ನಟ ದಿಲೀಪ್ ಬಗ್ಗೆ ತನಿಖಾ ತಂಡದ ಮೂಲಗಳನ್ನು ಆಧರಿಸಿ ಮಲಯಾಳಂ ಮಾಧ್ಯಮ ಹೊರಹಾಕಿದ ಭಯಾನಕ ಸತ್ಯಗಳು!

Kocchi, ಮಂಗಳವಾರ, 11 ಜುಲೈ 2017 (10:29 IST)

ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವುದು ಇಡೀ ಚಿತ್ರರಂಗಕ್ಕೇ ಶಾಕ್ ನೀಡಿದೆ. ಈ ಪ್ರಕರಣದ ಬಗ್ಗೆ ಇದೀಗ ಒಂದೊಂದು ಕತೆಗಳು ಹುಟ್ಟಿಕೊಳ್ಳುತ್ತಿವೆ.


 
ಮಲಯಾಳಂ ಮಾಧ್ಯಮವೊಂದರಲ್ಲಿ ವರದಿಯಾಗಿರುವ ಪ್ರಕಾರ ನಟನಿಗೆ ಆ ನಟಿಯ ಮೇಲಿದ್ದ ವೈಯಕ್ತಿಕ ವೈಷಮ್ಯವೇ ಈ ಕೃತ್ಯ ನಡೆಸಲು ಕಾರಣ ಎಂದು ವಿಶ್ಲೇಷಿಸಲಾಗಿದೆ. ತನಿಖಾ ತಂಡಗಳ ಮೂಲಗಳನ್ನು ಆಧರಿಸಿ ಮಲಯಾಳಂ ಮಾಧ್ಯಮ ದಿಲೀಪ್ ಯಾಕೆ ಹಾಗೆ ಮಾಡಿರಬಹುದೆಂದು ಅಂದಾಜಿಸಿದೆ.
 
ಜನಪ್ರಿಯನಾಗಿರುವ ನಟನೊಬ್ಬ ಇಂತಹ ಕೃತ್ಯಕ್ಕೆ ಇಳಿಯಲು ಕಾರಣ ಆತನ ವೈಯಕ್ತಿಕ ಜೀವನದಲ್ಲಿ ನಟಿ ಮಾಡಿದ ಒಂದು ತಪ್ಪು ಆಗಿರಬಹುದು ಎಂದು ತನಿಖಾ ಮೂಲಗಳು ಹೇಳಿವೆಯಂತೆ. ಇದು ಎಷ್ಟರ ಮಟ್ಟಿಗೆ ಸತ್ಯವೆಂದು ಗೊತ್ತಿಲ್ಲ. ಈ ಪ್ರಕರಣದಲ್ಲಿ ನಟ ದಿಲೀಪ್ ತಪ್ಪಿತಸ್ಥರೆಂದು ಸಾಬೀತಾಗಿಲ್ಲ. ಹಾಗಿದ್ದರೂ ಅವರು ಯಾಕೆ ಈ ರೀತಿ ಮಾಡಿರಬಹುದೆಂದು ಮಲಯಾಳಂ ಮಾಧ್ಯಮಗಳಲ್ಲಿ ವಿಶ್ಲೇಷಣೆಯಾಗುತ್ತಿದೆ.
 
ನಟ ದಿಲೀಪ್ 2015 ರಲ್ಲಿ ಮೊದಲ ಪತ್ನಿ ಮಂಜು ವಾರಿಯರ್ ಗೆ ವಿಚ್ಛೇದನ ನೀಡಿದ್ದರು. ಸಂತ್ರಸ್ತ ನಟಿ ದಿಲೀಪ್ ಮೊದಲ ಪತ್ನಿಯ ಆಪ್ತ ಸ್ನೇಹಿತೆ. ದಿಲೀಪ್ ಮತ್ತು ಮೊದಲ ಪತ್ನಿಯ ನಡುವಿನ ಬಾಂಧವ್ಯ ಕಡಿದು ಬೀಳಲು ಸಂತ್ರಸ್ತ ನಟಿಯೇ ಕಾರಣ ಎಂದು ದಿಲೀಪ್ ನಂಬಿದ್ದರಂತೆ. ಇದೇ ಕಾರಣಕ್ಕೆ ದಿಲೀಪ್ ಹಾಗೆ ಮಾಡಿರಬಹುದು ಎಂದು ಮಾಧ್ಯಮಗಳಲ್ಲಿ ವಿಶ್ಲೇಷಣೆಯಾಗುತ್ತಿದೆ.
 
ಏನೇ ಆಗಿದ್ದರೂ ತಾನು ನಿರಪರಾಧಿ. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ನಟ ದಿಲೀಪ್ ಹೇಳಿದ್ದಾರೆ. ನಿನ್ನೆಯಷ್ಟೇ ಬಂಧಿತರಾಗಿರುವ ಅವರನ್ನು ಇದೀಗ 14 ದಿನಗಳ ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಲಯ ಆದೇಶಿಸಿದೆ.
 
ಇದನ್ನೂ ಓದಿ.. ಮಿಕ್ಕಿದ ಅನ್ನ ಬಿಸಿ ಮಾಡಿ ತಿಂದರೆ ಏನಾಗುತ್ತದೆ ಗೊತ್ತಾ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನಟ ದಿಲೀಪ್ ನಟಿ ಲೈಂಗಿಕ ಕಿರುಕುಳ ಮಲಯಾಳಂ ಸಿನಿಮಾ ಸುದ್ದಿಗಳು Actor Dileep Actress Sexual Harrassment Malayalam Film Indusrty

ಸ್ಯಾಂಡಲ್ ವುಡ್

news

ಶಿವರಾಜ್ ಕುಮಾರ್ ಹೊಗಳುತ್ತಾ ಎಡವಟ್ಟು ಮಾಡಿಕೊಂಡ ತೆಲುಗು ನಟ ಬಾಲಕೃಷ್ಣ

ಬೆಂಗಳೂರು: ತೆಲುಗು ಸ್ಟಾರ್ ನಟ ಬಾಲಕೃಷ್ಣ ಇತ್ತೀಚೆಗೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಅಡಿಯೋ ...

news

ಪಾಪರ್ ಆದ ವಿತರಕರ ಜೇಬು ತುಂಬಲು ಮುಂದಾದ ಸಲ್ಮಾನ್ ಖಾನ್

ಮುಂಬೈ: ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಹಣ ಗಳಿಸಲಿಲ್ಲ. ...

news

`ನನ್ನ ಸೊಂಟದ ಮೇಲೆ ಆ ನಿರ್ದೇಶಕ ತೆಂಗಿನಕಾಯಿ ಹಾಕಿದ್ದೇಕೆ’

ಬಹುಭಾಷಾ ನಟಿ ತಾಪ್ಸಿ ಪನ್ನು ತೆಲುಗಿನ ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರನ್ನ ಅಣಕಿಸಿ ಆನ್ ...

news

ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ: ಮಲೆಯಾಳಂ ನಟ ದಿಲೀಪ್ ಅರೆಸ್ಟ್

ತ್ರಿವೇಂದ್ರಂ: ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಲೆಯಾಳಂ ಚಿತ್ರರಂಗದ ಖ್ಯಾತ ನಟಿ ...

Widgets Magazine