ನಾಳಿನ ಸಿನಿಮಾಗೆ ಇಂದೇ ಟಿಕೆಟ್ ಕಾದಿರಿಸಿ

Bangalore, ಗುರುವಾರ, 8 ಡಿಸೆಂಬರ್ 2016 (10:29 IST)

ಬೆಂಗಳೂರು: ನಾಳೆ ಕನ್ನಡ ಸಿನಿಮಾ ಲೋಕದಲ್ಲಿ ಮೂರು ಸಿನಿಮಾಗಳು ತೆರೆ ಕಾಣುತ್ತಿವೆ. ಅದರಲ್ಲಿ ಎರಡು ಹೊಸಬರ ಚಿತ್ರಗಳು, ಇನ್ನೊಂದು ಸ್ಟಾರ್ ಸಿನಿಮಾ. ನಾಳೆ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ಬಯಸುವವರು ಇಂದೇ ಟಿಕೆಟ್ ಕಾದಿರಿಸಬಹುದು.
 
ಅಜೇಯ್ ರಾವ್, ಲೂಸ್ ಮಾದ ಯೋಗೀಶ್, ಡಾರ್ಲಿಂಗ್ ಕೃಷ್ಣ ಮತ್ತು ಐಂದ್ರಿತಾ ರೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಜಾನ್ ಜಾನಿ ಜನಾರ್ಧನ್ ನಾಳೆ ತೆರೆ ಕಾಣುತ್ತಿದೆ. ಇದರಲ್ಲಿ ಮಾಲಾ ಶ್ರೀ ಕೂಡಾ ಬಂದು ಹೋಗುತ್ತಾರೆ. ಮುತ್ತಪ್ಪ ರೈ ಲಾಂಛನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಮೂವರು ಸ್ನೇಹಿತರ ಕುರಿತಾದ ಕತೆಯಿರುವ ಚಿತ್ರ. ಇದರಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡ ಅಜೇಯ್ ರಾವ್ ಇದರಲ್ಲಿ ಮಾಸ್ ಡೈಲಾಗ್ ಬಿಡುತ್ತಾರೆ. ಗುರು ದೇಶಪಾಂಡೆ ನಿರ್ದೇಶನ ಚಿತ್ರಕ್ಕಿದೆ.
 
ಇನ್ನೊಂದು ಭರತ್ ನಂದಾ ನಿರ್ದೇಶನದ ಹಾರರ್ ಸಿನಿಮಾ ಡಯಾನಾ ಹೌಸ್. ನಿಮ್ಮದೇ ರಿಸ್ಕ್ ನಲ್ಲಿ ಸಿನಿಮಾ ಹಾಲ್ ಗೆ ಎಂಟ್ರಿಯಾಗಬೇಕು ಎಂದು ಚಿತ್ರತಂಡ ಜಾಹೀರಾತಿನಲ್ಲೇ ಹೇಳುತ್ತಿದೆ. ಹೀಗಾಗಿ ಪಕ್ಕಾ ಭಯ ಬೀಳಿಸುವ ಸಿನಿಮಾ ಎಂಬುದು ಖಚಿತ. ರಾಘವ್ ನಾಗರಾಜ್ ಮತ್ತು ತೇಜಸ್ವಿನಿ ಪ್ರಕಾಶ್ ಚಿತ್ರದ ಪ್ರಮುಖ ಪಾತ್ರಧಾರಿಗಳು.
 
ಇನ್ನೊಂದು ಹೊಸ ಸಿನಿಮಾ ಸೋಜಿಗ. ಇದೊಂದು ಪಕ್ಕಾ ಆಕ್ಷನ್ ಸಿನಿಮಾವಂತೆ. ದಿನೇಶ್ ಕಂಪ್ಲಿ ನಿರ್ದೇಶನದ ಚಿತ್ರದಲ್ಲಿ ವಿಕ್ರಾಂತ್ ಹೆಗಡೆ ಮತ್ತು ಅಖಿಲಾ ಪ್ರಕಾಶ್ ನಟಿಸಿದ್ದಾರೆ. ಇದೂ ಕೂಡಾ ಸಂಪೂರ್ಣ ಹೊಸಬರ ಚಿತ್ರ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಒದ್ದೆಮುದ್ದೆ ಬಿಕಿನಿಯಲ್ಲಿ ಪೂನಂ ಪಾಂಡೆ ಪ್ರತ್ಯಕ್ಷ!

ಇಷ್ಟು ದಿನ ನಾಪತ್ತೆಯಾಗಿದ್ದ ಹಾಟ್ ಬ್ಯೂಟಿ ಪೂನಂ ಪಾಂಡೆ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಪೂನಂ ...

news

’ಪದ್ಮಾವತಿ’ ಗೂಮರ್ ಡ್ಯಾನ್ಸ್‌ ಪ್ರಮುಖ ಆಕರ್ಷಣೆ

ಬಾಜಿರಾವ್ ಮಸ್ತಾನಿ’ ಚಿತ್ರದ ಮೂಲಕ ಮತ್ತೊಂದು ಹಿಟ್ ಚಿತ್ರ ತನ್ನ ಖಾತೆಗೆ ಸೇರಿಸಿಕೊಂಡ ದೀಪಿಕಾ ಪಡುಕೋಣೆ ...

news

ನಾನು ನಮ್ಮಪ್ಪನ ತರ ಅಲ್ಲ: ಶ್ರುತಿ ಹಾಸನ್

ತಂದೆ ತಾಯಿ ಎಲ್ಲರೂ ಚಿತ್ರರಂಗದ ಹಿನ್ನೆಲೆ ಇದ್ದರೂ, ಸ್ಟಾರ್ ವಾರಸುದಾರಳಾಗಿ ಬೆಳ್ಳಿತೆರೆಗೆ ಅಡಿಯಿಟ್ಟ ...

news

ಪ್ರತಿ ತಿಂಗಳು ನನ್ನನ್ನು ಗರ್ಭಿಣಿ ಮಾಡಿದರು

ತುಂಬಾ ಬೋಲ್ಡ್ ಆಗಿ ಮಾತನಾಡುವ ಕೆಲವೇ ಕೆಲವು ಚೆಲುವೆಯಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಸಹ ಒಬ್ಬರು. ...

Widgets Magazine