ಕಾಳಿ ಮಠದ ಸ್ವಾಮೀಜಿ ರಿಷಿ ಕುಮಾರ್ ಅವರನ್ನು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿರುವುದಕ್ಕೆ ಕಾರಣವೇನು?

ಬೆಂಗಳೂರು, ಶನಿವಾರ, 10 ಮಾರ್ಚ್ 2018 (06:08 IST)

Widgets Magazine

ಬೆಂಗಳೂರು : ಇತ್ತಿಚಿಗೆ ಪುನೀತ್ ರಾಜ್ ಕುಮಾರ್ ಹಾಗೂ ತಮನ್ನಾ ಅವರು ನಟಿಸಿದ ಖಾಸಗಿ ಕಂಪೆನಿಯೊಂದರ ಜಾಹೀರಾತಿನ ವಿರುದ್ಧ ಕಾಳಿ ಮಠದ ಸ್ವಾಮೀಜಿ ರಿಷಿ ಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.


ಈ ಜಾಹೀರಾತಿನಲ್ಲಿ ನಾಡ ಪ್ರಭು ಕೆಂಪೇಗೌಡರನ್ನು ದುರಪಯೋಗಪಡಿಸಿಕೊಂಡಿದ್ದಾರೆ ಎಂದು ರಿಷಿ ಕುಮಾರ್ ಸ್ವಾಮೀಜಿ ಆರೋಪಿಸಿ ಈ ಜಾಹೀರಾತನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಉಗ್ರಸ್ವರೂಪದ ಹೋರಾಟ ಮಾಡುವುದಾಗಿ ತಿಳಿಸಿದ್ದರು. ಈ ಬಗ್ಗೆ ಮಾತನಾಡಿದ ಸ್ವಾಮೀಜಿ, ‘ ಈ ಜಾಹೀರಾತಿಗೆ ಕನ್ನಡಿಗರ ವಿರೋಧವಾಗಬಾರದು ಎಂದು ಪುನೀತ್ ಅವರನ್ನು ಅಸ್ತ್ರವಾಗಿ ಉಪಯೋಗಿಸಿಕೊಂಡಿದ್ದಾರೆ. ಪುನೀತ್ ಅವರಿಗೆ ಇಂತಹ ಸೂಕ್ಷ್ಮ ಸಂಗತಿ ಅರ್ಥವಾಗದೆ ಹೋದದ್ದು ನಿಜಕ್ಕೂ ದುಃಖದ ಸಂಗತಿ ‘ ಎಂದು ಹೇಳಿದ್ದರು. ಈ ಮಾತನ್ನು ಕೇಳಿದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸ್ವಾಮೀಜಿಯನ್ನು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಸ್ವಾಮಿಜಿಗೆ  ಫೋನ್ ಮಾಡಿ ಪುನೀತ್ ಅವರ ಬಳಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. ನಂತರ ಸ್ವಾಮೀಜಿ ಫೇಸ್ ಬುಕ್ ಲೈವ್ ಗೆ ಬಂದು ತನಗೆ ಬೇಸರವಿರುವುದು ಪುನೀತ್ ಅವರ ಮೇಲಲ್ಲಾ, ಪೋತಿಸ್ ಮಾಲೀಕರ ಮೇಲೆ ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಅನುಷ್ಕಾ ಬಾಲಿವುಡ್ ನ ಆಫರ್ ಗಳನ್ನು ತಿರಸ್ಕರಿಸಲು ಕಾರಣ ಯಾರು ಗೊತ್ತಾ…?

ಹೈದರಾಬಾದ್ : ಟಾಲಿವುಡ್ ನ ಸೂಪರ್ ಹಿಟ್ ಚಿತ್ರ ಬಾಹುಬಲಿ 2 ನ ಸೂಪರ್ ಜೋಡಿ ಪ್ರಭಾಸ್-ಅನುಷ್ಕಾ ಅವರು ಆಗಾಗ ...

news

ಮಹಿಳಾ ದಿನಾಚರಣೆಯಂದು ರಾಮ್ ಗೋಪಾಲ್ ವರ್ಮಾ ಮಾಡಿದ ವಿಚಿತ್ರ ಟ್ವೀಟ್ ಏನು ಗೊತ್ತಾ…?

ಬೆಂಗಳೂರು : ಒಂದಲ್ಲ ಒಂದು ರೀತಿಯಲ್ಲಿ ವಿವಾದ ಸೃಷ್ಟಿಸುವ ಚಾಣಕ್ಷತನವಿರುವ ಬಹುಭಾಷಾ ನಿರ್ದೇಶಕ ರಾಮ್ ...

news

ಬಾಲಿವುಡ್ ನಟಿ ಇಹಾನ್ ದಿಲ್ಲನ್ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರೊಂದಿಗೆ ನಟಿಸಲಿದ್ದಾರೆ. ಆ ಸ್ಟಾರ್ ನಟ ಯಾರು ಗೊತ್ತಾ...?

ಬೆಂಗಳೂರು : ಸಿನಿಮಾ ತಾರೆಯರು ಬಾಲಿವುಡ್ ಕಡೆ ಮುಖ ಮಾಡುತ್ತಿರುವ ಇತ್ತಿಚಿನ ದಿನಗಳಲ್ಲಿ ಬಾಲಿವುಡ್ ನಟಿ ...

news

ನಟಿ ರವೀನಾ ಟಂಡನ್ ವಿರುದ್ಧ ಎಫ್.ಐ.ಆರ್. ದಾಖಲಾಗಿದ್ದು ಯಾಕೆ ಗೊತ್ತಾ…?

ಮುಂಬೈ : ಬಾಲಿವುಡ್ ನಟಿ ರವೀನಾ ಟಂಡನ್ ಅವರು ದೇವಸ್ಥಾನದ ಆವರಣದಲ್ಲಿ ಜಾಹೀರಾತೊಂದನ್ನು ...

Widgets Magazine