‘ಅಣ್ಣನ ಮಗನನ್ನೇ ಬಿಡದ ಕುಮಾರಸ್ವಾಮಿ ನಮ್ಮನ್ನು ಬಿಡ್ತಾರಾ?’

Bangalore, ಶನಿವಾರ, 8 ಜುಲೈ 2017 (09:23 IST)

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮೊಮ್ಮಗ ಕಾರ್ಯಕ್ರಮವೊಂದರಲ್ಲಿ ಪರೋಕ್ಷವಾಗಿ ಕುಮಾರ ಸ್ವಾಮಿ ವಿರುದ್ಧ ತೊಡೆ ತಟ್ಟಿದ್ದರು ಎನ್ನುವ ವರದಿಯಾಗಿತ್ತು. ಇದಕ್ಕೆ ಜೆಡಿಎಸ್ ನ ಭಿನ್ನಮತ ಶಾಸಕರು ಧ್ವನಿಗೂಡಿಸಿದ್ದಾರೆ.


 
ಕುಮಾರಸ್ವಾಮಿ ಅಣ್ಣನ ಮಗ ಮೈಸೂರು ರಾಜಕೀಯಕ್ಕೆ ಪ್ರವೇಶಿಸದಂತೆ ತಡೆದಿದ್ದರು ಎಂದು ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರಜ್ವಲ್ ರೇವಣ್ಣ ಬಹಿರಂಗವಾಗಿಯೇ ಕಿಡಿ ಕಾರಿದ್ದರು ಎಂದು ವರದಿಯಾಗಿತ್ತು. ನಂತರ ಇದನ್ನು ಪ್ರಜ್ವಲ್ ನಿರಾಕರಿಸಿದ್ದರು. ಆದರೆ ಜೆಡಿಎಸ್ ನ ಉಚ್ಛಾಟಿತ ಶಾಸಕರಾದ ಜಮೀರ್ ಅಹಮ್ಮದ್,  ಬಾಲಕೃಷ್ಣ ಪ್ರಜ್ವಲ್ ಮಾತು ನೂರಕ್ಕೆ ನೂರು ನಿಜ ಎಂದಿದ್ದಾರೆ.
 
ಕುಮಾರಸ್ವಾಮಿ ಸೂಟ್ ಕೇಸ್ ರಾಜಕೀಯ ಮಾಡುವುದರಲ್ಲಿ ಎಕ್ಸ್ ಪರ್ಟ್. ಅಣ್ಣನ ಮಗನ ಏಳಿಗೆಯನ್ನೇ ಸಹಿಸದ ಅವರು, ನಮ್ಮಂತಹವರನ್ನೆಲ್ಲಾ ಬಿಡ್ತಾರಾ? ಟಿಕೆಟ್ ಹಂಚಿಕೆ ಕುರಿತು ದೇವೇಗೌಡ ಒಂದು ರೀತಿ ಮಾತನಾಡಿದರೆ,  ಕುಮಾರಸ್ವಾಮಿ ಇನ್ನೊಂದು ರೀತಿ ಮಾತಾಡ್ತಾರೆ. ಪ್ರಜ್ವಲ್ ರೇವಣ್ಣಗೆ ನಮ್ಮ ಬೆಂಬಲವಿದೆ’ ಎಂದು ಭಿನ್ನಮತ ಶಾಸಕರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ.
 
ಇದನ್ನೂ ಓದಿ.. ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಸಾವು: ಬಂಟ್ವಾಳ ಮತ್ತೆ ಉದ್ವಿಗ್ನ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಎಚ್ ಡಿ ಕುಮಾರಸ್ವಾಮಿ ಎಚ್ ಡಿ ದೇವೇಗೌಡ ಪ್ರಜ್ವಲ್ ರೇವಣ್ಣ ಜೆಡಿಎಸ್ ರಾಜ್ಯ ಸುದ್ದಿಗಳು Jds Hd Devegowda Prajwal Revanna Hd Kumaraswamy State News

ಸುದ್ದಿಗಳು

news

ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಸಾವು: ಬಂಟ್ವಾಳ ಮತ್ತೆ ಉದ್ವಿಗ್ನ

ಮಂಗಳೂರು: ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಆರ್ ಎಸ್ಎಸ್ ಕಾರ್ಯಕರ್ತ ಶರತ್ ...

news

ಕಲ್ಲಡ್ಕ ಪ್ರಭಾಕರ್‌ಗೆ ಇವತ್ತೇ ಕೊನೆಯ ದಿನ: ಫೇಸ್‌ಬುಕ್‌ನಲ್ಲಿ ಜೀವಬೆದರಿಕೆ

ಬಂಟ್ವಾಳ: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್‌ಗೆ ಇವತ್ತೇ ಕೊನೆಯ ದಿನವಾಗಿದೆ ಎಂದು ಫೇಸ್‌ಬುಕ್‌ ...

news

ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು: ವೇಣುಗೋಪಾಲ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಪಕ್ಷದ ...

news

ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಗೆ ಖುದ್ದು ಕ್ಷಮೆಯಾಚನೆಗೆ ಸುಪ್ರೀಂ ಸೂಚನೆ

ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್‌ ಠಾಕೂರ್‌ ಬೇಷರತ್‌ ಕ್ಷಮಾಪಣೆ ಯಾಚಿಸುವಂತೆ ಸುಪ್ರೀಂಕೋರ್ಟ್‌ ...

Widgets Magazine