ಪದ್ಮಾವತಿ ಚಿತ್ರ ಪ್ರದರ್ಶಿಸಿದ್ರೆ ಥಿಯೇಟರ್ ಸುಟ್ಟು ಹಾಕ್ತೇವೆ: ಬಿಜೆಪಿ ಶಾಸಕ

ತೆಲಂಗಾಣಾ, ಮಂಗಳವಾರ, 7 ನವೆಂಬರ್ 2017 (19:17 IST)

ಪದ್ಮಾವತಿ ಚಿತ್ರದಲ್ಲಿ ನಿರ್ದೆಶಕ ಸಂಜಯ್ ಲೀಲಾ ಬನ್ಸಾಲಿ ಸತ್ಯವನ್ನು ವಿರೂಪಗೊಳಿಸಿ ನಿರ್ಮಿಸಿದ್ದು. ಚಿತ್ರವನ್ನು ಪ್ರದರ್ಶಿಸುವ ಥಿಯೇಟರ್‌ಗಳನ್ನು ಸುಟ್ಟುಹಾಕುತ್ತೇವೆ ಎಂದು ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಬೆದರಿಕೆಯೊಡ್ಡಿದ್ದಾರೆ. 

ಇದು ರಾಜ್‌ಪೂತ್ ಸಮುದಾಯದ ಗೌರವದ ಪ್ರಶ್ನೆ. ನಂತರ ಏನಾಗುತ್ತದೆಯೋ ಕಾದು ನೋಡುತ್ತೇವೆ ಎಂದು ರಾಜಸ್ಥಾನ್ ರಾಜಪೂತ್ ಸಮುದಾಯ ಆಯೋಜಿಸಿದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
 
ಪದ್ಮಾವತಿ ಚಿತ್ರದಲ್ಲಿ ರಾಜಪೂತ್ ಸಮುದಾಯದ ಗೌರವಕ್ಕೆ ಧಕ್ಕೆ ತರುವ ದೃಶ್ಯಗಳಿದ್ದಲ್ಲಿ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮಾಡಲು ಬಿಡುವುದಿಲ್ಲ. ಮೊದಲು ಚಿತ್ರ ನಮಗೆ ತೋರಿಸಿ. ಚಿತ್ರದಲ್ಲಿ ಯಾವುದೇ ಅಂತಹ ದೃಶ್ಯಗಳಿಲ್ಲವಾದಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ.
 
ಮಹಿಳೆಯನ್ನು ಅಗೌರವಗೊಳಿಸಿ ಹಣ ಮಾಡಬೇಕು ಎನ್ನುವ ನಿರ್ದೇಶಕರನ್ನು ಎಲ್ಲರೂ ಒಂದಾಗಿ ಬಹಿಷ್ಕಾರ ಹಾಕಬೇಕು. ಹಿಂದು ಧರ್ಮ ಪಾಲಿಸುವವರು ಚಿತ್ರವನ್ನು ಬಹಿಷ್ಕರಿಸುವುದಲ್ಲದೇ ಚಿತ್ರ ಬಿಡುಗಡೆ ಮಾಡಲು ಬಿಡಬಾರದು ಎಂದು ಕರೆ ನೀಡಿದ್ದಾರೆ.
 
ಪದ್ಮಾವತಿ ಚಲನಚಿತ್ರ ದೇಶದ ಸಂಸ್ಕೃತಿಗೆ ಹಾನಿ ಮಾಡುವ ಪ್ರಯತ್ನವಾಗಿದೆ. ರಾಷ್ಟ್ರ, ಹಿಂದೂ ಧರ್ಮ ಮತ್ತು ಹಿಂದೂ ಸಮಾಜದ ಘನತೆಯನ್ನು ರಕ್ಷಿಸಲು ಹೋರಾಟ ಮಾಡುವಂತೆ ಯುವಕರಿಗೆ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಕರೆ ನೀಡಿದ್ದಾರೆ. ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಾಲಿವುಡ್ ನಲ್ಲಿ ಸುದೀಪ್ ಶೈನಿಂಗ್: ರೈಸನ್ ಚಿತ್ರದಪೋಸ್ಟರ್ ಔಟ್

ಬೆಂಗಳೂರು: ಹಾಲಿವುಡ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ ಈಗ ...

news

ದೇವಸೇನಾ ಬರ್ತ್ ಡೇಗೆ ಭಾಗಮತಿ ಫರ್ಸ್ಟ್ ಲುಕ್ ರಿಲೀಸ್: ರಗಡ್ ಲುಕ್ ನಲ್ಲಿ ಅನುಷ್ಕಾ

ಬೆಂಗಳೂರು: ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಇಂದು 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಅವರ ಹೊಸ ...

news

ಏನೋ ಮಾಡುತ್ತೇನೆಂದ ಕಮಲ್ ಹಾಸನ್ ಬರ್ತ್ ಡೇ ಆಚರಣೆಯನ್ನೇ ರದ್ದುಗೊಳಿಸಿದ್ರು!

ಚೆನ್ನೈ: ರಾಜಕೀಯಕ್ಕೆ ಎಂಟ್ರಿಕೊಡಲು ತಯಾರಿ ನಡೆಸುತ್ತಿರುವ ಬಹುಭಾಷಾ ನಟ ಕಮಲ್ ಹಾಸನ್ ಗೆ ಇಂದು 63 ನೇ ...

news

ಐಶ್ವರ್ಯಾ ರೈ ಬಚ್ಚನ್ ಮತ್ತೊಂದು ಮುಖ ಬಯಲು!

ಮುಂಬೈ: ಬಾಲಿವುಡ್ ಬೆಡಗಿ ಬಚ್ಚನ್ ಕುಟುಂಬದ ಬಹು ಐಶ್ವರ್ಯಾ ರೈ ಒಂದೊಳ್ಳೆಯ ಕೆಲಸ ಮಾಡಲು ಮುಂದಾಗಿದ್ದಾರೆ. ...

Widgets Magazine
Widgets Magazine