Widgets Magazine
Widgets Magazine

ಇಂದ್ರಜಿತ್ ಲಂಕೇಶ್ ಅವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ…?

ವಿಜಯಪುರ, ಗುರುವಾರ, 11 ಜನವರಿ 2018 (07:20 IST)

Widgets Magazine

: ನಟ ಹಾಗು ನಿರ್ದೇಶಕರಾದ ಇಂದ್ರಜಿತ್ ಲಂಕೇಶ್ ಅವರು ವಿಜಯಪುರದ ಅತ್ಯಾಚಾರಗೈದು ಕೊಲೆಮಾಡಿದ ಅಪ್ರಾಪ್ತೆಯ ಕುಟುಂಬಕ್ಕೆ ಸರ್ಕಾರದ ಮಾಡಿದ ತಾರತಮ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
ವಿಜಯಪುರದ ಅತ್ಯಾಚಾರಗೈದು ಕೊಲೆಮಾಡಿದ ಅಪ್ರಾಪ್ತೆಯ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು ಮಂಗಳೂರಿನಲ್ಲಿ ಕೊಲೆಯಾದ ದೀಪಕ್ ಹಾಗು ಬಶೀರ್ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡಿದ್ದ ಸರ್ಕಾರ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಅಪ್ರಾಪ್ತೆಯ ಕುಟುಂಬಕ್ಕೆ ಕೇವಲ 4 ಲಕ್ಷ  ನೀಡಿ ಸರ್ಕಾರ ತಾರತಮ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
ನಂತರ ಮಾತನಾಡಿದ ಅವರು’ ಚಾರ್ಜಶೀಟ್ ಬಳಿಕ ಬಾಕಿ ಪರಿಹಾರ ನೀಡುತ್ತೇವೆ ಎಂದು ಹೇಳಿರುವುದು ದಲಿತರ ಮೇಲೆ ಮಾಡುತ್ತಿರುವ ದೌರ್ಜನ್ಯ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅಪರಾದ ಪ್ರಕರಣಗಳು ನಾಲ್ಕು ಪಟ್ಟು ಜಾಸ್ತಿಯಾಗಿದೆ. ಹಾಡುಹಗಲೇ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ. ದಲಿತ ಬಾಲಕಿಯ ಮೇಲೆ ನಡೆದ ದೌರ್ಜನ್ಯ ದುರಾದೃಷ್ಟಕರ ಬೆಳವಣಿಗೆ ಎಂದರು. ನೊಂದ ಕುಟುಂಬದ ರಕ್ಷಣೆಗೆ ನಿಲ್ಲಬೇಕಿದ್ದ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೇಲ್ ಅವರು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಧರ್ಮ ಜಾತಿಗಳ ನಡುವೆ ಸಂಘರ್ಷ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಮೊದಲು ದಲಿತ ಬಾಲಕಿಯ ಮೇಲೆ ಆಗಿರುವ ದೌರ್ಜನ್ಯಕ್ಕೆ ನ್ಯಾಯ ಕೊಡಿಸಲು ಮುಂದಾಗಲಿ’ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಟ ಹೃತಿಕ್ ರೋಷನ್ ಅವರ ಬರ್ತ್ ಡೇ ಗೆ ಮಾಜಿ ಪತ್ನಿ ಸುಸೇನ ವಿಶ್ ಮಾಡಿದ್ದು ಹೇಗೆ ಗೊತ್ತಾ...?

ಮುಂಬೈ : ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಷನ್ ಅವರು ಬುಧವಾರ ತಮ್ಮ 44ನೇ ಹುಟ್ಟುಹಬ್ಬವನ್ನು ...

news

ರಾಜಕೀಯದತ್ತ ಮುಖ ಮಾಡಿರುವ ಮಾಲಾಶ್ರೀ ಹಾಗು ಸಾಧುಕೋಕಿಲ!

ಬೆಂಗಳೂರು : ಇತ್ತಿಚೆಗೆ ಸ್ಯಾಂಡಲ್ ವುಡ್ ನ ತಾರೆಯರು ಕೂಡ ರಾಜಕೀಯ ಕಣಕ್ಕಿಳಿಯುತ್ತಿರುವ ಸುದ್ದಿ ಎಲ್ಲಾ ...

news

ಆಶಿತಾ ಅವರ ವಿರುದ್ದ ಕನ್ನಡ ಸಿನಿಮಾಭಿಮಾನಿಗಳು ಕಿಡಿಕಾರಿದ್ದು ಯಾಕೆ ಗೊತ್ತಾ...?

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಹೊರಬಂದ ಆಶಿತಾ ಅವರು ಈಗ ಫೇಸ್ ಬುಕ್ ನಲ್ಲಿ ತೆಲುಗು ಸಿನಿಮಾದ ಪೋಸ್ಟರ್ ...

news

ರಾಜಕೀಯ ಅಖಾಡಕ್ಕೆ ಇಳಿಯೋದು ಪಕ್ಕಾ- ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ ಅಂದ ಕಿಚ್ಚ...!

ಕನ್ನಡ ಚಿತ್ರರಂಗದಲ್ಲಿ ಸಿನೇಮಾ ನಟ ನಟಿಯರು ರಾಜಕೀಯಕ್ಕೆ ಬರೋದು ಕಾಮನ್ ಆಗಿಬಿಟ್ಟಿದೆ. ಅದರಲ್ಲೂ ಟಾಪ್ ...

Widgets Magazine Widgets Magazine Widgets Magazine