ದರ್ಶನ್ ತಮ್ಮ ಅಭಿಮಾನಿಗೆ ಬೈದಿದ್ದಾದರೂ ಯಾಕೆ?

ಬೆಂಗಳೂರು, ಬುಧವಾರ, 18 ಏಪ್ರಿಲ್ 2018 (06:13 IST)

Widgets Magazine

ಬೆಂಗಳೂರು : ಅಭಿಮಾನಿಗಳ ಬಗ್ಗೆ ಅಪಾರ ಪ್ರೀತಿ, ಗೌರವವನ್ನು ಹೊಂದಿರುವ ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚೆಗೆ ತಮ್ಮನ್ನು ಫಾಲೋ ಮಾಡಿಕೊಂಡು ಬಂದಿರುವ ಅಭಿಮಾನಿಯೊಬ್ಬರಿಗೆ ಬೈದಿರುವ ಘಟನೆ ಬೆಳಕಿಗೆ ಬಂದಿದೆ.


ನಟ ದರ್ಶನ್ ಅವರು ಇತ್ತೀಚೆಗೆ ಖರೀದಿಸಿದ ಲ್ಯಾಂಬೋರ್ಗಿನಿ ಕಾರನ್ನು ಸ್ವತಃ ಡ್ರೈವ್ ಮಾಡಿಕೊಂಡು ಪರ್ಸನಲ್ ಕೆಲಸಕ್ಕೆ ಹೋಗುತ್ತಿದ್ದಾಗ ಅಭಿಮಾನಿಯೊಬ್ಬರು ಅವರ ಕಾರನ್ನು ಫಾಲೋ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು.


ಇದರಿಂದಾಗಿ ಕೋಪಗೊಂಡ ದರ್ಶನ್ ಅವರು ತಮ್ಮ ಕಾರನ್ನು ನಿಲ್ಲಿಸಿ ಆ ಅಭಿಮಾನಿಗೆ  ಬೈದು ಬುದ್ಧಿ ಹೇಳಿದ್ದಾರೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಅಪ್‍ಲೋಡ್ ಮಾಡಿ ದಯವಿಟ್ಟು ಯಾರು ಈ ರೀತಿ ದರ್ಶನ್ ಅವರಿಗೆ ತೊಂದರೆ ಕೊಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿದ ಮತ್ತೊಬ್ಬ ತೆಲುಗು ನಟಿ

ಹೈದರಾಬಾದ್ : ಇತ್ತೀಚೆಗೆ ತೆಲುಗು ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ವಿರುದ್ಧ ಅರೆಬೆತ್ತಲೆ ಪ್ರತಿಭಟನೆ ...

news

ಜಾಮೀನಿನ ಮೇಲೆ ಹೊರಬಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ

ಮುಂಬೈ : ಕೃಷ್ಣಮೃಗಗಳ ಭೇಟಿಯಾಡಿದ ಪ್ರಕರಣದಡಿ ಜೈಲು ಸೇರಿ ಜಾಮಿನಿನ ಮೇಲೆ ಹೊರಬಂದ ಬಾಲಿವುಡ್ ನಟ ಸಲ್ಮಾನ್ ...

news

ಸೋನಂ ಕಪೂರ್ ಕತುವಾ ಅತ್ಯಾಚಾರ ಘಟನೆ ಬಗ್ಗೆ ಮಾಡಿರುವ ಟ್ವೀಟ್ ಬಗ್ಗೆ ಕೊಯ್ನಾ ಮಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದೇಕೆ?

ಮುಂಬೈ : ಕಥುವಾ ಹಾಗೂ ಉನ್ನಾವ್ ದಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಬಾಲಿವುಡ್ ನಟಿಯರು ಆಕ್ರೋಶ ...

news

ನಟಿ ಕರೀನಾರನ್ನು ಸಾಮಾಜಿಕ ಜಾಲತಾಣದಲ್ಲಿ ನೇಟಿಜನ್ ಟೀಕೆ ಮಾಡಲು ಕಾರಣವೇನು ಗೊತ್ತಾ...?

ಮುಂಬೈ : ಕಥುವಾದಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ...

Widgets Magazine