ಸೀಜರ್’ ಚಿತ್ರದ ಡೈಲಾಗ್ ಬಗ್ಗೆ ಜನರು ವಿರೋಧ ವ್ಯಕ್ತಪಡಿಸಿದ್ದು ಯಾಕೆ…?

ಬೆಂಗಳೂರು, ಶುಕ್ರವಾರ, 6 ಏಪ್ರಿಲ್ 2018 (08:00 IST)

ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿರುವ ‘ಸೀಜರ್’ ಚಿತ್ರದಲ್ಲಿ ಬರುವ ಡೈಲಾಗ್ ಒಂದರ ಬಗ್ಗೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.


ನಿರ್ದೇಶಕ ವಿನಯ್ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಸೀಜರ್’ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟ ಚಿರಂಜೀವಿ ಸರ್ಜಾ ಅವರು ಜೊತೆಯಾಗಿ ನಟಿಸಿದ್ದು, ಇದೀಗ ಚಿತ್ರದಲ್ಲಿ ರವಿಚಂದ್ರನ್ ಅವರು ಗೋಮಾಂಸದ ಬಗ್ಗೆ ಹೇಳಿರುವ ಡೈಲಾಗ್‌ ಒಂದು ದೀಗ ಭಾರೀ ವಿರೋಧಕ್ಕೆ ಕಾರಣವಾಗಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಅವರು,’ 'ಹಸು ತಲೆ ಕಡಿಯೋದು ಹೆತ್ತ ತಾಯಿ ತಲೆಹಿಡಿಯೋದು ಎರಡೂ ಒಂದೇನೆ' ಎಂದು ಹೇಳಿರುವ ಡೈಲಾಗ್ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಕೀಲರಾದ ಬಿಟಿ ವೆಂಕಟೇಶ್ ಪ್ರತಿಕ್ರಿಯಿಸಿದ್ದು, 'ರವಿಚಂದ್ರನ್ ಅವರಿಗೆ ಮಾರುಕಟ್ಟೆ ಇಲ್ಲ. ಕರಿಯರ್‌ನ ಕೊನೆಯ ಹಂತದಲ್ಲಿದ್ದಾರೆ. ಈ ಮಾರ್ಗದ ಮೂಲಕ ಅವರು ಪ್ರಚಾರಕ್ಕೆ ಮುಂದಾಗಿದ್ದಾರೆ. ಬೇರೆಯವರ ಅಭ್ಯಾಸಗಳ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಈ ರೀತಿಯ ಡೈಲಾಗ್ ಹೇಳುವ ಮುನ್ನ ರವಿಚಂದ್ರನ್ ಒಂದಕ್ಕೆ ಎರಡು ಸಲ ಯೋಚಿಸಬೇಕಾಗಿತ್ತು' ಎಂದಿದ್ದಾರೆ.


ಈ ಬಗ್ಗೆ ಮಾತನಾಡಿದ ಸೀಜರ್ ಚಿತ್ರದ ನಿರ್ದೇಶಕ ವಿನಯ್ ಕೃಷ್ಣ ಅವರು,’ ಹೌದು ಚಿತ್ರದ ಟ್ರೈಲರ್‌ನಲ್ಲಿ ಈ ಡೈಲಾಗ್ ಇದೆ. ಇದೇ ರೀತಿಯ ಇನ್ನೂ ಅನೇಕ ಡೈಲಗ್‌ಗಳಿವೆ. ಇದರಲ್ಲಿ ವಿವಾದ ಎಂಬುದು ಏನೂ ಇಲ್ಲ. ಒಬ್ಬ ಹಿಂದೂ ಆಗಿ ಗೋವನ್ನು ಕೊಲ್ಲಬೇಡಿ ಎಂದು ಹೇಳುವುದು ನನ್ನ ಹಕ್ಕು. ಗೋವನ್ನು ನಾನು ದೇವರ ಸಮಾನ ಕಾಣುತ್ತೇನೆ. ಗೋಹತ್ಯೆ ನಿಲ್ಲಿಸಬೇಕು. ಈ ಚಿತ್ರ ಹಿಂದೂ ಸಂಪ್ರದಾಯವನ್ನು ಬೆಂಬಲಿಸುತ್ತದೆ. ಈ ಚಿತ್ರದ ಬಗ್ಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಸೆನ್ಸಾರ್ ಮಂಡಳಿ ಸಹ ಒಂದೇ ಒಂದು ಕಟ್ ಇಲ್ಲದಂತೆ ಪ್ರಮಾಣ ಪತ್ರ ನೀಡಿದೆ ಎಂದಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮೂರು ವರ್ಷಗಳ ನಂತರ ಒಂದಾಗಲಿರುವ ಮಾಜಿ ಲವರ್ಸ್ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ

ಮುಂಬೈ : ಹಿಂದೊಮ್ಮೆ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ದೀಪಿಕಾ ಪಡುಕೋಣೆ ಅವರು ಒಬ್ಬರನೊಬ್ಬರು ...

news

ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಗೆ ಒಲಿದು ಬಂದ ಬಂಫರ್ ಆಫರ್ ಏನು ಗೊತ್ತಾ …?

ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 5 ರ ರನ್ನರ್ ಅಪ್ ಆದ ದಿವಾಕರ್ ಅವರಿಗೆ ಇದೀಗ ಸ್ಯಾಂಡಲ್ ವುಡ್ ನ ...

news

ನಟಿ ರಾಧಿಕಾ ಪಂಡಿತ್ ಯಶ್ ರವರ ‘ಕೆಜಿಎಫ್’ ಚಿತ್ರದ ಶೂಟಿಂಗ್ ಸೆಟ್ ನಿಂದ ತೆಗೆದುಕೊಂಡು ಬಂದ ವಸ್ತು ಯಾವುದು..?

ಬೆಂಗಳೂರು : ನಟ ಯಶ್ ಅವರ ‘ಕೆಜಿಎಫ್’ ಚಿತ್ರದ ಶೂಟಿಂಗ್ ಸೆಟ್ ಗೆ ಅವರ ಪತ್ನಿ, ನಟಿ ರಾಧಿಕಾ ಪಂಡಿತ್ ಅವರು ...

news

ಇರ್ಫಾನ್ ಖಾನ್ ಚಿತ್ರದ ಪ್ರಚಾರಕ್ಕಾಗಿ ಒಂದಾದ ಬಾಲಿವುಡ್ ನ ಸ್ಟಾರ್ ನಟರು!

ಮುಂಬೈ : ಬಾಲಿವುಡ್ ನಟ ಇರ್ಫಾನ್ ಖಾನ್ ಅಭಿನಯದ 'ಬ್ಲ್ಯಾಕ್ ಮೇಲ್' ಸಿನಿಮಾ ಬಿಡುಗಡೆಯಾಗುತ್ತಿರುವ ...

Widgets Magazine
Widgets Magazine