Widgets Magazine
Widgets Magazine

ಧರ್ಮಸಿಂಗ್‌ರೊಂದಿಗಿನ ಸಮ್ಮಿಶ್ರ ಸರಕಾರ ಮೆಲಕುಹಾಕಿದ ಕುಮಾರಸ್ವಾಮಿ

ಬೆಂಗಳೂರು, ಗುರುವಾರ, 27 ಜುಲೈ 2017 (13:49 IST)

Widgets Magazine

ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ, ಧರ್ಮಸಿಂಗ್ ಅವರ ನಿಧನಕ್ಕೆ ಜೆಡಿಎಸ್ ರಾಜ್ಯಾದ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
 
ಧರ್ಮಸಿಂಗ್  ಮತ್ತು ತಂದೆ ದೇವೇಗೌಡರು ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಅವರ ಸ್ನೇಹಕ್ಕೆ ಯಾವುದೇ ಕುಂದು ಬಂದಿರಲಿಲ್ಲ. ಅಷ್ಟು ಆತ್ಮಿಯರಾಗಿದ್ದರು. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾದಾಗ ತಂದೆಯೇ ಧರ್ಮಸಿಂಗ್ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿದ್ದರು. ಇದು ಅವರ ನಡುವಿನ ಆತ್ಮಿಯತೆ ತೋರಿಸುತ್ತದೆ ಎಂದರು.
 
ಯಾವುದೇ ರಾಜಕೀಯ ಪಕ್ಷದ ನಾಯಕರಾದರೂ ಅವರನ್ನು ಗೌರವಿಸುತ್ತಿದ್ದರು. ಇನ್ನೊಬ್ಬರ ಕಷ್ಟವನ್ನು ಧರ್ಮಸಿಂಗ್ ಅವರಿಗೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದರು. ರಾಜಕಾರಣದಲ್ಲಿ ಅವರದೊಂದು ಮೇರು ವ್ಯಕ್ತಿತ್ವ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
 
 ನನ್ನ ಹಾಗೂ ಧರಂ ಸಿಂಗ್ ಅವರ ಹತ್ತಿರ ಸಂಪರ್ಕ ಬಂದಿದ್ದು ಸಮ್ಮಿಶ್ರ ಸರ್ಕಾರದ 20 ತಿಂಗಳು ಅವರು ಮುಖ್ಯಮಂತ್ರಿಯಾಗಿದ್ದಾಗ. ಅವರೊಂದಿಗೆ ಮಾಡಿದ ಜನಪರ ಕೆಲಸಗಳು ಇವತ್ತಿಗೂ ನೆನಪಿನಲ್ಲಿವೆ ಎಂದು ಸ್ಮರಿಸಿದರು. ಅರ್ಧ ಶತಮಾನ ಕಾಲ ರಾಜ್ಯ ರಾಜಕೀಯದಲ್ಲಿ ಒಬ್ಬನೇ ಒಬ್ಬ ಶತ್ರುವಿರಲಿಲ್ಲ ಎಂದರೆ ಅವರ ಸ್ನೇಹಜೀವನ ಅರ್ಥವಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಿಸೈಲ್ ಮ್ಯಾನ್ ಡಾ.ಎಪಿಜೆ ಅಬ್ದುಲ್ ಕಲಾಂ ಸ್ಮಾರಕ ಲೋಕಾರ್ಪಣೆ

ಮಾಜಿ ರಾಷ್ಟ್ರಪತಿ, ಭಾರತ ರತ್ನ , 'ಮಿಸೈಲ್ ಮ್ಯಾನ್' ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸ್ಮಾರಕವನ್ನು ...

news

ಧರ್ಮಸಿಂಗ್ ನಿಧನ: ನಾಳೆ ಕಲಬುರಗಿ, ಬೀದರ್‌ ಜಿಲ್ಲೆಯಲ್ಲಿ ಕಚೇರಿ, ಶಾಲಾಕಾಲೇಜುಗಳಿಗೆ ರಜೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ನಿಧನದಿಂದಾಗಿ ನಾಳೆ ಕಲಬುರಗಿ, ಬೀದರ್‌ ಜಿಲ್ಲೆಯಲ್ಲಿ ...

news

ಧರ್ಮಸಿಂಗ್ ಸಾವಿನ ಸುದ್ದಿ ತಿಳಿದು ಕಣ್ಣೀರು ಹಾಕಿದ ಖರ್ಗೆ

ನವದೆಹಲಿ: ಆತ್ಮಿಯ ಸ್ನೇಹಿತ ಮಾಜಿ ಸಿಎಂ ಧರ್ಮಸಿಂಗ್ ಸಾವಿನ ಸುದ್ದಿ ತಿಳಿದು ಹಿರಿಯ ಕಾಂಗ್ರೆಸ್ ನಾಯಕ ...

news

ಮಾಜಿ ಸಿಎಂ ಧರ್ಮಸಿಂಗ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿ 80 ವರ್ಷ ವಯಸ್ಸಿನ ಎನ್‌.ಧರ್ಮಸಿಂಗ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ...

Widgets Magazine Widgets Magazine Widgets Magazine