ನೀವು ಬರೀ ಸಂಬಳ ಜಾಸ್ತಿ ಮಾಡುವುದು ಅಷ್ಟೆ ಅಲ್ಲ. ಇಲ್ಲಿ ಕೂತಿರುವ ಹೆಣ್ಣುಮಕ್ಕಳಲ್ಲಿ ಕ್ಷಮೆ ಕೇಳಬೇಕು ಎಂದು ಹುಚ್ಚ ವೆಂಕಟ್ ಹೇಳಿದ್ದು ಯಾರಿಗೆ ಗೊತ್ತಾ...?

ಬೆಂಗಳೂರು, ಶುಕ್ರವಾರ, 9 ಫೆಬ್ರವರಿ 2018 (06:34 IST)

ಬೆಂಗಳೂರು : ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಗೆ  ನಟ ಹುಚ್ಚ ವೆಂಕಟ್ ಅವರು  ಬೆಂಬಲವನ್ನು ನೀಡಿದ್ದಾರೆ.


ಕನಿಷ್ಟ ವೇತನ, ಪಿಎಫ್, ಇಎಸ್‍ಐ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಹುಚ್ಚ ವೆಂಕಟ್ ಅವರು ಭೇಟಿ ನೀಡಿ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತಿದ್ದಾರೆ. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹೆಣ್ಣುಮಕ್ಕಳ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದು ನಾನು. ಹೆಣ್ಮಕ್ಕಳ ವಿಚಾರ ಬಂದರೆ ಸಾಯುವವರೆಗೂ ಧ್ವನಿ ಎತ್ತುವುದು ನಾನು. ಹಣ್ಮಕ್ಕಳನ್ನು ಈ ರೀತಿ ಬೀದಿಯಲ್ಲಿ ಕೂರಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತನ್ವೀರ್ ಸೇಠ್ ಈ ವಿಚಾರದಲ್ಲಿ ತಲೆ ಹಾಕಬೇಕು. ಸಿದ್ದರಾಮಯ್ಯ ಅವರು ತೆಗೆದುಕೊಳ್ಳಬೇಕು. 2000 ರೂಪಾಯಿಯಲ್ಲಿ ನಾನು, ನೀವು ಹೆಂಡತಿ ಮಕ್ಕಳನ್ನು ಸಾಕುವುದಕ್ಕೆ ಆಗುತ್ತಾ? ಇವರು ತುಂಬಾ ಒಳ್ಳೆಯ ಅಡುಗೆ ಮಾಡುತ್ತಾರೆ. ನೀವು ಸಂಬಳ ಕೊಟ್ಟಿಲ್ಲ ಅಂದ್ರೆ ಅವರು ಕೆಟ್ಟ ಅಡುಗೆ ಮಾಡಿದ್ರೆ ಆಗ ನಿಮ್ಮ ಹೆಸರು ಹಾಳಾಗಲ್ವಾ? ಆದ್ರೆ ಅವರಿಗೂ ಮಕ್ಕಳು ಇದ್ದಾರೆ. ಆದ್ದರಿಂದ ಅವರು ಆ ರೀತಿ ಮಾಡುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಯಮ್ಯ ತೀರ್ಮಾನ ತೆಗೆದುಕೊಳ್ಳಬೇಕು. ಹೆಣ್ಣುಮಕ್ಕಳ ವಿಷಯ ಬಂದರೆ ನಾನು ಜೈಲಿಗೂ ಹೋಗಲು ಸಿದ್ಧನಾಗಿದ್ದೇನೆ. ನೀವು ಬರೀ ಸಂಬಳ ಜಾಸ್ತಿ ಮಾಡುವುದು ಅಷ್ಟೆ ಅಲ್ಲ. ಇಲ್ಲಿ ಕೂತಿರುವ ಹೆಣ್ಣು ಮಕ್ಕಳಿಗೆ ಕ್ಷಮೆ ಕೇಳಬೇಕು’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಬೆಂಬಲ ಹುಚ್ಚ ವೆಂಕಟ್ ಮಾಧ್ಯಮ ತೀರ್ಮಾನ ಕ್ಷಮೆ Bangalore Support Media Decision Sorry Huccha Venkat

ಸ್ಯಾಂಡಲ್ ವುಡ್

news

ತೆಲುಗು ನಟಿ ಅನಸೂಯ ವಿರುದ್ಧ ದೂರು ದಾಖಲಾಗಲು ಕಾರಣವೇನು ಗೊತ್ತಾ...?

ಹೈದರಾಬಾದ್ : ತೆಲುಗಿನ ಖ್ಯಾತ ನಟಿ ಹಾಗೂ ಆ್ಯಂಕರ್ ಅನಸೂಯ ಅವರು ಸೆಲ್ಫಿ ತೆಗೆಯಲು ಬಂದ ಅಭಿಮಾನಿ ಬಾಲಕನ ...

news

ಮುಂಬರುವ Viu (ವಿಯು) ಸೆಲೆಬ್ರಿಟಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ನಂ.1 ಯಾರಿ ವಿತ್ ರಾಣಾ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ಬಳಿಕ ವಿಯು ಇದೀಗ ಮತ್ತೆ ಟ್ರ್ಯಾಕ್ ಗೆ ...

news

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಡೆಸ್ಟಿನೇಶನ್ ವೆಡ್ಡಿಂಗ್‌ಗಾಗಿ ಯೋಜಿಸುತ್ತಿದ್ದಾರಾ?

ದೀಪಿಕಾ ಮತ್ತು ರಣವೀರ್ ಅವರ ಇತ್ತೀಚಿನ ಚಿತ್ರ ಪದ್ಮಾವತ್‌ ಯಶಸ್ಸಿನ ನಂತರ, ಅವರ ಸಂತೋಷಕ್ಕೆ ಮತ್ತೊಂದು ...

news

ಹೊಸ ಕಾರ್ಯಕ್ರಮದೊಂದಿಗೆ ಕಿರುತೆರೆಗೆ ಮತ್ತೆ ಕಪಿಲ್ ಶರ್ಮಾ ಎಂಟ್ರಿ

ಹೊಚ್ಚ ಹೊಸ ಟಿವಿ ಕಾರ್ಯಕ್ರಮದ ಮೂಲಕ ಮಾರ್ಚ್‌ನಲ್ಲಿ ಕಿರುತೆರೆಗೆ ಮರಳಲಿದ್ದಾರೆ ಕಾಮಿಡಿ ಕಿಂಗ್ ಕಪಿಲ್ ...

Widgets Magazine
Widgets Magazine