ಪುನೀತ್ ಅವರ ಹೊಸ ಹೇರ್ ಸ್ಟೈಲ್ ಕುರಿತು ಹಲವರು ಆಕ್ಷೇಪ ಮಾಡಿದ್ದು ಯಾಕೆ ಗೊತ್ತಾ…?

ಬೆಂಗಳೂರು, ಮಂಗಳವಾರ, 13 ಮಾರ್ಚ್ 2018 (07:29 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮಾಡಿಸಿಕೊಂಡಿರುವ ಹೊಸ ಹೇರ್ ಸ್ಟೈಲ್ ಒಂದರ  ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಜನರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.


ಕನ್ನಡಿಗರ ನೆಚ್ಚಿನ ನಟ ಡಾ. ರಾಜ್ ಕುಮಾರ್ ಅವರ ಮಗನಾದ ಪುನೀತ್ ರಾಜ್ ಕುಮಾರ್ ಅವರು ಕನ್ನಡಿಗರ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದು, ಈ ರೀತಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದು ಹಲವರಲ್ಲಿ ಬೇಸರ ತಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಮ್ಮ ಫೇಸ್ ಬುಕ್ ನಲ್ಲಿ “ನಮ್ಮೆಲ್ಲರ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿ ಡಾ|| ರಾಜ್ ರ ಹಾದಿಯಲ್ಲಿ ಸಾಗುವ ಭರವಸೆ ಮೂಡಿಸಿದ್ದ, ರಾಜ್ ರ ಹೆಸರನ್ನು ಚಿರಸ್ಥಾಯಿ ಮಾಡುವ ತಾಕತ್ತುಳ್ಳ ಪುನೀತ್ ಗೆ ಇಂತಹ ಹೇರ್ ಸ್ಟೈಲ್ ಬೇಕಾ? ಸುದೀಪ್ ರನ್ನು ಅನುಸರಿಸಿದ ಯುವಕರ ದಂಡು ಅರ್ಧ ಕತ್ತರಿಸಿ ಇನ್ನರ್ಧ ಹಾಗೆ ಬಿಟ್ಟಿದ್ದರು. ಇದೀಗ ಪುನೀತ್ ಅವರ ಸರದಿ. ಹೇರ್ ಸ್ಟೈಲ್ ವಯಕ್ತಿಕ ವಿಚಾರವೇ ಅಗಿದ್ದರೂ ನಿಮ್ಮಲ್ಲೊಬ್ಬ ರಾಜ್ ಇದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಸ್ಟಾರ್ ವಾರ್ ಬಿಟ್ಟು ನೈಜ ನಾಯಕನಾಗುವ ಎಲ್ಲಾ ಅರ್ಹತೆ ನಿಮಗಿದೆ. ಸಿನಿಮಾ, ನಟನೆಯಲ್ಲಿ ಓಕೆ. ನಿಮ್ಮ ನಿಜ ಜೀವನದಲ್ಲಿ ಇದೆಲ್ಲಾ ಬೇಕೆ” ಎಂದು ಆಕ್ಷೇಪ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಮಿಳು ನಟ ಶ್ರೀಕಾಂತ್ ಅವರು ‘ದಿ ವಿಲನ್ ‘ ಚಿತ್ರತಂಡದಿಂದ ಹೊರಬಂದಿದ್ದೇಕೆ?

ಬೆಂಗಳೂರು : ಸಿನಿಮಾ ರಸಿಕರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ‘ದಿ ವಿಲನ್ ‘ ಚಿತ್ರದ ಚಿತ್ರಿಕರಣ ಕೊನೆಯ ...

news

ಗುರು ಶಿಷ್ಯರ ನಡುವೆ ಮತ್ತೆ ವಿರೋಧ ಹುಟ್ಟು ಹಾಕಿತಾ ಟಗರು ಚಿತ್ರದ ಸಂಭಾಷಣೆ!

ಬೆಂಗಳೂರು : ಹಿಂದೊಮ್ಮೆ ಗುರು ಶಿಷ್ಯರಂತಿದ್ದ ನಿರ್ದೇಶಕ ಗುರುಪ್ರಸಾದ್ ಹಾಗೂ ಧನಂಜಯ್ ಅವರ ನಡುವೆ ವಿರೋಧ ...

news

ಹಾಲಿವುಡ್ ನಿಂದ ಬಂದ ಅವಕಾಶವನ್ನು ನಟಿ ದೀಪಿಕಾ ಪಡುಕೋಣೆ ತಿರಸ್ಕರಿಸಿರುವುದಕ್ಕೆ ಕಾರಣ ಇದಂತೆ!

ಮುಂಬೈ : ಬಾರಿ ವಿರೋಧಗಳ ನಡುವೆ ತೆರೆಕಂಡ ಪದ್ಮಾವತಿ ಚಿತ್ರದ ನಂತರ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ...

news

ಇರ್ಫಾನ್ ಖಾನ್ ಅವರಿಗೆ ಬಂದಿರುವ ಕಾಯಿಲೆ ಕ್ಯಾನ್ಸರ್ ಎಂಬ ಗಾಳಿ ಸುದ್ಧಿಗೆ ವೈದ್ಯರು ಹೇಳಿದ್ದೇನು?

ಮುಂಬೈ : ಇತ್ತಿಚೆಗೆ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ತಾವು ಅಪರೂಪದ ಬಳಲುತ್ತಿರುವುದರ ಕುರಿತು ...

Widgets Magazine
Widgets Magazine