70 ವರ್ಷವಾದ್ರೂ ಸಿಎಂ ಆಗೋಕೆ ಓಡಾಡುತ್ತಿದ್ದಾರೆ: ಬಿಎಸ್‌ವೈಗೆ ಸಿಎಂ ಲೇವಡಿ

ಲಿಂಗಸಗೂರು, ಗುರುವಾರ, 13 ಜುಲೈ 2017 (19:10 IST)

Widgets Magazine

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ 70 ವರ್ಷ ವಯಸ್ಸಾಗಿದೆ. ಇನ್ನೂ ಮುಖ್ಯಮಂತ್ರಿಯಾಗೋಕೆ ಓಡಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
 
ರಾಯಚೂರು ಜಿಲ್ಲೆಯ ಲಿಂಗಸೂಗುರು ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸರಕಾರ ನುಡಿದಂತೆ ನಡೆದಿದೆ. ಆದ್ದರಿಂದ, ಮತ್ತೊಮ್ಮೆ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು. 
 
ಯಡಿಯೂರಪ್ಪ ಸಿಎಂ ಆಗೋಕೆ ಅವರಪ್ಪನಾಣೆಗೂ ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿ ತೇಲಾಡುವುದು ಬಿಡುವುದು ಒಳಿತು ಎಂದು ಲೇವಡಿ ಮಾಡಿದ್ದಾರೆ. 
 
ಯಡಿಯೂರಪ್ಪ ಮಾತೆತ್ತಿದರೆ ಸೀರೆ ಕೊಟ್ಟೆ, ಸೈಕಲ್ ಕೊಟ್ಟೆ ಅಂತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡದೇ ಜೈಲಿಗೆ ಹೋಗುವುದರಲ್ಲಿಯೇ ಬಿಜೆಪಿ ನಾಯಕರು ಅಧಿಕಾರವಧಿ ಕಾಲ ಕಳೆದಿದ್ದಾರೆ ಎಂದು ತಿರುಗೇಟು ನೀಡಿದರು.
 
ಬರಗಾಲದ ಬಗ್ಗೆ ಚರ್ಚೆಯ ವೇಳೆಯಲ್ಲಿ ಬಿಜೆಪಿಯ ಮೂವರು ನಾಯಕರು ಸದನದಲ್ಲಿ ಬ್ಲ್ಯೂಫಿಲ್ಮ್ ನೋಡುತ್ತಿರುವುದನ್ನು ರಾಜ್ಯದ ಜನತೆ ಮರೆತಿಲ್ಲ. ಅಸಭ್ಯ ಭಾಷೆ ಬಳಸುವ ಬಿಜೆಪಿಯವರಿಗೆ ಸಂಸ್ಕ್ರತಿಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಬಿಜೆಪಿ Bsy Congress Bjp Cm Siddaramaiah

Widgets Magazine

ಸುದ್ದಿಗಳು

news

ನಮ್ಮ ಕಾರ್ಯಕರ್ತರನ್ನು ಮುಟ್ಟಿದ್ರೆ ಹುಷಾರ್: ಎಸ್‌ಪಿಗೆ ಕರಂದ್ಲಾಜೆ ವಾರ್ನಿಂಗ್

ಉಡುಪಿ: ಬಿಜೆಪಿಯ ನಮ್ಮ ಕಾರ್ಯಕರ್ತರನ್ನು ಮುಟ್ಟಿದ್ರೆ ಹುಷಾರ್ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ...

news

ಯಡಿಯೂರಪ್ಪಗೆ ಬಹಿರಂಗ ಸವಾಲು ಹಾಕಿದ ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರದ ಇದುವರೆಗಿನ ಅಭಿವೃದ್ಧಿ ವಿಷಯದ ಚರ್ಚೆಗೆ ಮಾಜಿ ಸಿಎಂ ಯಡಿಯೂರಪ್ಪಗೆ ಸಿಎಂ ಸಿದ್ದರಾಮಯ್ಯ ...

news

ಗಂಗಾ ನದಿಯಲ್ಲಿ ಕಸ ಹಾಕಿದರೆ 50 ಸಾವಿರ ದಂಡ: ಎನ್ ಜಿಟಿ ಆದೇಶ

ಹಿಂದೂಗಳ ಪವಿತ್ರ ಗಂಗಾ ನದಿಯಲ್ಲಿ ಕಸ ಹಾಕುವವರಿಗೆ 50,000 ರೂಪಾಯಿ ದಂಡ ವಿಧಿಸುವಂತೆ ರಾಷ್ಟ್ರೀಯ ಹಸಿರು ...

news

ಮಂಗಳೂರು ಗಲಭೆ: ಶಾಂತಿ ಸಭೆ ಬಹಿಷ್ಕರಿಸಿದ ಬಿಜೆಪಿ, ಜೆಡಿಎಸ್

ಮಂಗಳೂರು: ಜಿಲ್ಲಾಡಳಿತದ ಶಾಂತಿ ಸಭೆ ಆರಂಭವಾಗಿದ್ದು, ಸಭೆಗೆ ಹಿಂದು ಪರ ಸಂಘಟನೆಗಳ ಮುಖಂಡರು, ಬಿಜೆಪಿ, ...

Widgets Magazine