Widgets Magazine

ಕೊಡಗಿನ ವೀರ ಜ. ಕಾರ್ಯಪ್ಪ 115ನೇ ಜನ್ಮದಿನ: ಸಮಾಧಿಗೆ ಗೌರವ

ವೆಬ್‌ದುನಿಯಾ|
PR
PR
ಬೆಂಗಳೂರು:ಇಂದು ಕೊಡಗಿನ ವೀರ ಜನರಲ್ ಅವರ 115ನೇ ಜನ್ಮದಿನದ ನಿಮಿತ್ತ ಅವರ ಸಮಾಧಿಗೆ ತೆರಳಿ ಅರ್ಪಿಸಿ ಗೌರವ ಸಲ್ಲಿಸಲಾಯಿತು. ದೇಶದ ಮೊಟ್ಟ ಮೊದಲ ದಂಡನಾಯಕ ಕೆ.ಎಂ. ಕಾರ್ಯಪ್ಪ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಸೋಮವಾರ ಪೇಟೆ ತಾಲೂಕಿನಲ್ಲಿ ಜನಿಸಿದರು. 1899ರ ಜನವರಿ 28ರಂದು ಜನಿಸಿದರು. ಬ್ರಿಟಿಷರ ಕಾಲದಲ್ಲಿ ಕಂದಾಯ ಅಧಿಕಾರಿಯಾಗಿದ್ದ ಕಾರ್ಯಪ್ಪ ಅವರ ತಂದೆ ಮಾದಪ್ಪ ಅವರ ವರ್ಚಸ್ಸು ಇವರ ವ್ಯಾಸಂಗಕ್ಕೆ ಅನುಕೂಲವಾಯಿತು. ಅವರು ಅಪ್ಪನ ಪಾಲಿಗೆ ಮುದ್ದಿನ ಚಿಮ್ಮಾ ಎಂದೇ ಹೆಸರಾಗಿದ್ದರು. ಕೊಡವ ಸಂಪ್ರದಾಯದ ದಿರಿಸು ತೊಡುವುದು ಮತ್ತು ಸಾಂಪ್ರದಾಯಿಕ ನೃತ್ಯ ಮಾಡುವುದು ಅವರಿಗೆ ಸಂತಸದ ವಿಚಾರವಾಗಿತ್ತು.


ಇದರಲ್ಲಿ ಇನ್ನಷ್ಟು ಓದಿ :