ಬಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಕಲಬುರ್ಗಿ, ಶನಿವಾರ, 16 ಸೆಪ್ಟಂಬರ್ 2017 (20:21 IST)

ಕಲಬುರ್ಗಿ: ಸಾರಿಗೆ ಬಸ್ ನಲ್ಲಿಯೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕಲಬುರ್ಗಿಯಿಂದ ಸೇಡಂಗೆ ತೆರಳುತ್ತಿದ್ದ ಬಸ್ ನಲ್ಲಿ ನಡೆದಿದೆ.


ಜ್ಯೋತಿ(26), ಸಾರಿಗೆ ಸಂಸ್ಥೆ ಬಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ. ಸೇಡಂ ಡಿಪೋಗೆ ಸೇರಿದ ಕೆಎ-32 ಎಫ್ -1430 ಬಸ್ ನಲ್ಲಿ ಹೆರಿಗೆಯಾಗಿದೆ. ಚಿಂಚೋಳಿ ತಾಲೂಕಿನ ಛತ್ತರಸಾಲ ಗ್ರಾಮದ ಜ್ಯೋತಿ, ಹೆರಿಗೆಗೆಂದು ತಾಂಡೂರಗೆ ಸಾರಿಗೆ ಬಸ್ ನಲ್ಲಿ ತೆರಳುತ್ತಿದ್ದಳು. ಸೇಡಂ ಸಮೀಪವಿರುವಾಗಲೇ, ತಾಯಿ ಬಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಹೆರಿಗೆ ನಂತರ ಮಾನವೀಯತೆ ಮೆರೆದ ಬಸ್ ಚಾಲಕ ಶಿವಾಜಿ ಮತ್ತು ಕಂಡಕ್ಟರ್ ಪ್ರಶಾಂತ್, ಬಸ್ ನ್ನು ನೇರವಾಗಿ ಸೇಡಂ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸಹಾಯ ಮಾಡಿದ್ದಾರೆ. ಹೀಗಾಗಿ ತಾಯಿ ಮಗು ಇಬ್ಬರೂ ಆರಾಮವಾಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಾಡಹಗಲೇ ಎಟಿಎಂ ಲೂಟಿ: 18 ಲಕ್ಷ ಹೊತ್ತೊಯ್ದ ಕಳ್ಳರು

ಹುಬ್ಬಳ್ಳಿ: ಹಾಡಹಗಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ಮಷಿನ್ ಕಟ್ ಮಾಡಿ 18 ಲಕ್ಷ ರೂ. ಹಣ ...

news

ಮಿಷನ್ 150: ವೇದಿಕೆಯಲ್ಲಿ ಸಾಲಾಗಿ ನಿದ್ದೆ ಹೊಡೆದ ಬಿಜೆಪಿ ನಾಯಕರು

ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು ನಿದ್ದೆ ರಾಮಯ್ಯ ಎಂದು ಜರಿಯುತ್ತಿದ್ದ ಬಿಜೆಪಿ ನಾಯಕರು ಇಂದು ತಾವೇ ...

news

ಕೆಪಿಸಿಸಿ ಕಚೇರಿಯಿಂದ ಎಸ್.ಎಂ. ಕೃಷ್ಣ ಫೋಟೋ ತೆಗೆದಿದ್ದಕ್ಕೆ ಗರಂ ಆದ ಪರಮೇಶ್ವರ್

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪೋಟೋ ತೆಗೆದಿದ್ದಕ್ಕೆ ...

news

ಮುಂಬೈನ ಪ್ರಸಿದ್ಧ ಆರ್.ಕೆ. ಸ್ಟುಡಿಯೋದಲ್ಲಿ ಬೆಂಕಿ

ಮುಂಬೈನ ಪ್ರಸಿದ್ಧ ಆರ್`.ಕೆ ಸ್ಟುಡಿಯೋಗೆ ಬೆಂಕಿ ಬಿದ್ದಿದೆ. ಮಧ್ಯಾಹ್ನ 2.20 ಸುಮಾರಿಗೆ ಬೆಂಕಿ ...

Widgets Magazine
Widgets Magazine