ಮೊದಲನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಯಾರು…?

ಬೆಂಗಳೂರು, ಶನಿವಾರ, 21 ಅಕ್ಟೋಬರ್ 2017 (21:36 IST)

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ಎಲಿಮಿನೇಷನ್ ಶುರುವಾಗಿದೆ. ಈ ವಾರ ದೊಡ್ಮನೆಯಿಂದ ಸುಮಾ ಹೊರಬಂದಿದ್ದಾರೆ.


ಈ ವಾರ 7 ಮಂದಿ ನಾಮಿನೇಟ್ ಆಗಿದ್ದರು. ಬಾರ್ಬಿ ಡಾಲ್ ನಿವೇದಿತಾ ಗೌಡ ಕ್ಯಾಪ್ಟನ್ ನಿಂದ ಡೈರೆಕ್ಟ್ ನಾಮಿನೇಟ್ ಆಗಿದ್ದರು. ಈ ಪೈಕಿ ಜಯಶ್ರೀನಿವಾಸನ್, ಜೆಕೆ, ನಿವೇದಿತಾ, ದಿವಾಕರ್, ಜಗನ್, ಸೇಫ್ ಆಗಿದ್ದು, ಸುಮಾ ಎಲಿಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ `ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಮಾತನಾಡುವಾಗ ಕಿಚ್ಚ ಸುದೀಪ್ ಕೇಳಿದ ಪ್ರಶ್ನೆಯೇ ಬೇರೆ. ನಿವೇದಿತಾ ಗೌಡ ಉತ್ತರ ನೀಡಿದ್ದೇ ಬೇರೆ. ಬರೀ ಜರ್ನಿ ಮಾಡಿ ಸುಸ್ತಾಗಿದ್ದು, ಮನೆಯಲ್ಲಿ ಬಾರ್ಬಿ ಡಾಲ್ ಗೆ ಡಾನ್ಸ್ ಮಾಡುವ ಅವಕಾಶವೇ ಸಿಕ್ಕಿಲ್ಲವಂತೆ. ಅಲ್ಲದೆ ಬಿಗ್ ಬಾಸ್ ಮನೆಗೆ ಬಂದ ಮೇಲೆ ಮನೆಯ ನೆನಪು, ಮೊಬೈಲ್ ಅನ್ನಿಸಿಲ್ಲವಂತೆ. ಹೀಗಾಗಿ ಪ್ಲೀಸ್ ನನ್ನನ್ನು ಮನೆಯಿಂದ ಹೊರಗೆ ಕಳಿಸಬೇಡಿ ಎಂದು ಕಿಚ್ಚನ ಬಳಿ ರಿಕ್ಷೆಸ್ಟ್ ಮಾಡಿದ್ರು.

ಸುಮಾ ಅವರು ಮನೆಯಿಂದ ತೆರಳುವಾಗ ಬಿಗ್ ಬಾಸ್ ಸೂಪರ್ ಅಧಿಕಾರ ನೀಡಿದ್ದರು. ಈ ಸೂಪರ್ ಅಧಿಕಾರವನ್ನ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಬಳಸುವಂತೆ ಆದೇಶ ನೀಡಿದ್ರು. ಅಂತೆಯೇ ಸುಮಾ ಈ ಸೂಪರ್ ಅಧಿಕಾರವನ್ನು ಸಿಹಿಕಹಿ ಚಂದ್ರು ಅವರಿಗೆ ಈ ಅಧಿಕಾರವನ್ನ ನೀಡಿದ್ರು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮದುವೆಗೂ ಮೊದಲೇ ಕೊಹ್ಲಿ ಅನುಷ್ಕಾ ಮಾಡಿದ ಶಪಥ ಎಂಥಾದ್ದು ನೋಡಿ…

ಮುಂಬೈ: ವಿರಾಟ್ ಹಾಗೂ ಅನುಷ್ಕಾ ಶರ್ಮಾ ಲವ್ ಬರ್ಡ್ಸ್ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ...

news

ಸಂಜಯ್ ದತ್ ಮಗಳ ಸೆಕ್ಸಿ ಫೋಟೊ ವೈರಲ್

ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಪುತ್ರಿ ತ್ರಿಶಲಾ ಸೆಕ್ಸಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ...

news

ಧೈರ್ಯ ಸಾಬೀತು ಪಡಿಸಲು ಬಿಗ್ ಬಾಸ್ ಕೊಟ್ಟಿದ್ದು ಈ ಟಾಸ್ಕ್

ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ನಿನ್ನೆ ವಿಶೇಷ ಟಾಸ್ಕ್ ಇತ್ತು. ಕಡಿಮೆ ಧೈರ್ಯವಿರುವ ಸ್ಪರ್ಧಿಗಳ ಧೈರ್ಯ ...

news

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಲಂಡನ್ ನಲ್ಲಿ ಗೌರವ

ಲಂಡನ್: ಸ್ಯಾಂಡಲ್ ವುಡ್ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಲಂಡನ್ ನಲ್ಲಿ ಪ್ರತಿಷ್ಠಿತ ಪ್ರಶಸ್ತಿ ...

Widgets Magazine
Widgets Magazine