ನಟ ಯಶ್ ಗೆ ಯಾವ ಮಗು ಬೇಕಂತೆ ಗೊತ್ತಾ?

ಬೆಂಗಳೂರು, ಸೋಮವಾರ, 3 ಸೆಪ್ಟಂಬರ್ 2018 (12:04 IST)

ಬೆಂಗಳೂರು : ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಯಶ್ ಹಾಗೂ ರಾಧಿಕಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದರ ಜೊತೆಗೆ ಇತ್ತೀಚೆಗೆ  ನಟ ಯಶ್ ಅವರು ತಮಗೆ ಯಾವ ಮಗು ಬೇಕು ಎಂಬ ತಮ್ಮ ಮನದ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.


ಇತ್ತೀಚೆಗಷ್ಟೇ ಯಶ್- ರಾಧಿಕಾ ತಮಗೆ ಮಗು ಆಗುತ್ತಿರುವ ಖುಷಿ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಅವರು ಈ ವಿಚಾರವನ್ನು ಬಹಿರಂಗಪಡಿಸುತ್ತಲೇ ರಾಧಿಕಾ ಹಾಗೂ ರಾಕಿಂಗ್ ಸ್ಟಾರ್ ಯಶ್ ದಂಪತಿಗೆ ಜನಿಸಲಿರುವ ಮಗುವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯಲು  ಶುರುವಾಗಿತ್ತು.


ಕೆಲ ಅಭಿಮಾನಿಗಳು ಗಂಡು ಮಗು ಜನಿಸುವ ನಿರೀಕ್ಷೆಯಲ್ಲಿದ್ದು ಮರಿ ಯಶ್ ಹುಟ್ಟಲಿ ಎಂದು ಬಯಸಿದರೆ ಇನ್ನು ಹಲವರು ಹೆಣ್ಣು ಮಗು ಜನಿಸಬೇಕೆಂದು ಬಯಸಿದ್ದಾರೆ. ಆದರೆ ಅದರ ಜೊತೆಗೆ  ಇದೀಗ ನಟ ಯಶ್ ಅವರು ತಮಗೆ ಯಾವ ಮಗು ಹುಟ್ಟಿದರೆ ಒಳ್ಳೆಯದು ಎಂದು ತಮ್ಮ ಮನದಾಸೆಯನ್ನು ಹೇಳಿಕೊಂಡಿದ್ದಾರೆ.


ಸಹಜವಾಗಿ ಗಂಡು ಮಗು ಅಥವಾ ಹೆಣ್ಣು ಮಗು ಯಾವುದೇ ಆದ್ರು ರಾಕಿಂಗ್ ಸ್ಟಾರ್ ದಂಪತಿಗೆ ಖುಷಿಯೇ. ಆದ್ರೆ, ಯಶ್ ಅವರಿಗೆ ಒಂದು ಕಡೆ ಹೆಣ್ಣು ಮಗು ಅಂದ್ರೆ ತುಂಬಾ ಇಷ್ಟವಂತೆ. ಯಾಕಂದ್ರೆ, ಯಶ್ ಮನೆಯಲ್ಲಿ ಗಂಡು ಮಕ್ಕಳು ಹೆಚ್ಚಿದ್ದಾರೆ. ಹೀಗಾಗಿ, ರಾಧಿಕಾ ಪಂಡಿತ್ ಗೆ ಹೆಣ್ಣು ಮಗು ಆಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅದಾ ಶರ್ಮಾರವರ ಕಸರತ್ತು ನೋಡಿ ಅಭಿಮಾನಿಗಳು ಫುಲ್ ಫಿದಾ

ಮುಂಬೈ: ಟಾಲಿವುಡ್ ನ 'ಹಾರ್ಟ್ ಅಟ್ಯಾಕ್' ಚಿತ್ರದ ನಟಿ ಅದಾ ಶರ್ಮಾ ಅವರು ನೋಡುಗರಿಗೆ ಹಾರ್ಟ್ ಅಟ್ಯಾಕ್ ...

news

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು 45 ನೇ ...

news

ಕೆಸಿಸಿ ಟೂರ್ನಿಗೆ ದರ್ಶನ್ ಬರಬಾರದು ಅಂತ ಯಾರು ತಡೆದಿಲ್ಲ ಎಂದ ಸುದೀಪ್

ಬೆಂಗಳೂರು : ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಆರಂಭಿಸಿದ ಕರ್ನಾಟಕ ಚಲನಚಿತ್ರ ಕಪ್ ...

news

ಪ್ರಿಯಾಂಕ ಚೋಪ್ರಾ ಬ್ಯಾಗ್ ಹಾಗೂ ಜೀನ್ಸ್ ಪ್ಯಾಂಟ್ ಬೆಲೆ ಕೇಳಿದ್ರೆ ದಂಗಾಗುತ್ತೀರಾ?

ಮುಂಬೈ : ರಜೆ ದಿನಗಳನ್ನು ಕಳೆಯುತ್ತಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಕೈಯಲ್ಲಿ ಹಿಡಿದುಕೊಂಡಿರುವ ...

Widgets Magazine