Widgets Magazine
Widgets Magazine

ಮಾಜಿ ಶಾಸಕನಿಗೆ ಸೇರಿದ ವಸತಿಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳ ಸಾವು

ತುಮಕೂರು, ಗುರುವಾರ, 9 ಮಾರ್ಚ್ 2017 (08:04 IST)

Widgets Magazine

ಕಿರಣ್ ಕುಮಾರ್ ಅವರಿಗೆ ಸೇರಿರುವ ತುಮಕೂರಿನ ಚಿಕ್ಕನಾಯಕನಹಳ್ಳಿ ಹುಳಿಯಾರ್‌ನಲ್ಲಿರುವ ವಿದ್ಯಾವಾರಿಧಿ ಅಂತರಾಷ್ಟ್ರೀಯ ಶಾಲೆಯ ವಸತಿ ನಿಲಯದಲ್ಲಿ ನಿನ್ನೆ ತಡರಾತ್ರಿ ಮೂವರು ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಶಾಂತಮೂರ್ತಿ, ಶ್ರೇಯಸ್, ಆಕಾಂಕ್ಷ ಪಲ್ಲಕ್ಕಿ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಮೃತರಲ್ಲಿ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬ 8ನೇ ತರಗತಿ ಓದುತ್ತಿದ್ದ.

ಇನ್ನೊಬ್ಬ ವಿದ್ಯಾರ್ಥಿ ಸುದರ್ಶನ್ ಮತ್ತು ಭದ್ರತಾ ಸಿಬ್ಬಂದಿಯಾಗಿರುವ ರಮೇಶ್ ಎನ್ನುವವರು ಸಹ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದರೆ, ರಮೇಶ್ ಸ್ಥಿತಿ ಚಿಂತಾಜನಕವಾಗಿ ಎನ್ನಲಾಗುತ್ತಿದೆ. 

ಈ ನಾಲ್ವರು ಮಕ್ಕಳು ಮೊದಲೇ ಅನ್ನಸಾಂಬಾರ್ ಸೇವಿಸಿದ್ದು, ಊಟ ಕಹಿಯಾಗಿದೆ ಎಂದು ಹೇಳಿದ್ದರಿಂದ ಉಳಿದ ಮಕ್ಕಳು ಅನ್ನಸಾಂಬಾರ್ ಸೇವಿಸದೇ ಕೇವಲ ಚಪಾತಿ ಪಲ್ಯ ತಿಂದಿದ್ದರಿಂದ ಆಗಲಿದ್ದ ಮತ್ತೂ ದೊಡ್ಡ ಅನಾಹುತ ತಪ್ಪಿದೆ.
 
ಯಾವ ಕಾರಣದಿಂದ ಈ ಅಚಾತುರ್ಯ ನಡೆಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕರು,  ಯಾರೋ ಹೊರಗಿನವರು ಬಂದು ಊಟದಲ್ಲಿ ವಿಷ ಬೆರೆಸಿರಬಹುದು ಎಂಬ ಅನುಮಾನವಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ ಎಂದಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಡಿಎ ಆಯುಕ್ತ ರಾಜಕುಮಾರ್ ಖತ್ರಿ ಎತ್ತಂಗಡಿ

ಬೆಂಗಳೂರು: ಬಿಡಿಎ ಆಯುಕ್ತರಾಗಿದ್ದ ರಾಜಕುಮಾರ್ ಖತ್ರಿಯವರನ್ನು ಎತ್ತಂಗಡಿ ಮಾಡಿ ಕ್ರೀಡಾ ಮತ್ತು ಯುವಜನ ...

news

ಉತ್ತರಪ್ರದೇಶದಲ್ಲಿ ಅಖಿಲೇಶ್, ಮಾಯಾವತಿ ಸರಕಾರ?

ನವದೆಹಲಿ: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ...

news

ರಾಜನಾಥ್ ಮೆಚ್ಚುಗೆಗೆ ಉಗ್ರನ ತಂದೆಯ ಧನ್ಯವಾದ

ತನ್ನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಕೇಂದ್ರ ಗೃಹ ಸಚಿವರಿಗೆ ಉಗ್ರ ಸೈಫುಲ್ಲಾ ತಂದೆ ಸರ್ತಾಜ್ ...

news

ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷ ಸರಕಾರ ರಚಿಸುತ್ತೆ ಗೊತ್ತಾ?

ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶಕ್ಕಾಗಿ ದೇಶದ ಜನತೆ ನಿರೀಕ್ಷಿಸುತ್ತಿದ್ದಾರೆ. ಸಮೀಕ್ಷೆಯ ...

Widgets Magazine Widgets Magazine Widgets Magazine