದಿಲ್ಲ. ನಟನಾಗಿದ್ದುಕೊಂಡೇ ಜನರಿಗಾಗಿ ಕೆಲಸ ಮಾಡುವ ಉದ್ದೇಶವನ್ನು ಹೊಂದಿದ್ದೇನೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಪಕ್ಷ ಸೇರಿಕೊಳ್ಳಲಿದ್ದಾರಾ...?

ಬಾಗಲಕೋಟೆ : ಜೀವನದಲ್ಲಿ ಎದುರಾದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಕಷ್ಟಪಟ್ಟು ಸ್ಟಾರ್ ಪಟ್ಟ ಅಲಂಕರಿಸಿದ ...

news

ಮಗನನ್ನು ಝೀರೊ ಸೈಜ್ ಮಾಡಲು ನಟಿ ಕರೀನಾ ಕಪೂರ್ ಮಾಡಿದ್ದಾದರು ಏನು ಗೊತ್ತಾ...?

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಝೀರೊ ಸೈಜ್ ನಟಿ ಎಂದೇ ಪ್ರಖ್ಯಾತಿ ಪಡೆದಿದ್ದು, ಈಗ ತಮ್ಮ ...

news

150 ಕೋಟಿ ಗಳಿಕೆಯ ಸನಿಹದಲ್ಲಿ 'ಪದ್ಮಾವತ್'

ನವದೆಹಲಿ: ಭಾರತದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾದ ಗಳಿಕೆಯನ್ನು ಮುಂದುವರಿಸುತ್ತಿರುವ 'ಪದ್ಮಾವತ್', ...

news

ನಟ ಮಂಡ್ಯ ರಮೇಶ್ ಕಾರು ಅಪಘಾತ

ಬೆಂಗಳೂರು: ಖ್ಯಾತ ಪೋಷಕ ನಟ ಮಂಡ್ಯ ರಮೇಶ್ ಚಲಾಯಿಸುತ್ತಿದ್ದ ಕಾರು ಬೆಂಗಳೂರು-ಮೈಸೂರು ನಡುವಿನ ...

Widgets Magazine
Widgets Magazine