ಹುಡುಗಿಯರಿಗಾಗಿ ಬೈಕ್ ಖದಿಯುತ್ತಿದ್ದ ಖದೀಮರು ಅಂದರ್

ಕಲಬುರಗಿ, ಶನಿವಾರ, 15 ಏಪ್ರಿಲ್ 2017 (19:10 IST)

Widgets Magazine

ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಡೈಲಾಗ್ ಹೊಡೆಯುವವರನ್ನ ನೋಡೇ ಇರುತ್ತೀರಿ. ಆದರೆ, ಇಲ್ಲಿ ಈ ಹುಡುಗರು ಮಾಡಿರೋದನ್ನ ಕೇಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳುತ್ತಿರಿ. ಹೌದು, ಕಲಬುರಗಿಯ ಇಬ್ಬರು ಯುವಕರು ಹುಡುಗಿಯರಿಗಾಗಿ ಬೈಕ್`ಗಳನ್ನ ಕದಿಯುವ ದಾರಿ ಹಿಡಿದಿದ್ದರು.ಇದೀಗ, ಸಿಕ್ಕಿಬಿದ್ದು ಕಂಬಿ ಎಣಿಸುತ್ತಿದ್ದಾರೆ.


ಬಂಧಿತರನ್ನ ರಾಕೇಶ್ ಮತ್ತು ಸೋಮನಾಥ ಎಂದುಗುರ್ತಿಸಲಾಗಿದೆ. ಡಿಯೋ ಬೈಕ್`ಗಳನ್ನ ಮಾತ್ರ ಕದಿಯುತ್ತಿದ್ದ ಿವರು ತಮ್ಮ ಹುಡುಗಿಯರಿಗೆ ಉಡುಗೊರೆಯಾಗಿ ಕೊಡುತ್ತಿದ್ದರು. ಅದೃಷ್ಟವಶಾತ್ ಹುಡುಗಿಯರರ್ಯಾರು ಸಿಕ್ಕಿ ಬೀಳಲಿಲ್ಲ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಕಳ್ಲತನ ದೃಶ್ಯದ ಜಾಡು ಹಿಡಿದ ಆರ್.ಜೆ. ನಗರ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಬಂಧಿತರಿಂದ 4 ಡಿಯೋ ಬೈಕ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಖದೀಮನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಳ್ಳರಿಂದ ಬೈಕ್ ಉಡುಗೊರೆಯಾಗಿ ಪಡೆದ ಹುಡುಗಿಯರೂ ಸಿಲುಕಿಕೊಳ್ಳುವ ಸಾಧ್ಯತೆ ಇದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಲೀಕಳ ಜೀವ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ..!

ನಾಯಿ ನಂಬಿಕಸ್ಥ ಪ್ರಾಣಿ. ತುತ್ತು ಅನ್ನ ಹಾಕಿದ ಮಾಲೀಕನ ರಕ್ಷಣೆಗೆ ಯಾವುದೇ ಹಂತದಲ್ಲೂ ಸಿದ್ಧವಿರುತ್ತದೆ ...

news

ಮಟ್ರೋ ನಿಲ್ದಾಣದ ಬಿಗ್ ಸ್ಕ್ರೀನ್`ನಲ್ಲಿ ಸೆಕ್ಸ್ ವಿಡಿಯೋ ಪ್ರಸಾರ.. ಬೆಚ್ಚಿಬಿದ್ದ ಪ್ರಯಾಣಿಕರು

ದೆಹಲಿಯ ರಾಜೀವ್ ಚೌಕ್ ಮೆಟ್ರೋ ಸ್ಟೇಶನ್`ನಲ್ಲಿ ಪೋರ್ನ್ ವಿಡಿಯೋ ಪ್ರಸಾರವಾದ ಬಗ್ಗೆ ಸೋಶಿಯಲ್ ...

news

ಬೆಳಗಾವಿಯ 8 ವಿದ್ಯಾರ್ಥಿಗಳು ವೈರಿ ಬೀಚ್`ನಲ್ಲಿ ನೀರು ಪಾಲು

ಬೀಚ್`ನಲ್ಲಿ ಈಜಲು ತೆರಳಿದ್ದ ಬೆಳಗಾವಿಯ ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ವೈರ್ ...

news

ರಾಹುಲ್ ಗಾಂಧಿ ಭೇಟಿಯಾದ ಸಿಎಂ ಸಿದ್ದರಾಮಯ್ಯ

ಉಪಚುನಾವಣೆಯ ಗೆಲುವಿನ ಬಳಿಕ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ದಿಲ್ಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...