ಧಾರವಾಡ: ಪ್ರಹ್ಲಾದ್ ಜೋಷಿ, ವಿನಯ್ ಕುಲಕರ್ಣಿ ಹಣಾಹಣಿ ಹೋರಾಟ

ಮಂಗಳವಾರ, 8 ಏಪ್ರಿಲ್ 2014 (18:04 IST)

PR
PR
ಲೋಕಸಭೆ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ನಂತರ ತೀವ್ರ ಚುನಾವಣೆ ಕದನಕ್ಕೆ ವೇದಿಕೆ ಸಿದ್ಧವಾಗಿದೆ. 17 ಅಭ್ಯರ್ಥಿಗಳು ಕಣದಲ್ಲಿದ್ದರೂ ಬಿಜೆಪಿಯ ಪ್ರಹ್ಲಾದ್ ಜೋಷಿ ಮತ್ತು ಕಾಂಗ್ರೆಸ್ ವಿನಯ್ ಕುಲಕರ್ಣಿ ನಡುವೆ ಹಣಾಹಣಿ ಹೋರಾಟ ನಡೆಯಲಿದೆ. ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್, ಆಮ್ ಆದ್ಮಿಯ ಹೇಮಂತ್ ಕುಮಾರ್ ಪಾರಂಪರಿಕ ಮತಗಳಲ್ಲಿ ಕೆಲವು ಭಾಗ ಸಿಗಬಹುದು. ಜೋಷಿ ಅವರಿಗೆ ಹ್ಯಾಟ್ರಿಕ್ ದಕ್ಕಿಸಲು ಸಂಘ ಪರಿವಾರ ಮತ್ತು ಬಿಜೆಪಿ ಪೂರ್ಣ ಬಲವನ್ನು ಬಳಸುತ್ತಿದೆ. ಮನೆಯಿಂದ ಮನೆಗೆ ಭೇಟಿ ಮತ್ತು ರೋಡ್ ಶೋಗಳು ದಿನದಿಂದ ದಿನಕ್ಕೆ ಮೆರುಗು ಪಡೆಯುತ್ತಿದೆ. ಜೋಷಿ 2009ನೇ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಕುನ್ನೂರ್ ಅವರನ್ನು 1.37 ಲಕ್ಷ ಮತಗಳ ಭಾರೀ ಅಂತರದಿಂದ ಗೆಲುವು ಗಳಿಸಿದ್ದರು.

ಆದರೆ ಈ ಬಾರಿ ಜೋಷಿಗೆ ಗೆಲವು ಅಷ್ಟು ಸುಲಭವಾಗಿ ಪರಿಣಮಿಸಿಲ್ಲ. ಇಲ್ಲಿನ ಜಯ ಗಳಿಸಿದರೆ ರಾಜಕೀಯದಲ್ಲಿ ಜೋಷಿಯನ್ನು ಉತ್ತುಂಗಕ್ಕೆ ಒಯ್ಯಬಹುದು. ಆದರೆ ಸೋತರೆ ಇನ್ನಿಲ್ಲದ ಹಾನಿ ಮಾಡುವುದು ಖಂಡಿತ. ಒಂದು ಕಡೆ ದೇಶಾದ್ಯಂತ ಬೀಸುತ್ತಿರುವ ಮೋದಿ ಅಲೆಯಲ್ಲಿ ಸವಾರಿ ಮತ್ತು ಇನ್ನೊಂದು ಕಡೆ ಯುಪಿಎ ಆಡಳಿತದ ಭ್ರಷ್ಟಾಚಾರ ಜೋಷಿಗೆ ಪ್ಲಸ್ ಪಾಯಿಂಟ್ ಆಗಿವೆ. ಆದರೆ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಜೋಷಿ ತಮ್ಮ ಕ್ಷೇತ್ರಕ್ಕೆ ಭೇಟಿ ಕೊಡುವುದಿಲ್ಲ ಎಂಬ ದೂರು ಈ ಬಾರಿ ಅವರಿಗೆ ವಿರುದ್ಧವಾಗಿ ಕೆಲಸ ಮಾಡಬಹುದು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

Widgets Magazine
Widgets Magazine