ಮಾಸ್ತಿಗುಡಿ ಚಿತ್ರ ಬಿಡುಗಡೆಗೆ ಒಂದು ದಿನ ಮುನ್ನವೇ ಉದಯ್,, ಅನಿಲ್ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ವಿತರಣೆ

ಬೆಂಗಳೂರು, ಗುರುವಾರ, 11 ಮೇ 2017 (21:04 IST)

ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಸಾಹಸ ಚಿತ್ರ ಚಿತ್ರೀಕರಣದ ವೇಳೆ ಮೃತಪಟ್ಟ ಸಾಹಸ ಕಲಾವಿದರಾದ ಉದಯ್ ಮತ್ತು ಅನಿಲ್ ಅವರಿಗೆ ಚಿತ್ರತಂಡ 20 ಲಕ್ಷ ರೂ. ಬಾಂಡ್ ನೀಡಿದೆ.


ಫಿಲ್ಮ್ ಚೇಂಬರ್`ನಲ್ಲಿ ಉದಯ್ ತಂದೆ ವೆಂಕಟೇಶ್ ಅವರಿಗೆ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಬಾಂಡ್ ವಿತರಿಸಿದರು. ನಾಳೆ ಚಿತ್ರ ಬಿಡುಗಡೆಯಾಗುತ್ತಿದ್ದು, ಇಂದೇ ಪರಿಹಾರದ ಬಾಂಡ್ ವಿತರಿಸಲಾಗಿದೆ. ಈ ಸಂದರ್ಭ ನಟ ದುನಿಯಾ ವಿಜಯ್, ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಹಾಜರಿದ್ದರು.
 
ಯಾವುದೇ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಾನವೀಯತೆ ದೃಷ್ಟಿಯಿಂದ 25 ಲಕ್ಷ ಪರಿಹಾರ ನೀಡಲು ಸೂಚಿಸಿದ್ದೆವು. ಚಿತ್ರತಂಡ ತಲಾ 20 ಲಕ್ಷ ರೂಪಾಯಿ ಬಾಂಡ್ ನೀಡಲು ಒಪ್ಪಿಗೆ ಸೂಚಿಸಿದೆ.  ಸರ್ಕಾರ ತಲಾ 5 ಲಕ್ಷ ರೂ. ಮತ್ತು ಸಾಹಸ ನಿರ್ದೇಶಕ ರವಿವರ್ಮಾ 5 ಲಕ್ಷ ರೂ ಪರಿಹಾರ ನೀಡಿದ್ದಾರೆ. 20 ಲಕ್ಷ ರೂ. ಬಾಂಡ್`ನಿಂದ ತಿಂಗಳಿಗೆ 20 ಸಾವಿರ ಬಡ್ಡಿ ಬರಲಿದೆ ಎಂದು ತಿಳಿಸಿದರು.
 
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಾವೇನು ಮಾಡ್ತೀವಿ ಅಂತ ಹೇಳಲ್ಲ, ಕಾದು ನೋಡಿ: ದುನಿಯಾ ವಿಜಿ ಗುಡುಗು

ಬೆಂಗಳೂರು: ಇತರ ಭಾಷೆಯ ಚಿತ್ರಗಳಿಗೆ ಅವಕಾಶ ನೀಡಿದ್ದೇವೆ. ಇದೀಗ ನಮಗೂ ಅವಕಾಶ ಕೊಡಿ. ಒಂದು ವೇಳೆ ಅವಕಾಶ ...

news

ಒಂದೇ ಕಾರಿನಲ್ಲಿ ಬಂದು ವಿಚ್ಛೇದನಾ ಪಡೆದ ಬಾಲಿವುಡ್ ತಾರಾ ಜೋಡಿ

ಕೊನೆಗೂ ಬಾಲಿವುಡ್`ನ ತಾರಾ ಜೋಡಿ ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ತಮ್ಮ ದಾಂಪತ್ಯಕ್ಕೆ ಕಾನೂನು ಮೂಲಕವೇ ...

news

500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ರಾಮಾಯಣ..!

ಬಾಹುಬಲಿ-2 ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ ನಿರ್ಮಾಣವಾಗುತ್ತಿದೆ. ಟಾಲಿವುಡ್`ನ ಪ್ರಸಿದ್ಧ ಚಿತ್ರ ...

news

ಬಾಹುಬಲಿಯಲ್ಲಿ ಬಲ್ಲಾಳದೇವನ ಪತ್ನಿ ಯಾರು? ಸೀಕ್ರೆಟ್ ಬಿಚ್ಚಿಟ್ಟ ರಾಣಾ!

ಹೈದರಾಬಾದ್: ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವನ ಪುತ್ರನನ್ನು ಮಹೇಂದ್ರ ಬಾಹುಬಲಿ ಕೊಲ್ಲುವ ದೃಶ್ಯವಿದೆ. ...

Widgets Magazine