ಬೆಂಗಳೂರು : ಪ್ರೇಮ್ ನಿರ್ದೇಶನದ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ಜೊತೆಯಾಗಿ ನಟಿಸಿರುವ ‘ದಿ ವಿಲನ್’ ಚಿತ್ರ ಯಾವಾಗ ಬಿಡುಗಡೆಯಾಗುವುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಆದರೆ ಈ ಚಿತ್ರ ಇನ್ನೂ ಬಿಡುಗಡೆಯ ಹಂತಕ್ಕೆ ಬಂದಿಲ್ಲ. ಈ ಬಗ್ಗೆ ನಟ ಶಿವರಾಜ್ ಕುಮಾರ್ ಅವರು ನಿರ್ದೇಶಕ ಪ್ರೇಮ್ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.