ಟಗರು ಸಿನಿಮಾ ಹಾಗೂ ಶಿವರಾಜ್ ಕುಮಾರ್ ಕುರಿತು ನಟ ಸುದೀಪ್ ಹೇಳಿದ್ದೇನು ಗೊತ್ತಾ…?

ಬೆಂಗಳೂರು, ಮಂಗಳವಾರ, 6 ಮಾರ್ಚ್ 2018 (09:00 IST)

ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾದ ಕುರಿತು ಸಾಕಷ್ಟು ಜನ ಮೆಚ್ಚುಗೆ ಮಾತನಾಡಿದ್ದಾರೆ. ಈಗ ನಟ ಸುದೀಪ್ ಕೂಡ ಈ ಸಿನಿಮಾದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚಿತ್ರದ ಮೇಕಿಂಗ್ ತುಂಬಾ ಇಷ್ಟ ಆಯ್ತು. ಮೊದಲಿಗೆ ಸ್ವಲ್ಪ ಮಟ್ಟಿನ ಗೊಂದಲ ಅನಿಸುತ್ತೆ. ಹಲವಾರು ಪಾತ್ರಗಳು ಗಲಿಬಿಲಿಗೊಳಿಸುತ್ತವೆ. ಆದರೆ ಕತೆ ಮುಂದುವರಿದಂತೆ ನಿರ್ದೇಶಕರು ಎಲ್ಲಾ ಗೊಂದಲಗಳನ್ನು ಒಂದೊಂದಾಗಿ ನಿವಾರಿಸುತ್ತಾರೆ. ನಿರೂಪಣೆ ಅದ್ಭುತವಾಗಿದೆ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಒಂದು ಬಗೆಯಲ್ಲಿ ಕಥೆಯನ್ನು ನಿರೂಪಿಸಿರುವ ರೀತಿ ಇಷ್ಟವಾಗುತ್ತದೆ. ಸೂರಿ ಅವರಿಗೆ ಇಂತಹ ಚಿತ್ರಕಥೆ ಮತ್ತು ಪಾತ್ರಗಳನ್ನು ಹೆಣೆಯುವಲ್ಲಿ ಅವರಿಗೆ ಅವರೇ ಸಾಟಿ. ಪಾತ್ರಗಳಿಗೆ ಹೆಸರುಗಳನ್ನು ಕೊಡುವಲ್ಲೂ ಅವರು ವಿಶ್ವಕೋಶ ಇದ್ದಂತೆ. ಥಿಯೇಟರ್‌ನಿಂದ ಹೊರಬಂದ ಬಳಿಕವೂ ಚಿಟ್ಟೆ, ಕಾಕ್ರೋಚ್ ಮುಂತಾದ ಎಲ್ಲಾ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.


ಶಿವಣ್ಣನಿಗೆ ಆ ಎನರ್ಜಿ ಎಲ್ಲಿಂದ ಬರುತ್ತದೆ. ಧನಂಜಯ್ ಅವರ ಪಾತ್ರವೂ ಇಷ್ಟವಾಯಿತು. ವಸಿಷ್ಠ ಸಿಂಹ ಧ್ವನಿ, ಹಿನ್ನೆಲೆ ಸಂಗೀತ ಚೆನ್ನಾಗಿದೆ. ಒಂದು ಭಿನ್ನ ರೀತಿಯ ಚಿತ್ರ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ ಕಿಚ್ಚ ಸುದೀಪ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವೈ.ಎಸ್.ರೆಡ್ಡಿ ಪಾತ್ರಕ್ಕೆ ಸಜ್ಜಾದ ಮಮ್ಮುಟ್ಟಿ

ಚೆನ್ನೈ: ಮಲೆಯಾಳಂನ ಮೆಗಾ ಸ್ಟಾರ್ ಮಮ್ಮುಟ್ಟಿ ಅವರು ಹೊಸ ಪಾತ್ರವೊಂದಕ್ಕೆ ಸಜ್ಜಾಗಿದ್ದಾರೆ. ತೆಲುಗಿನ ...

news

ಶ್ರೀದೇವಿ ಜೀವನ ಆಧಾರಿತ ಸಿನಿಮಾಕ್ಕೆ ರಾಮ್ ಗೋಪಾಲ್ ವರ್ಮಾ ಸಜ್ಜು!

ಮುಂಬೈ: ಇತ್ತೀಚೆಗಷ್ಟೇ ನಿಧನರಾದ ಬಾಲಿವುಡ್ ನ ಮೋಹಕ ತಾರೆ ಶ್ರೀದೇವಿ ಅವರ ಜೀವನ ಆಧಾರಿತ ಸಿನಿಮಾ ...

news

ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಸಂಭಾವನೆ ಎಷ್ಟು ಗೊತ್ತಾ...? ಕೇಳಿದ್ರೆ ಶಾಕ್ ಆಗ್ತಿರಿ!

ಮುಂಬೈ: ಕಣ್ಸನ್ನೆ ಮೂಲಕ ಎಲ್ಲರಲ್ಲೂ ಸಂಚಲನ ಮೂಡಿಸಿರುವ ನಟಿ ಪ್ರಿಯಾ ಪ್ರಕಾಶ್ ಈಗ ಸಾಮಾಜಿಕ ಜಾಲತಾಣದಲ್ಲಿ ...

news

ಟ್ರೋಲ್ ಮಾಡಿದವರಿಗೆ ಸಖತ್ ಆಗಿ ಟಾಂಗ್ ಕೊಟ್ಟ ಸಂಯುಕ್ತ

ಬೆಂಗಳೂರು: ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಎಲ್ಲಿ ಹೋದರೂ ಕಿರಿಕ್ ಮಾಡಿಕೊಳ್ಳುತ್ತಿರುತ್ತಾರೆ. ಸಾಕಷ್ಟು ...

Widgets Magazine