ಗೌರಿ ಲಂಕೇಶ್ ಹತ್ಯೆ ಪ್ರಕರಣ: ಇಬ್ಬರು ಶಂಕಿತರ ಬಂಧನ, ವಿಚಾರಣೆ

ಬೆಂಗಳೂರು, ಸೋಮವಾರ, 25 ಸೆಪ್ಟಂಬರ್ 2017 (12:59 IST)

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್`ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಹಲವು ತಂಡಗಳಲ್ಲಿ ತನಿಖೆ ನಡೆಯುತ್ತಿದ್ದು, ಇಬ್ಬರು ಶಂಕಿತರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.


ಹೌದು, ಸಿಸಿಟಿವಿ ದೃಶ್ಯ ಆಧರಿಸಿ ಗೌರಿ ಲಂಕೇಶ್ ಹತ್ಯೆಯಾದ ಆಸುಪಾಸಿನಲ್ಲಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡಿದ್ದ ವ್ಯಕ್ತಿಗಳಿವರು ಎನ್ನಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.  ಇತ್ತೀಚೆಗಷ್ಟೇ ರಾಜರಾಜೇಶ್ವರಿ ನಗರದಲ್ಲಿ ತೀವ್ರ ಶೋಧ ಕೈಗೊಂಡಿದ್ದ ಎಸ್`ಐಟಿ ಅಧಿಕಾರಿಗಳು ಶಂಕಿತರು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕೊಡುವಂತೆ ಕರ ಪತ್ರಗಳನ್ನ ಮುದ್ದರಿಸಿ ಮನೆ ಮನೆಗೆ ಹಂಚಿದ್ದರು.

ಹಂತಕರನ್ನ ಪತ್ತೆ ಮಾಡುವ ದೃಷ್ಟಿಯಿಂದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ. ಅನುಮಾನ ಬಂದವರನ್ನೆಲ್ಲ ವಿಚಾರಣೆಗೆ ಒಳಪಡಿಸುತ್ತಿದೆ. ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಯಾರ್ಯಾರ ಮೇಲೆ ಲೇಖನ ಪ್ರಕಟಿಸಿದ್ದರೋ ಅವರನ್ನೂ ಅನುಮಾನದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತಿಯನ್ನು ದುಷ್ಟಶಕ್ತಿಯಿಂದ ರಕ್ಷಿಸುವ ನೆಪದಲ್ಲಿ ನವವಧುವಿನ ಮೇಲೆ ರೇಪ್

ಲಕ್ನೋ: ಪತಿಯನ್ನು ದುಷ್ಟಶಕ್ತಿಯಿಂದ ರಕ್ಷಿಸಿ ಸಾವಿನಿಂದ ಕಾಪಾಡುವ ನೆಪದಲ್ಲಿ ಪ್ರಥಮ ರಾತ್ರಿಯಂದು ...

news

ಚಾಮುಂಡಿ ತಾಯಿಗೆ ಬೆಳ್ಳಿ ಆನೆಗಳನ್ನ ಸಮರ್ಪಿಸಿದ ಡಿ.ಕೆ. ಶಿವಕುಮಾರ್

ಸಚಿವ ಡಿ.ಕೆ. ಶಿವಕುಮಾರ್ ಶರನ್ನವರಾತ್ರಿ ಪ್ರಯುಕ್ತ ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ...

news

ತಿರುಪತಿ ತಿಮ್ಮಪ್ಪನಿಗೆ 10008 ಬಂಗಾರದ ನಾಣ್ಯಗಳ ಹಾರ ಸಮರ್ಪಿಸಿದ ಭಕ್ತ

ದೇಶದ ಅತ್ಯಂತ ಶ್ರೀಮಂತ ದೈವ ತಿರುಪತಿ ತಿಮ್ಮಪ್ಪನಿಗೆ ಅನಿವಾಸಿ ಭಾರತೀಯನೊಬ್ಬ ಬಂಗಾರದ ನಾಣ್ಯಗಳ ಹಾರವನ್ನ ...

news

ಹರಕೆ ತೀರಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಡಿಕೆಶಿ

ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ಕುಟುಂಬ ...

Widgets Magazine
Widgets Magazine