ಉಡುಪಿಯ ಕೃಷ್ಣ ದೇವಸ್ಥಾನದ ಎದುರು ಭಿಕ್ಷೆ ಬೇಡಿದ ಈ ನಟ ಯಾರು ಗೊತ್ತಾ?

ಬೆಂಗಳೂರು, ಶುಕ್ರವಾರ, 15 ಜೂನ್ 2018 (09:15 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಟರೊಬ್ಬರು ಉಡುಪಿಯ ಕೃಷ್ಣ ದೇವಸ್ಥಾನದ ಎದುರು ಭಿಕ್ಷುಕನನ ವೇಷದಲ್ಲಿ ಭಿಕ್ಷೆ ಬೇಡಿದ್ದಾರೆ.


ಹೌದು. ಆ ನಟ ಬೇರೆ ಯಾರು ಅಲ್ಲ. ಚಿರಂಜೀವಿ ಸರ್ಜಾ. ಅವರು ಉಡುಪಿಯ ಕೃಷ್ಣ ದೇವಸ್ಥಾನದ ಎದುರು ಭಿಕ್ಷೆ ಬೇಡಲು ಕಾರಣವಿಷ್ಟೇ ನಿರ್ದೇಶಕ ಚೈತನ್ಯ ಅವರ 'ಅಮ್ಮಾ ಐ ಲವ್‌ ಯೂ'. ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರು  ಡಬಲ್‌ ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ಯಂತ ಶ್ರೀಮಂತನಾಗಿ ಮತ್ತು ಭಿಕ್ಷುಕನಾಗಿ ಎರಡೂ ರೀತಿಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಆದಕಾರಣ ಈ ಚಿತ್ರದ ಭಿಕ್ಷುಕನ ಪಾತ್ರದ ದೃಶ್ಯಕ್ಕಾಗಿ ಅವರು ಉಡುಪಿಯ ಕೃಷ್ಣ ದೇವಸ್ಥಾನದ ಎದುರು ಭಿಕ್ಷೆ ಬೇಡಿದ್ದಾರೆ.


'ಭಿಕ್ಷುಕನಾಗಿ ನಟಿಸುವಾಗ ನಿಜವಾಗಿಯೂ ಬಹಳ ಕಷ್ಟ ಆಯ್ತು. ನಮ್ಮತನವನ್ನು ಬಿಟ್ಟು ನಟಿಸಬೇಕಿತ್ತು. ಮುಜುಗರ ಆಗ್ತಿತ್ತು. ಇಂತಹ ನಟನೆಗೆ ಯಾರೇ ಆದರೂ ಹಿಂಜರಿಯುತ್ತಾರೆ. ಶೂಟ್‌ನಲ್ಲಿ ಮೊದಲು ಬಹಳ ಕಷ್ಟಪಟ್ಟೆ. ನಿಜವಾಗಲೂ ಇಂಥ ಸ್ಥಿತಿಯಲ್ಲಿರುವವರ ಬಗ್ಗೆ ಯೋಚಿಸಿದಾಗ ಬಹಳ ಬೇಸರವಾಗುತ್ತೆ. ಭಿಕ್ಷೆ ಬೇಡುವುದು ಬಹಳ ಕಷ್ಟದ ಕೆಲಸ' ಎಂದು ಚಿರು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಾನು ಸುರಕ್ಷಿತವಾಗಿದ್ದೇನೆ – ಅಭಿಮಾನಿಗಳಿಗೆ ಟ್ವೀಟ್ ಮಾಡಿದ ನಟಿ ದೀಪಿಕಾ

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೊಣೆ ಅವರು ವಾಸವಿದ್ದ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ...

news

ದೀಪಿಕಾ ಪಡುಕೋಣೆ ವಾಸವಿದ್ದ ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ಅವಘಡ

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ವಾಸವಿದ್ದ ಮುಂಬೈನ ವರ್ಲಿಯಲ್ಲಿರುವ ಅಪಾರ್ಟ್ ಮೆಂಟ್ ...

news

ನಕಲಿ ಫೇಸ್ ಬುಕ್ ಖಾತೆ ಕ್ರಿಯೆಟ್ ಮಾಡಿದ ಕಿಡಿಗೇಡಿಗಳಿಗೆ ದರ್ಶನ್ ಖಡಕ್ ವಾರ್ನಿಂಗ್

ಬೆಂಗಳೂರು : ನಟ ದರ್ಶನ್ ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ಕ್ರಿಯೆಟ್ ಮಾಡಿರುವ ಕಿಡಿಗೇಡಿಗಳಿಗೆ ನಟ ...

news

ರಜನೀಕಾಂತ್ ನಟಿಸೋದನ್ನು ನಿಲ್ಲಿಸಲಿ ಎಂದಿದ್ದು ಯಾರು ಗೊತ್ತಾ?

ಚೆನ್ನೈ : ತಮಿಳು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸೂಪರ್ ಸ್ಟಾರ್ ಎನಿಸಿಕೊಂಡ ನಟ ...

Widgets Magazine