Widgets Magazine

ಇಬ್ಬರು ಹುಡುಗಿಯರೊಂದಿಗೆ ಯುಗಾದಿಗೆ ಬರಲಿದ್ದಾನೆ 'ಪ್ರಿನ್ಸ್'!

ಇಳಯರಾಜ|
PR
ಸಂದೇಶ್ ನಾಗರಾಜ್ ನಿರ್ಮಾಣದ ಇಪ್ಪತ್ತನೆಯ ಹಾಗೂ ದರ್ಶನ್ ನಾಯಕನಾಗಿ ನಟಿಸಿರುವ 39ನೆಯ ಚಿತ್ರ 'ಪ್ರಿನ್ಸ್' ಯುಗಾದಿ ಉಡುಗೊರೆ ರೂಪದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿಖಿತಾ ಮತ್ತು ಜೆನ್ನಿಫರ್ ಕೊತ್ವಾಲ್ ಈ ಚಿತ್ರದ ನಾಯಕಿಯರು.

'ಕಲಾಸಿಪಾಳ್ಯ', 'ಅಣ್ಣಾವ್ರು', 'ಅಯ್ಯ', 'ಮಂಡ್ಯ', 'ಯೋಧ' ಚಿತ್ರಗಳ ಬಳಿಕ ದರ್ಶನ್ ಹಾಗೂ ನಿರ್ದೇಶಕ ಓಂಪ್ರಕಾಶ್ ರಾವ್ ಜೋಡಿಯ ಆರನೆಯ ಚಿತ್ರವಿದು. ವೀನಸ್ಮೂರ್ತಿ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ನಿರ್ದೇಶನ ಇರುವ ಈ ಚಿತ್ರದಲ್ಲಿ ಅವಿನಾಶ್, ರಂಗಾಯಣ ರಘು, ಶೋಭರಾಜ್, ಆದಿ ಲೋಕೇಶ್, ಬುಲೆಟ್ ಪ್ರಕಾಶ್ ಸಹಿತ ಸುಮಾರು 35ಮಂದಿ ಪೋಷಕ ನಟ ನಟಿಯರಿದ್ದಾರೆ.

'ಸಂಗೀತ, ಸಾಹಸ, ಕಾಮಿಡಿ ಈ ಮೂರು ಅಂಶಗಳು ಚಿತ್ರದ ಹೈಲೈಟ್. ನಮ್ಮ ಇತ್ತೀಚಿನ 'ಹುಡುಗ ಹುಡುಗಿ', 'ವೀರಬಾಹು' ಚಿತ್ರಕ್ಕಿಂತ 'ಪ್ರಿನ್ಸ್' ಜನಮನ್ನಣೆ ಗಳಿಸುವುದು ಖಚಿತ' ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಲವಲವಿಕೆಯಿಂದ ಕೂಡಿದ ನನ್ನ ಪಾತ್ರ ಪ್ರತಿಯೊಬ್ಬರಿಗೂ ಇಷ್ಟವಾಗುವ ರೀತಿಯಲ್ಲಿದೆ. ದರ್ಶನ್-ಓಂಪ್ರಕಾಶ್ ರಾವ್ ಜೋಡಿಯ ಇತರ ಚಿತ್ರಗಳಲ್ಲಿದ್ದಂತೆ 'ಪ್ರಿನ್ಸ್'ನಲ್ಲಿ ಮಾರಾಮಾರಿಯ ವಿಜೃಂಭಣೆ ಇಲ್ಲ. ಎಲ್ಲಿ ಅಗತ್ಯವೋ ಅಲ್ಲಿ ಹಿತಮಿತವಾಗಿ ಸಾಹಸ ಸನ್ನಿವೇಶಗಳನ್ನು ಅಳವಡಿಸಲಾಗಿದೆ. ಒಟ್ಟಾರೆಯಾಗಿ ಪ್ರಿನ್ಸ್ ಬಹಳ ಚೆನ್ನಾಗಿ ಮೂಡಿ ಬಂದಿದೆ. ಇದು ಭಾರೀ ಬಜೆಟ್‌ನ ಚಿತ್ರವಾಗಿದ್ದು ನಿರ್ಮಾಪಕರು ಬಹಳಷ್ಟು ಹಣ ಖರ್ಚು ಮಾಡಿದ್ದಾರೆ' ಎಂದು ನಾಯಕ ನಟ ದರ್ಶನ್ ಹೇಳಿದ್ದಾರೆ.

ಸೆಕ್ಸ್ ಬಾಂಬ್ ನಿಖಿತಾ ಈ ಚಿತ್ರದ ಪ್ರಮುಖ ನಾಯಕಿ. ತಾನು ದ್ವಿತೀಯ ನಾಯಕಿ ಎಂಬ ಮಾತನ್ನು ಜೆನ್ನಿಫರ್ ಕೊತ್ವಾಲ್ ಒಪ್ಪುವುದಿಲ್ಲ. 'ಚಿತ್ರದ ಇಬ್ಬರು ನಾಯಕಿಯರ ಪೈಕಿ ನಾನು ಒಬ್ಬಳು. ನಾನು ನಟಿಸಿರುವ ಎರಡು ಹಾಡುಗಳು ಅತ್ಯದ್ಬುತವಾಗಿವೆ. ನನ್ನದು ಬಬ್ಲೀ ಹುಡುಗಿಯ ಪಾತ್ರ. ಕಥೆಗೆ ನಿರ್ಣಾಯಕ ತಿರುವು ನೀಡುವ ಸಾಮರ್ಥ್ಯ ನನ್ನ ಪಾತ್ರಕ್ಕಿದೆ, ಚಿತ್ರ ತುಂಬಾ ಚೆನ್ನಾಗಿದೆ' ಎಂದಿದ್ದಾರೆ ಜೆನ್ನಿಫರ್ ಕೊತ್ವಾಲ್. ಕನ್ನಡದಲ್ಲಿ ಈಕೆ ನಟಿಸಿರುವ ಹದಿನೈದನೆ ಚಿತ್ರ ಇದು.


ಇದರಲ್ಲಿ ಇನ್ನಷ್ಟು ಓದಿ :