ನಾಗರಹಾವು' ಸಿನಿಮಾದ ಒನಕೆ ಓಬವ್ವನ ಪಾತ್ರಕ್ಕೆ ಜಯಂತಿಗಿಂತ ಮೊದಲು ಆಯ್ಕೆಯಾಗಿದ್ದು ಯಾರು ಗೊತ್ತೇ

ಬೆಂಗಳೂರು, ಶನಿವಾರ, 14 ಜುಲೈ 2018 (07:05 IST)

ಬೆಂಗಳೂರು : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರು ನಟಿಸಿದ ಹಿಟ್ ಸಿನಿಮಾ 'ನಾಗರಹಾವು' ಈಗ ಮತ್ತೆ ತೆರೆ ಮೇಲೆ ಬರುತ್ತಿದ್ದು, ಇದೇ ಜುಲೈ 20 ರಂದು ಈ ಸಿನಿಮಾ ಹೊಸ ರೂಪದಲ್ಲಿ ಮರು ಬಿಡುಗಡೆಯಾಗುತ್ತಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ.


ಈ  ಚಿತ್ರದಲ್ಲಿ ಎಲ್ಲರ ಗಮನ ಸೆಳೆದ ಪಾತ್ರವೆಂದರೆ ಅದು  ಹಾಡೋಂದರಲ್ಲಿ ಬರುವ ಓಬವ್ವಳ ಪಾತ್ರ. ಈ ಪಾತ್ರವನ್ನು ಕನ್ನಡದ ಖ್ಯಾತ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅವರು ನಟಿಸಿ ಎಲ್ಲರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು. ಆದರೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಈ ಪಾತ್ರಕ್ಕೆ ಮೊದಲು ಆಯ್ಕೆ ಮಾಡಿದ್ದು, ಮಿನುಗುತಾರೆ ಕಲ್ಪನ ಅವರನ್ನಂತೆ.


ಆದರೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಕಲ್ಪನಾ ಅವರನ್ನು ಭೇಟಿ ಮಾಡಿ 'ನಾಗರಹಾವು' ಚಿತ್ರದಲ್ಲಿನ ಒನಕೆ ಓಬವ್ವ ಪಾತ್ರದಲ್ಲಿ ನೀವು ಅಭಿನಯಿಸುತ್ತೀರಾ ಎಂದು ಕೇಳಿದ್ದಕ್ಕೆ ದಿಟ್ಟಿಸಿ ನೋಡಿದ ಕಲ್ಪನಾ ಅವರು, 'ಅಂತಹ ತುಕಡಾ ಕ್ಯಾರೆಕ್ಟರ್, ನಾನು ಮಾಡೋದಿಲ್ಲ' ಅಂತ ಕಡ್ಡಿ ತುಂಡಾಗುವ ಹಾಗೆ ಹೇಳಿದ್ರಂತೆ. ಕೊನೆಗೆ ಪುಟ್ಟಣ್ಣ ಅವರು ಜಯಂತಿ ಅವರನ್ನು ಕೇಳಿದಾಗ ‘ನಿಮ್ಮ ಸಿನಿಮಾದಲ್ಲಿ ನಾನು ಅಭಿನಯಿಸುತ್ತೇನೆ' ಎಂದು ಒಂದೇ ಉಸಿರಲ್ಲಿ ಓಕೆ ಹೇಳಿದ್ದರಂತೆ. ಈ ವಿಚಾರವನ್ನು ಇತ್ತೀಚೆಗೆ ಸ್ವತಃ ನಟಿ ಜಯಂತಿ ಅವರೇ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಶಿವರಾಜ್ ಕುಮಾರ್ ನನ್ನ ಹಿಂದಿನ ಜನ್ಮದ ಸಹೋದರ ಎಂದು ನಟ ಜಗ್ಗೇಶ್ ಹೇಳಿದ್ದು ಯಾಕೆ?

ಬೆಂಗಳೂರು : ಕನ್ನಡದ ಖ್ಯಾತ ನಟರೊಬ್ಬರು ಸ್ಯಾಂಡಲ್ ವುಡ್ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರನ್ನು ...

news

ದ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ಚಿತ್ರದ ಟ್ರೈಲರ್: 9.7 ಮಿಲಿಯನ್ ವಿಕ್ಷಣೆ

ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನಾಧಾರಿತ ವೆಬ್ ಸಿರೀಸ್ ಕರಣ್ ಜೀತ್ ಕೌರ್ – ದ ಅನ್ ಟೋಲ್ಡ್ ಸ್ಟೋರಿ ಆಫ್ ...

news

ಆಸ್ಪತ್ರೆಗೆ ದಾಖಲಾದ ನಟ ಪವನ್ ಕಲ್ಯಾಣ

ಹೈದರಾಬಾದ್ : ಜನಸೇನಾ ಪಕ್ಷದ ಸಂಸ್ಥಾಪಕ, ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ...

news

ಆಟೋ ಓಡಿಸಿ ಸಾರ್ವಜನಿಕರಿಗೆ ಸಹಾಯ ಮಾಡಿದ ನಟ ಧ್ರುವ ಸರ್ಜಾ!

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹಲವು ರೀತಿಯ ರಿಯಾಲಿಟಿ ಶೋಗಳು ಬರುತ್ತಿವೆ. ಆದರೆ ಉದಯ ಟಿವಿಯಲ್ಲಿ ...

Widgets Magazine
Widgets Magazine