Widgets Magazine

ಬಾಯ್ಲರ್ ಸ್ಫೋಟದಿಂದ ಇಬ್ಬರು ಕಾರ್ಮಿಕರ ದಾರುಣ ಸಾವು

ವೆಬ್‌ದುನಿಯಾ| Last Modified ಮಂಗಳವಾರ, 8 ಏಪ್ರಿಲ್ 2014 (14:31 IST)
PR
PR
ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ಕೈಗಾರಿಕೆ ಪ್ರದೇಶದಲ್ಲಿ ಗ್ರಾಮೆಕ್ಸ್ ಪೇಪರ್ ಮಿಲ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. 42 ವರ್ಷದ ಚಂದ್ರಶೇಖರ್ ಮತ್ತು 26 ವರ್ಷದ ರವಿ ಎಂದು ಮೃತರನ್ನು ಗುರುತಿಸಿದ್ದು, ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಚಂದ್ರಶೇಖರ್ ಮತ್ತು ರವಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು.

ರವಿ ಮೂಲತಃ ದಾವಣಗೆರೆಯವರಾಗಿದ್ದು, ಚಂದ್ರಶೇಖರ್ ನಂಜನಗೂಡಿನವರಾಗಿದ್ದರು. ಬಾಯ್ಲರ್ ಸುಸ್ಥಿತಿಯಲ್ಲಿ ಇಲ್ಲದಿರುವುದೇ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :