ಬಿಬಿಎಂಪಿ ಅಧಿಕಾರಿಗೆ ಗುತ್ತಿಗೆದಾರನ ಬೆದರಿಕೆ ಆರೋಪ

ವೆಬ್‌ದುನಿಯಾ|
PR
PR
ಬೆಂಗಳೂರು: ಗುತ್ತಿಗೆದಾರನೊಬ್ಬ ಬಿಬಿಎಂಪಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಬಿಬಿಎಂಪಿ ಅಪರ ಆಯುಕ್ತ ಡಿ.ಕಿರಣ್ ಅವರ ಕಚೇರಿಗೆ ನುಗ್ಗಿ ಕೃಷ್ಣಮೂರ್ತಿ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ. ಬಿಬಿಎಂಪಿ ಆಯುಕ್ತ ಲಕ್ಷ್ಮಿನಾರಾಯಣ್‌ಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಬಿಬಿಎಂಪಿ ಮೇಯರ್ ಸತ್ಯನಾರಾಯಣ್ ಈ ವಿಷಯದ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲು ಹೇಳುವುದಾಗಿ ತಿಳಿಸಿದ್ದಾರೆ. ಇಂದು 12 ಗಂಟೆ ಸುಮಾರಿಗೆ ಕಾಮಗಾರಿಯ ಬಿಲ್‌ಗೆ ಸಂಬಂಧಿಸಿದ ವಿಚಾರವಾಗಿ ಕಿರಣ್‌ಗೆ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :