ಐದು ನಿಮಿಷದ ಸೆಕ್ಸ್‌... 85 ಲಕ್ಷ ಲಾಸ್....!

ಬೆಂಗಳೂರು, ಶುಕ್ರವಾರ, 3 ನವೆಂಬರ್ 2017 (16:24 IST)

ಜಂಗಮ ಮಠದ ದಯಾನಂದ ಸ್ವಾಮಿಜಿ ರಾಸಲೀಲೆಯಿಂದಾಗಿ ಐದು ನಿಮಿಷದ ಸೆಕ್ಸ್‌ಗೆ 85 ಲಕ್ಷ ರೂಪಾಯಿ ಕಳೆದುಕೊಂಡು ಹಿನ್ನಲೆ ಬಹಿರಂಗವಾಗಿದೆ.
ಕಳೆದ 2014ರಲ್ಲಿ ರಾಸಲೀಲೆಯ ವಿಡಿಯೋ ಮಾಡಿಕೊಂಡು ಮಹೇಶ, ಹಿಮಾಚಲ, ಶಂಕರ್, ಸೂರ್ಯ, ಧರ್ಮೇಂದ್ರ ಎನ್ನುವವರು ನನ್ನ ಬಳಿ 85 ಲಕ್ಷ ರೂಪಾಯಿ ಹಣ ತೆಗೆದುಕೊಂಡಿದ್ದಾರೆ ಎಂದು ದಯಾನಂದ ಸ್ವಾಮಿ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
 
ಆರಂಭದಲ್ಲಿ ವಿಡಿಯೋ ಇಂಟರ್‌ನೆಟ್‍ನಲ್ಲಿ ಬಿಡುಗಡೆಗೊಳಿಸುವುದಾಗಿ ಬೆದರಿಸಿ ಐದು ಕೋಟಿ ರೂಪಾಯಿ ಹಣ ನೀಡುವಂತೆ ನನ್ನ ಬಳಿ ಇವರು ಡೀಲ್ ಇಟ್ಟಿದ್ದರು. ಆದರೆ, ಐದು ಕೋಟಿ ಕೊಡಲು ಸಾಧ್ಯವಿಲ್ಲವೆಂದಾಗ ಎರಡು ಕೋಟಿ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದರು ಎಂದು ತಿಳಿಸಿದ್ದಾರೆ.
 
ಕೊನೆಗೆ ನಾನು 45 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಒಪ್ಪಿಕೊಂಡೆ. ನಂತರ ಅವರಿಗೆ 45 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದೆ. ಆದರೆ, ಪದೇ ಪದೇ ಹಣಕ್ಕಾಗಿ ಒತ್ತಾಯಿಸಿದಾಗ ಇನ್ನೂ 40 ಲಕ್ಷ ರೂಪಾಯಿಗಳನ್ನು ನೀಡಿದ್ದೆ. ಒಟ್ಟು 85 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
 
ಮಹೇಶ, ಹಿಮಾಚಲ, ಶಂಕರ್, ಸೂರ್ಯ, ಧರ್ಮೇಂದ್ರ ಇವರ ಕಿರುಕುಳ ತಾಳದೆ ವಿಷಸೇವಿಸಿದೆ. ನನಗೆ ತುಂಬಾ ತೊಂದರೆ ಕೊಟ್ಟು ಇದೀಗ ನನ್ನ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಜಂಗಮ ಮಠದ ದಯಾನಂದ ಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

19 ವರ್ಷದ ವಿದ್ಯಾರ್ಥಿನಿಯ ಮೇಲೆ ಸತತ 3 ಗಂಟೆಗಳ ಕಾಲ ಗ್ಯಾಂಗ್‌ರೇಪ್

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಕಾಮುಕರು ಸತತ ಮೂರು ಗಂಟೆಗಳ ಕಾಲ ...

news

ಚೆನ್ನೈನಲ್ಲಿ ಭಾರೀ ಮಳೆ ಅವಾಂತರ: ಇಂದೂ ಸಹ ಭಾರೀ ಮಳೆ ಸಾಧ್ಯತೆ

ಚೆನ್ನೈ: ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚೆನ್ನೈ ಹಾಗೂ ತಮಿಳುನಾಡಿನ ಕರಾವಳಿ ಭಾಗದ ಹಲವೆಡೆ ಇಂದೂ ಸಹ ...

news

ಜೆಡಿಎಸ್‌ನಿಂದ ಕರ್ನಾಟಕ ವಿಕಾಸ ರಥಯಾತ್ರೆ: ಕುಮಾರಸ್ವಾಮಿ

ಬೆಂಗಳೂರು: ಮುಂಬರುವ ನವೆಂಬರ್ 7 ರಿಂದ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತಿದ್ದು, ...

news

ಅಪೋಲೊ ಆಸ್ಪತ್ರೆಯಲ್ಲಿ ನಟಿ ಖುಷ್ಬೂಗೆ ಶಸ್ತ್ರಚಿಕಿತ್ಸೆ

ಚೆನ್ನೈ: ಖ್ಯಾತ ಚಿತ್ರ ನಟಿ ಖುಷ್ಬೂ ಸುಂದರ್ ಇಲ್ಲಿನ ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ...

Widgets Magazine
Widgets Magazine