ತನ್ನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ನಟಿಗೆ ರವಿಚಂದ್ರನ್ ಬುದ್ಧಿ ಕಲಿಸಿದ್ದು ಹೇಗೆ ಗೊತ್ತಾ..?

ಬೆಂಗಳೂರು, ಸೋಮವಾರ, 12 ಜೂನ್ 2017 (20:09 IST)

Widgets Magazine

ರವಿಚಂದ್ರನ್..  ಕನ್ನಡ ಚಿತ್ರರಂಗದ ಕನಸುಗಾರ. ಸಿನಿಮಾ ಬಿಟ್ಟರೆ ನನಗೇನು ಗೊತ್ತಿಲ್ಲ ಎನ್ನುವ ರವಿಚಂದ್ರನ್ ಅಷ್ಟು ಶ್ರದ್ಧೆಯಿಂದ ಸಿನಿಮಾ ಮೇಕಿಂಗ್`ನಲ್ಲಿ ತೊಡಗುತ್ತಾರೆ. ಆಕ್ಟಿಂಗ್ ಡೈರೆಕ್ಟಿಂಗ್, ಮ್ಯೂಸಿಕ್ ಹೀಗೆ ಎಲ್ಲ ವಿಭಾಗದಲ್ಲೂ ರವಿಚಂದ್ರನ್ ಸೈ ಎನಿಸಿಕೊಂಡಿದ್ದಾರೆ.


ಬಾಲಿವುಡ್, ಟಾಲಿವುಡ್ ಚಿತ್ರರಂಗವನ್ನ ಸ್ಯಾಂಡಲ್ ವುಡ್`ನತ್ತ ನೋಡುವಂತೆ ಮಾಡಿದ್ದ ಕಲೆಗಾರ. ಇಂತಹ ಮಹಾನ್ ಕಲಾವಿದನ ಮೇಲೆ ಅದೊಂದು ದಿನ ಅತ್ಯಾಚಾರದ ಆರೋಪ ಕೇಳಿಬಂದಿತ್ತು. ಆ ಕಹಿದಿನಗಳ ಬಗ್ಗೆ ಸೂಪರ್ ಟಾಮ್ ಟೈಮ್ ಕಾರ್ಯಕ್ರಮದಲ್ಲಿ ಸ್ವತಃ ರವಿಚಂದ್ರನ್ ಹೇಳಿಕೊಂಡಿದ್ದಾರೆ.

ಹಳ್ಳಿಮೇಷ್ಟ್ರು ಚಿತ್ರದಲ್ಲಿ ನಟಿಸಿದ್ದ ನಟಿ ಬಿಂದಿಯಾ ಚಿತ್ರೀಕರಣದ ಸಂದರ್ಭ ಸಿಬ್ಬಂದಿ ಜೊತೆ ಜಗಳ ಕಾದಿದ್ದು ಸಾಲವೆಂಬಂತೆ ಮುಂಬೈಗೆ ತೆರಳಿ ರವಿಚಂದ್ರನ್ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದರು. ಮೈಸೂರು ಹೋಟೆಲ್`ವೊಂದರಲ್ಲಿ ರಾತ್ರಿ 12 ಗಂಟೆ ವೇಳೆ ರವಿಚಂದ್ರನ್ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಮುಂಬೈ ಮ್ಯಾಗಜಿನ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಇದರಿಂದ ನೋವುಂಡ ರವಿಚಂದ್ರನ್ ಅತ್ಯಾಚಾರ ಸಾಬೀತು ಮಾಡೆಂದು ನಟಿ ಸೇರಿ ಐವರ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದರು. ಬೆಂಗಳೂರಿಗೆ ಬಂದ ನಟಿ ನಾನು ಆ ರೀತಿಯ ಹೇಳಿಕೆ ನೀಡಿಯೇ ಎಲ್ಲ ಎಂದು ಕ್ಷಮೆ ಕೋರಿದರಂತೆ. ಆದರೆ, ವಿನಾಕಾರಣ ಆರೋಪ ಮಾಡಿದ್ದಕ್ಕಾಗಿ ಒಂದು ದಿನವಾದರೂ ಜೈಲಿನಲ್ಲಿರಬೇಕೆಂದು ರವಿಚಂದ್ರನ್ ಆಕೆಯನ್ನ ಜೈಲಿಗಟ್ಟಿದ್ದರಂತೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/Widgets Magazine
ಇದರಲ್ಲಿ ಇನ್ನಷ್ಟು ಓದಿ :  
ವಾಟ್ಸಾಪ್ ಬ್ಲಾಕ್ ಬೆರ್ರಿ ಸಾಮಾಜಿಕ ಜಾಲತಾಣ Message Black Berry Whats App

Widgets Magazine

ಸ್ಯಾಂಡಲ್ ವುಡ್

news

ಟರ್ಕಿಯಲ್ಲಿ ಭಾರತದ ನಟಿಯನ್ನ ದೋಚಿದ ಕ್ಯಾಬ್ ಡ್ರೈವರ್

ಬಾಬಿಜಿ ಘರ್ ಪರ್ ಹೈ ಧಾರಾವಾಹಿಯ ಜನಪ್ರಿಯ ನಟಿ ಸೌಮ್ಯ ಟಂಡನ್ ಅವರ ಬಳಿ ಟರ್ಕಿಯ ಇಸ್ತಾಂಬುಲ್`ನಲ್ಲಿ ...

news

ಟಾಯ್ಲೆಟ್-ಎಕ್ ಪ್ರೇಮ್ ಕಥಾ ತ್ರೇಲರ್ ಬಿಡುಗಡೆ

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಯ್ಲೆಟ್ ಎಕ್ ಪ್ರೇಮ್ ಕಥಾ’ ಟ್ರೇಲರ್‌ ...

news

ಆಸ್ಟ್ರೇಲಿಯಾಗೆ ಹಾರಲಿರುವ ‘ರಾಧಾ ರಮಣ’ ಧಾರವಾಹಿ ಜೋಡಿ!

ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಜನಪ್ರಿಯವಾಗಿರುವ ಧಾರವಾಹಿ ರಾಧಾ ರಮಣ. ಕನ್ನಡ ಟೀಚರ್ ರಾಧಾ ...

news

ಲೂಸ್ ಮಾದ ಯೋಗಿ ಎಂಗೇಜ್ಡ್!

ಬೆಂಗಳೂರು: ದುನಿಯಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತರಾದ ನಟ ಲೂಸ್ ಮಾದ ಯೋಗಿ ವಿವಾಹ ...

Widgets Magazine