ರಾಧಿಕಾ ಬರ್ತ್ ಡೇಗೆ ಯಶ್ ಕೊಟ್ಟ ಉಡುಗೊರೆ ಏನು ಗೊತ್ತಾ?!

Bangalore, ಮಂಗಳವಾರ, 7 ಮಾರ್ಚ್ 2017 (12:32 IST)

Widgets Magazine

ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್  ರಾಧಿಕಾ ಪಂಡಿತ್ ಬರ್ತ್ ಡೇ. ಅಭಿಮಾನಿಗಳೊಂದಿಗೆ ಜನುಮದಿನ ಆಚರಿಸಿಕೊಂಡ ರಾಧಿಕಾ ಹಳೆಯ ಜನುಮ ದಿನದ ನೆನಪು ಮೆಲುಕು ಹಾಕಿದ್ದಾರೆ.


 
ಪ್ರತೀ ವರ್ಷ ಯಶ್ ತಮಗೆ ವಿಶೇಷ ಗಿಫ್ಟ್ ಕೊಡುತ್ತಾರೆ ಎಂದ ರಾಧಿಕಾ ಹಿಂದೊಮ್ಮೆ ನೀಡಿದ್ದ ವಿಶಿಷ್ಟ ಗಿಫ್ಟ್ ನೆನಪಿಸಿಕೊಂಡು ಪತಿಯ ಕಾಲೆಳೆದರು. ಅಷ್ಟಕ್ಕೂ ಯಶ್ ಕೊಟ್ಟ ಗಿಫ್ಟ್ ಏನಾಗಿತ್ತು ಗೊತ್ತಾ? ಕೊತ್ತಂಬರಿ ಸೊಪ್ಪು!
 
ಹೌದು. ಶೂಟಿಂಗ್ ಮುಗಿಸಿ ಬರುವಾಗ ಲೇಟ್ ಆಗಿತ್ತು. ಗಿಫ್ಟ್ ಕೊಡಲು ಬೊಕೆ ಖರೀದಿಸೋಣವೆಂದರೆ, ಅಂಗಡಿಯೆಲ್ಲಾ ಬಂದ್! ಏನು ಮಾಡೋದು ಎಂದು ಯೋಚಿಸುತ್ತಿದ್ದ ಯಶ್ ಗೆ ಮಾರ್ಕೆಟ್ ಬಳಿ ಬಂದಾಗ ಆಗ ತಾನೇ ಕೊತ್ತಂಬರಿ ಸೊಪ್ಪಿನ ಕಟ್ಟು ಇಳಿಸುತ್ತಿದ್ದುದು ಕಂಡು ಬಂತಂತೆ.
 
ಹಾಗಾಗಿ ದೊಡ್ಡ ಕಟ್ಟು ಕೊತ್ತಂಬರಿ ಸೊಪ್ಪು ಖರೀದಿಸಿ ಅದನ್ನೇ ನೀಟಾಗಿ ಕತ್ತರಿಸಿ ಬೊಕೆ ಥರಾ ರಾಧಿಕಾಗೆ ಪ್ರೆಸೆಂಟ್ ಮಾಡಿದ್ದರಂತೆ ರಾಕಿಂಗ್ ಸ್ಟಾರ್! ಆದರೆ ಈ ಬಾರಿ ಏನು ಗಿಫ್ಟ್ ಎಂದು ಮಾತ್ರ ರಾಧಿಕಾ ಹೇಳಿಲ್ಲ. ಮದುವೆಯಾದ ಮೇಲೆ ಮೊದಲ ಬರ್ತ್ ಡೇ ಇದಾದ್ದರಿಂದ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗಾಗಿ 7 ಕೆ. ಜಿ. ತೂಕದ ಕೇಕ್ ತಂದಿದ್ದರು. ಅವರ ಸಮ್ಮುಖದಲ್ಲೇ ಬರ್ತ್ ಡೇ ಆಚರಿಸಿಕೊಂಡು ಖುಷಿ ಪಟ್ಟರು ರಾಧಿಕಾ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಧಿಕಾ ಪಂಡಿತ್ ಯಶ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿ Yash Sandalwood Radhika Pandith Kannada Film News

Widgets Magazine

ಸ್ಯಾಂಡಲ್ ವುಡ್

news

ಎರಡೇ ಮಾತುಗಳಲ್ಲಿ ಖಡಕ್ ಎಚ್ಚರಿಕೆ ಕೊಟ್ಟ ಕಿಚ್ಚ ಸುದೀಪ್

ನಾನು, ಸುದೀಪ್ ಇನ್ಮುಂದೆ ಸ್ನೇಹಿತರಲ್ಲ ಎಂದು ಇತ್ತೀಚೆಗೆ ದರ್ಶನ್ ಮಾಡಿದ್ದ ಟ್ವೀಟ್ ಭಾರೀ ಸಂಚಲನಕ್ಕೆ ...

news

ಅಭಿಮಾನಿಗೆ ಮಿಡಿದ ಶಿವರಾಜ್ ಕುಮಾರ್ ಹೃದಯ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರನ್ನು ಆರಾಧಿಸುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ...

news

ತುಮಕೂರಿನಲ್ಲಿ ಸುದೀಪ್ ಅಭಿಮಾನಿ ಸಾವು

ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವಿನ ಭಿನ್ನಾಭಿಪ್ರಾಯ ತಾರಕ್ಕೇರಿರುವ ಸಂದರ್ಭದಲ್ಲೇ ...

news

ಹಿರಿಯ ನಟಿ ಪದ್ಮಾ ಕುಮುಟಾ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಾ ಕುಮುಟಾ(58) ಕೊನೆಯುಸಿರೆಳೆದಿದ್ದಾರೆ.ಅವರಿಗೆ 58 ವರ್ಷ ...

Widgets Magazine