Widgets Magazine

ಕೆ.ಆರ್. ಮಾರುಕಟ್ಟೆಯನ್ನುಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಆಂದೋಲನ

ವೆಬ್‌ದುನಿಯಾ| Last Modified ಸೋಮವಾರ, 16 ಸೆಪ್ಟಂಬರ್ 2013 (13:36 IST)
PR
PR
ಬೆಂಗಳೂರು: ಸದಾ ಗಬ್ಬು ನಾರುವ , ಗಲೀಜು, ಕಸದಿಂದ ತುಂಬಿದ ಕೆ.ಆರ್. ಮಾರುಕಟ್ಟೆಯಲ್ಲಿ ಸೋಮವಾರ ಬೆಂಗಳೂರಿನ ಮೇಯರ್ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪೊರಕೆ ಹಿಡಿದು ಸ್ವಚ್ಛತಾ ಆಂದೋಲನವನ್ನು ಷುರುಮಾಡಿದರು. ಮಾರುಕಟ್ಟೆಯಲ್ಲಿ ಗಲೀಜಿನಿಂದ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿಯಿದೆ. ಈ ಕುರಿತು ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಮೇಯರ್ ಕಟ್ಟೆ ಸತ್ಯನಾರಾಯಣ ಪೊರಕೆ ಹಿಡಿದು ಆರಂಭಿಸಿದರು. ಆದರೆ ಕಾಟಾಚಾರಕ್ಕೆ ವಾರಕ್ಕೊಮ್ಮೆ ಸ್ವಚ್ಛತಾ ಆಂದೋಲನ ಆರಂಭಿಸಿದರೆ ಕೆ.ಆರ್. ಮಾರುಕಟ್ಟೆ ಸ್ವಚ್ಛವಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.


ಇದರಲ್ಲಿ ಇನ್ನಷ್ಟು ಓದಿ :