ಎಟಿಎಂನಲ್ಲಿ 2 ಸಾವಿರ ರೂ. ಮುಖಬೆಲೆ ನಕಲಿ ನೋಟು ಪತ್ತೆ

ಬೆಂಗಳೂರು, ಮಂಗಳವಾರ, 31 ಅಕ್ಟೋಬರ್ 2017 (10:40 IST)

ಬೆಂಗಳೂರು: ಲಕ್ಕಸಂದ್ರದ ಸಮೀಪದಲ್ಲಿರುವ ಎಕ್ಸಿಸ್ ಬ್ಯಾಂಕ್ ಶಾಖೆಯ ಎಟಿಎಂನಲ್ಲಿ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು ಪತ್ತೆಯಾಗಿದೆ.


ಲಕ್ಕಸಂದ್ರದ ಎರಡನೇ ಕ್ರಾಸ್‍ನಲ್ಲಿರುವ ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ದಯಾನಂದ್ ರೆಡ್ಡಿ ಎಂಬವರು 6 ಸಾವಿರ ರೂ. ಡ್ರಾ ಮಾಡಿದ್ದಾರೆ. ನಂತರ ಪೆಟ್ರೋಲ್ ಹಾಕಿಸಲು ಬಂಕ್ ಗೆ ಹೋದಾಗ ಅಲ್ಲಿ ಖೋಟಾನೋಟು ಎಂಬುದು ಗೊತ್ತಾಗಿದೆ. ಈ ನೋಟಿನ ಮೇಲೆ ನಂಬರ್ ಇರುವ ಜಾಗದಲ್ಲಿ `ದಿಸ್ ಈಸ್ ಶೂಟಿಂಗ್ ಪರ್ಪಸ್ ಓನ್ಲಿ’ ಎಂದು ಪ್ರಿಂಟ್ ಆಗಿದೆ.

ಕೂಡಲೇ ದಯಾನಂದ್ ನಕಲಿ ನೋಟು ಹಿಡಿದು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದು, ಆದರೆ ಪೊಲೀಸರು ಒಂದೇ ನೋಟು ಪತ್ತೆಯಾಗಿರೋದು ಎಂಬ ಕಾರಣಕ್ಕೆ ಕೇಸ್ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಇತ್ತ ಬ್ಯಾಂಕ್ ಸಿಬ್ಬಂದಿಯನ್ನು ಕೇಳಲು ಹೋದ್ರೆ ಆಕಡೆಯಿಂದಲೂ ಸರಿಯಾಗಿ ಪ್ರತಿಕ್ರಿಯೆ ಬಂದಿಲ್ಲ ಎಂದು ದಯಾನಂದ್ ಆರೋಪಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೆಕ್ಸ್ ಮಾಡಲೊಪ್ಪದ ಪತ್ನಿಗೆ ಈತ ನೀಡಿದ ಶಿಕ್ಷೆಯೇನು ಗೊತ್ತಾ?

ನವದೆಹಲಿ: ಸೆಕ್ಸ್ ಮಾಡಲು ಸಮ್ಮತಿಸದ ಪತ್ನಿಗೆ ಪತಿ ಮಹಾಶಯ ಆಸಿಡ್ ಎರಚಿದ ಪ್ರಕರಣ ಉತ್ತರ ಪ್ರದೇಶದಲ್ಲಿ ...

news

‘ಜನ ಈಗ ಏನಿದ್ದರೂ ರಾಹುಲ್ ಗಾಂಧಿ ಮಾತೇ ಕೇಳೋದು’

ಮುಂಬೈ: ಮತ್ತೊಮ್ಮೆ ಶಿವಸೇನೆ ಬಿಜೆಪಿ ವಿರುದ್ಧ ಗುಟುರು ಹಾಕಿದೆ. ಬಿಜೆಪಿ ತನ್ನ ಪ್ರಥಮ ಶತ್ರು ಎಂದಿರುವ ...

news

ಸಿಎಂ ಸಿದ್ದು-ಪಿಎಂ ಮೋದಿ ಟ್ವಿಟರ್ ನಲ್ಲಿ ಕೋಳಿ ಜಗಳ

ನವದೆಹಲಿ: ರಾಜ್ಯಕ್ಕೆ ಒಂದು ದಿನದ ಭೇಟಿಗೆ ಬಂದು ಹೋದ ನಂತರ ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಕರ್ನಾಟಕದ ...

news

‘ಮೀನು ಜತೆ ಕೋಳಿ ಮಾಂಸವೂ ತಿಂದು ಧರ್ಮಸ್ಥಳಕ್ಕೆ ಹೋಗಿದ್ದೆ. ಏನಿವಾಗ?’

ಬೆಂಗಳೂರು: ಪ್ರಧಾನಿ ಮೋದಿ ನಿರಾಹಾರದಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಂತರ ಸಿಎಂ ಸಿದ್ದರಾಮಯ್ಯ ಮೀನಿನೂಟ ...

Widgets Magazine
Widgets Magazine