ಬಿಗ್ ಬಾಸ್ ಮನೆಯಲ್ಲಿ ಟಾಸ್ಕನ್ನು ಗೆಲ್ಲಲು ರಿಯಾಜ್ ಹೀಗ್ಯಾಕೆ ಮಾಡಿದ್ರು…?

ಬೆಂಗಳೂರು, ಶನಿವಾರ, 6 ಜನವರಿ 2018 (07:34 IST)

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಟಾಸ್ಕಗಳಿಗಾಗಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ಮಾಡಲಾಗಿತ್ತು. ಒಂದು ತಂಡಕ್ಕೆ ಕ್ಯಾಪ್ಟನ್ ಅವರು ಮುಖಂಡರಾದರೆ, ಇನ್ನೊಂದು ತಂಡಕ್ಕೆ ಅನುಪಮ ಗೌಡ ಅವರು ಮುಖಂಡರಾಗಿದ್ದರು. ಬಿಗ್ ಬಾಸ್ ವಿವಿಧ ಸವಾಲುಗಳನ್ನು ಎರಡು ತಂಡಕ್ಕೂ ನೀಡುತ್ತಿದ್ದು, ಸದಸ್ಯರು ಕೂಡ ಅದರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

 
ಆದರೆ ನಿನ್ನೆಯ ದಿನ ಬಿಗ್ ಬಾಸ್ ಕೊನೆಯ ಸವಾಲ್ ಒಂದನ್ನು ನೀಡಿದ್ದು, ಅದರ ಪ್ರಕಾರ ತಂಡದ ಮುಖಂಡರಾದ ಅನುಪಮ ಹಾಗು ಸಮೀರ್ ಆಚಾರ್ಯ ಅವರು ಕುರ್ಚಿಯ ಮೇಲೆ ಕುಳಿತಿದ್ದು, ಎದುರಾಳಿ ತಂಡದವರು ಅವರನ್ನು ಕುರ್ಚಿಯಿಂದ ಎಬ್ಬಿಸಬೇಕಿತ್ತು. ಅದೇರೀತಿ ತಂಡದ ಸದಸ್ಯರು  ಕೂಡ ಅವರಿಬ್ಬರನ್ನು ಎಬ್ಬಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿದರು. ಸದಸ್ಯರು ಎಷ್ಟೇ ಪ್ರಯತ್ನಿಸಿದರು ಅವರು ಕುರ್ಚಿಯಿಂದ ಏಳದೇ ಹಾಗೆ ಕುಳಿತಿದ್ದರು. ಆಗ ಸಮೀರ್ ಆಚಾರ್ಯ ಅವರನ್ನು ಎಬ್ಬಿಸಲು  ಎದುರಾಳಿ ತಂಡದ ರಿಯಾಜ್ ಅವರು ಕುಳಿತಿದ್ದು ಕುರ್ಚಿಗೆ ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ್ದಾರೆ. ಆದರೂ ಸಮೀರ್ ಆಚಾರ್ಯ ಅವರು ಏಳದೇ ಹಾಗೆ ಕುಳಿತಿದ್ದು, ಕೊನೆಗೆ ಟಾಸ್ಕನ್ನು ಗೆದ್ದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಐಶ್ವರ್ಯಾ ರೈ ಬಚ್ಚನ್ ಅವರು ಸಿನಿಮಾವೊಂದರಲ್ಲಿ ನಟಿಸಲು ಕೇಳಿದ ಸಂಭಾವನೆ ಎಷ್ಟು ಗೊತ್ತಾ...?

ಮುಂಬೈ: ತಾಯಿಯಾದ ಮೇಲೂ ಬಾಲಿವುಡ್ ನಟಿಯರು ತಮ್ಮ ಗ್ಲಾಮರ್ ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಬಾಲಿವುಡ್ ನಟಿ ...

news

ಇಂದು ದೀಪಿಕಾ ಪಡುಕೋಣೆ ಜನ್ಮದಿನ: ನೀವೂ ಹಾರೈಸಿ

ಮುಂಬೈ: ಬಾಲಿವುಡ್ ಮತ್ತು ಹಾಲಿವುಡ್ ತಾರೆಯಾಗಿ ಮಿನುಗುತ್ತಿರುವ ದೀಪಿಕಾ ಪಡುಕೋಣೆಗೆ ಇಂದು 32ನೇ ಜನ್ಮದಿನ.

news

ರವಿಚಂದ್ರನ ಪುತ್ರನ ಸಿನೆಮಾ 'ಬೃಹಸ್ಪತಿ' ಇಂದು ತೆರೆಯಮೇಲೆ...!!

ನಂದ ಕಿಶೋರ್ ಅವರು ನಿರ್ದೇಶಿಸಿರುವ, ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ಮೊದಲ ಬಾರಿ ನಾಯಕ ನಟನಾಗಿ ...

news

ನಟನಿಂದ ಮತ್ತೊಬ್ಬ ನಟಿಗೆ ಲೈಂಗಿಕ ಕಿರುಕುಳ; ಕೇಸ್ ದಾಖಲು

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಲವ್ ಸ್ಟೋರಿ ವಿವಾದ ನಡೆದಿದ್ದು, ‘ನಮಿತಾ ಐ ಲವ್ ಯೂ’ ...

Widgets Magazine
Widgets Magazine